ಯುವತಿಯೊಂದಿಗೆ ಕರಡಿ ಸ್ಕಿಪ್ಪಿಂಗ್‌! –  ಹಗ್ಗ ಜಿಗಿದು ಜಾಣತನ ತೋರಿದ ಜಾಂಬವಂತ

ಯುವತಿಯೊಂದಿಗೆ ಕರಡಿ ಸ್ಕಿಪ್ಪಿಂಗ್‌! –  ಹಗ್ಗ ಜಿಗಿದು ಜಾಣತನ ತೋರಿದ ಜಾಂಬವಂತ

ಕೆಲವರಿಗೆ ಪ್ರಾಣಿಗಳಂದ್ರೆ ತುಂಬಾ ಇಷ್ಟ. ಹೀಗಾಗಿ ಮನೆಯಲ್ಲಿ ನಾಯಿ, ಬೆಕ್ಕುಗಳನ್ನು ಸಾಕುತ್ತಾರೆ. ಇನ್ನು ಕೆಲವು ಪ್ರಾಣಿಗಳು ಇಷ್ಟ ಆದ್ರೂ ಅವುಗಳನ್ನು ಮನೆಗೆ ತಂದು ಸಾಕುವಂತಿಲ್ಲ. ಹೀಗಾಗಿ ಮೃಗಾಲಯದಲ್ಲಿ, ಫೋಟೋಗಳಲ್ಲಿ ನೋಡಿ ಖುಷಿಪಡಬೇಕು ಅಷ್ಟೇ. ಇನ್ನು ಕರಡಿಗಳು ತುಂಬಾ ಅಪಾಯಕಾರಿ ಜೀವಿಗಳು ಎಂಬುದು ಎಲ್ಲರಿಗೂ ಗೊತ್ತಿದೆ. ಅವುಗಳು ಮನುಷ್ಯನ ಮೇಲೆ ದಾಳಿ ಮಾಡುತ್ತವೆ. ಹೀಗಾಗಿ ಅವುಗಳ ಹತ್ರ ಯಾರೂ ಹೋಗುವುದಿಲ್ಲ. ಆದ್ರೆ ಇಲ್ಲೊಬ್ಬಳು ಕರಡಿ ಸ್ಕಿಪ್ಪಿಂಗ್‌ ಮಾಡಿದ್ದಾಳೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಇದನ್ನೂ ಓದಿ: ಮದುವೆಗೆ ನಾಲ್ಕು ದಿನವಿರುವಾಗಲೇ ವರನಿಗೆ ಡೆಂಘೀ ಜ್ವರ – ಆಸ್ಪತ್ರೆಯಲ್ಲೇ ಮದುವೆಯಾದ ಜೋಡಿ!

ಕರಡಿಗಳು ತುಂಬಾ ಅಪಾಯಕಾರಿ ಪ್ರಾಣಿ. ಮನುಷ್ಯನನ್ನು ಕಂಡ ಕೂಡಲೇ ಅಟ್ಯಾಕ್‌ ಮಾಡಿ ಬಿಡುತ್ತವೆ. ಆದರೆ, ಇಂತಹ ಅಪಾಯಕಾರಿ ಜೀವಿಗಳು ಒಮ್ಮೊಮ್ಮೆ ಮನುಷ್ಯರೊಂದಿಗೂ ಆತ್ಮೀಯ ಬಂಧ ಹೊಂದಿರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ವೈರಲ್‌ ಆಗಿರುವ ಈ ದೃಶ್ಯ. ಇಲ್ಲೊಂದು ಕರಡಿ ಯುವತಿಯೊಂದಿಗೆ ಸ್ಕಿಪ್ಪಿಂಗ್ ಮಾಡುತ್ತಿದೆ. ಇಂತಹ ಬೆರಗುಗೊಳಿಸುವ ದೃಶ್ಯವನ್ನು ಇನ್‌ಸ್ಟಾಗ್ರಾಂ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿದೆ. ಸಹಜವಾಗಿಯೇ ಈ ವಿಡಿಯೋ ಪ್ರಾಣಿ ಪ್ರಿಯರನ್ನು ಆಸಕ್ತಿಯಿಂದ ನೋಡುವಂತೆ ಮಾಡಿದೆ.

bear_ig.fans ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮೃಗಾಲಯದಲ್ಲಿ ಕರಡಿಯೊಂದು ತನ್ನ ಪಾಲಕಿಯೊಂದಿಗೆ ಸ್ಕಿಪ್ಪಿಂಗ್‌ ಮಾಡುವ ದೃಶ್ಯ ಪೋಸ್ಟ್‌ ಮಾಡಲಾಗಿದೆ. ಈ ವಿಡಿಯೋ ಭಾರಿ ವೈರಲ್‌ ಆಗಿದೆ. ಈ ಸಣ್ಣ ಕ್ಲಿಪ್‌ನಲ್ಲಿ ಕರಡಿ ಸ್ಕಿಪ್ಪಿಂಗ್ ಮಾಡುವುದನ್ನು ನೋಡಬಹುದು. ಮೃಗಾಲಯದ ಪ್ರಾಣಿ ಪಾಲಕಿ ಹಗ್ಗವನ್ನು ತಿರುಗಿಸುತ್ತಿದ್ದರೆ ಕರಡಿ ಅದಕ್ಕೆ ಸರಿಯಾಗಿ ಜಂಪ್ ಮಾಡುವುದೂ ಇಲ್ಲಿ ಕಾಣುತ್ತದೆ. ಈ ದೃಶ್ಯವೇ ಖುಷಿ ಮೂಡಿಸುತ್ತದೆ.

 

View this post on Instagram

 

A post shared by Bear 🐻 (@bear_ig.fans)

ನಿರೀಕ್ಷೆಯಂತೆಯೇ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಪ್ರಾಣಿ ಪ್ರಿಯರು ಬಲು ಆಸಕ್ತಿಯಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಜೊತೆಗೆ ಹಲವರು ಈ ವಿಡಿಯೋ ಬಗ್ಗೆ ಕಮೆಂಟ್ ಮಾಡಿದರೆ, ಇನ್ನೊಂದಷ್ಟು ಮಂದಿ ಎಮೋಜಿಗಳ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ. ಕೆಲವರು ತಮಾಷೆಯ ದಾಟಿಯಲ್ಲಿಯೂ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು ಕರಡಿ ತೂಕ ಇಳಿಸಲು ಪ್ರಯತ್ನಿಸುತ್ತಿದೆ ಎಂದು ಬರೆದುಕೊಂಡರೆ, ಇನ್ನೊಬ್ಬರು ಕರಡಿ ಆಡಲು ಬಯಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬರು ಮನುಷ್ಯರು ಹಾಗೂ ಕರಡಿಯ ಇಂತಹ ಸ್ನೇಹವನ್ನು ನೋಡಲು ಖುಷಿಯಾಗುತ್ತದೆ ಎಂದು ಮೆಚ್ಚಿಕೊಂಡಿದ್ದಾರೆ. ಹೀಗೆ ಎಲ್ಲರಲ್ಲೂ ಆಸಕ್ತಿ ಮೂಡಿಸಿರುವ ಈ ದೃಶ್ಯ ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿಯೂ ಯಶಸ್ವಿಯಾಗಿದೆ.

Shwetha M