ವನ್ಯಜೀವಿಗಳ ಹೊಂದಾಣಿಕೆ ಪಾಠ – ಆನೆಗಳಿಗೆ ದಾರಿ ಬಿಟ್ಟುಕೊಟ್ಟ ಹುಲಿ

ವನ್ಯಜೀವಿಗಳ ಹೊಂದಾಣಿಕೆ ಪಾಠ – ಆನೆಗಳಿಗೆ ದಾರಿ ಬಿಟ್ಟುಕೊಟ್ಟ ಹುಲಿ

ಸಾಮಾನ್ಯವಾಗಿ ಹುಲಿಗಳು ಯಾವ ಪ್ರಾಣಿಗಳಿಗೂ ಹೆದರುವುದಿಲ್ಲ. ತಮ್ಮ ಕಣ್ಣ ಮುಂದೆ ಬರುವ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತವೆ. ಆದ್ರೆ ಇದಕ್ಕೆ ತದ್ವಿರುದ್ಧ ಎಂಬಂತೆ ಹುಲಿಯೊಂದು ಆನೆಗಳ ಹಿಂಡೊಂದು ಬರುತ್ತಿರುವುದನ್ನು ಕಂಡು ಅವುಗಳಿಗೆ ಏನು ಮಾಡದೇ ದಾರಿ ಬಿಟ್ಟುಕೊಟ್ಟಿದೆ. ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಮೊದಲ ಬಾರಿಗೆ ಸಿಂಹದ ಮರಿಗಳನ್ನು ಕಂಡ ಚಿಂಪಾಂಜಿ ಮಾಡಿದ್ದೇನು ಗೊತ್ತಾ?

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಂತ ನಂದಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ವನ್ಯ ಜೀವಿಗಳ ಕುತೂಹಲಕಾರಿ ದೃಶ್ಯಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ವಿಜೇತಾ ಸಿಂಹಾ ಎಂಬುವವರು ಸೆರೆ ಹಿಡಿದಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹುಲಿಯೊಂದು ಕಾಡಿನಲ್ಲಿ ರಾಜಗಾಂಭೀರ್ಯದಿಂದ ಕಾಡಿನ ರಸ್ತೆ ಮಧ್ಯೆ ಹೋಗುತ್ತಿರುತ್ತದೆ. ಈ ವೇಳೆ ಆನೆಗಳ ಹಿಂಡೊಂದು ಬರುತ್ತದೆ. ಅದನ್ನು ಗಮನಿಸಿದ ಹುಲಿ ಪೊದೆಗಳ ಮಧ್ಯೆ ಅವಿತುಕೊಂಡು, ಆನೆಗಳಿಗೆ ದಾರಿ ಮಾಡಿಕೊಟ್ಟಿದೆ.

‘ಪ್ರಾಣಿಗಳು ಹೇಗೆ ಸಂವಹನ ನಡೆಸುತ್ತವೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತವೆ. ಹುಲಿಯು ಆನೆಗಳು ಬರುತ್ತಿರುವ ವಾಸನೆ ತಿಳಿದು ಅವುಗಳ ಹಿಂಡಿಗೆ ದಾರಿ ಮಾಡಿಕೊಡುತ್ತದೆ’ ಎಂದು ಸುಸಂತ ನಂದಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ವೈರಲ್ ಆದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ‘ಹುಲಿಯು ಪ್ರಬಲವಾದ ಪ್ರಾಣಿಗಳಿಗೆ ಸರಿಯಾದ ಗೌರವವನ್ನು ನೀಡುತ್ತದೆ’ ಎಂದು ಒಬ್ಬರು ಹೇಳಿದ್ರೆ ಇನ್ನೊಬ್ಬರು, ‘ಎಂತಹ ಸುಂದರ ದೃಶ್ಯ. ಹುಲಿ ಆನೆಗಳ ಹಿಂಡಿಗೆ ಹೇಗೆ ದಾರಿ ಮಾಡಿಕೊಟ್ಟಿರೋದು ಇಷ್ಟವಾಯಿತು’ ಎಂದು ಹೇಳಿದ್ದಾರೆ.

suddiyaana