ಹುಲಿಗೆ ಆಟ ಪ್ರವಾಸಿಗರಿಗೆ ಪ್ರಾಣ ಸಂಕಟ – ವಾಹನ ಹಿಡಿದು ಭಯ ಹುಟ್ಟಿಸಿದ ವ್ಯಾಘ್ರ

ಹುಲಿಗೆ ಆಟ ಪ್ರವಾಸಿಗರಿಗೆ ಪ್ರಾಣ ಸಂಕಟ – ವಾಹನ ಹಿಡಿದು ಭಯ ಹುಟ್ಟಿಸಿದ ವ್ಯಾಘ್ರ

ಸಫಾರಿಗೆ ಹೋದ ವೇಳೆ ಕೆಲವೊಂದು ಪ್ರಾಣಿಗಳು ಪ್ರವಾಸಿಗರ ಮೇಲೆ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತವೆ. ಕೆಲವೊಂದು ಬಾರಿ ಕಿಲೋ ಮೀಟರ್‌ ಗಟ್ಟಲೇ ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬರುತ್ತವೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಹೀಗೆ ಕಾಣಸಿಗುವ ದೃಶ್ಯಗಳು ಸಹಜವಾಗಿಯೇ ನಮ್ಮಲ್ಲಿ ಕುತೂಹಲ ಮೂಡಿಸುತ್ತವೆ. ಇದು ಕೂಡಾ ಅದೇ ಸಾಲಿಗೆ ಸೇರುವಂತಹ ದೃಶ್ಯ. ಹುಲಿಯೊಂದು ಪ್ರವಾಸಿಗರ ವಾಹನವನ್ನು ತಡೆಯುವ ಪರಿ ಅಚ್ಚರಿ ಮೂಡಿಸದೇ ಇರದು.

ಇದನ್ನೂ ಓದಿ: ವನ್ಯಜೀವಿಗಳ ಹೊಂದಾಣಿಕೆ ಪಾಠ – ಆನೆಗಳಿಗೆ ದಾರಿ ಬಿಟ್ಟುಕೊಟ್ಟ ಹುಲಿ

@Bellaasays2 ಎಂಬ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಸಫಾರಿ ವಾಹನವೊಂದು ಕಾಡಿನ ಮಧ್ಯೆ ಓಡಾಡುತ್ತಿದೆ. ಸಫಾರಿ ವಾಹನದೊಳಗೆ ಸಾಕಷ್ಟು ಪ್ರವಾಸಿಗರು ಇರುವುದನ್ನೂ ಇಲ್ಲಿ ನೋಡಬಹುದು. ಈ ವೇಳೆ ನಾಲ್ಕು ಹುಲಿಗಳು ಸಫಾರಿ ವಾಹನದ ಬಳಿ ಬರುತ್ತವೆ. ಈ ಹುಲಿಯ ಆಟ ಕಂಡು ಈ ಪ್ರವಾಸಿಗರು ಪುಳಕಗೊಂಡಿದ್ದರು. ಫೋಟೋ, ವಿಡಿಯೋ ಕ್ಲಿಕ್ಕಿಸಿ ಖುಷಿಪಟ್ಟಿದ್ದರು. ವಾಹನ ಚಾಲಕ ಕೂಡಾ ನಿಧಾನವಾಗಿಯೇ ಮುಂದೆ ಸಾಗುತ್ತಿದ್ದರು. ವಾಹನ ಮುಂದಕ್ಕೆ ಹೋಗುತ್ತಿದ್ದಂತೆ ಹುಲಿಯೊಂದು ವಾಹನ ಬಳಿ ಬಂದು ವಾಹನವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ. ವಾಹನ ಮುಂದೆ ಚಲಿಸಿದರು ಕೂಡ ಹುಲಿ ಬಿಡುವಂತೆ ಕಾಣಿಸುತ್ತಿಲ್ಲ. ಇದರಿಂದ ಗಾಬರಿಗೊಂಡ ಪ್ರವಾಸಿಗರು ಜೋರಾಗಿ ಬೊಬ್ಬೆ ಹೊಡೆಯಲು ಪ್ರಾರಂಭಿಸುತ್ತಾರೆ. ಹೀಗೆ ಸ್ವಲ್ಪ ಹೊತ್ತು ವಾಹನವನ್ನು ಹಿಡಿದುಕೊಂಡಿದ್ದ ಹುಲಿ ಬಳಿಕ ಅಲ್ಲೇ ಕುಳಿತುಕೊಳ್ಳುತ್ತದೆ.

ಸದ್ಯ ಈ ವಿಡಿಯೋ ಈಗ ಭಾರಿ ವೈರಲ್‌ ಆಗಿದ್ದು, ಸಾಕಷ್ಟು ವೀಕ್ಷಣೆ ಗಳಿಸಿದೆ. ಸಹಜವಾಗಿಯೇ ಈ ದೃಶ್ಯ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿದೆ. ಸ್ವಚ್ಛಂದ ಪರಿಸರದಲ್ಲಿ ಓಡಾಡುವ ವನ್ಯಜೀವಿಗಳ ಆಟ, ತುಂಟಾಟ, ಜೀವನ ಕ್ರಮ ಒಂದೊಂದು ಸಲ ಖುಷಿ ಮೂಡಿಸಿದರೆ, ಕೆಲವೊಂದು ಸಲ ಭಯವನ್ನೂ ಸೃಷ್ಟಿಸುತ್ತವೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

 

View this post on Instagram

 

A post shared by Suddi Yaana (@suddiyaana)

suddiyaana