ಡಬಲ್ ಡೆಕ್ಕರ್ ಬಸ್ ಅಲ್ಲ ಸೈಕಲ್! – ಹೊಸ ಮಾದರಿ ಸೈಕಲ್ ನಲ್ಲಿ ವೃದ್ದನ ಸವಾರಿ..

ವಾಹನಗಳನ್ನು ಹೊಸ ರೀತಿಯಲ್ಲಿ ವಿನ್ಯಾಸಗೊಳಿಸುವುದು ಅಪರೂಪವೇನೂ ಅಲ್ಲ. ಹಳೆಯ ಕಾರನ್ನು ಅಂಗಡಿಯಾಗಿ ಪರಿವರ್ತಿಸಿದ್ದು, ಹಳೆ ಬೈಕ್ ಗೆ ಆಧುನಿಕ್ ಟಚ್ ನೀಡಿರುವ ಬಗ್ಗೆ ಸಾಕಷ್ಟು ಸುದ್ದಿಗಳನ್ನು ಕೇಳಿರುತ್ತೇವೆ. ವೃದ್ದರೊಬ್ಬರು ಹೊಸ ಮಾದರಿಯ ಸೈಕಲ್ ನಲ್ಲಿ ಸವಾರಿ ಮಾಡುತ್ತಿದ್ದಾರೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ವಿಮಾನದ ಟಿಕೆಟ್ ಗಿಂತಲೂ ದುಬಾರಿ ಉಬರ್! – ಏರ್ಪೋರ್ಟ್ ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಎಷ್ಟು ಹಣ ಗೊತ್ತಾ?
ಸಾಮಾನ್ಯವಾಗಿ ಡಬಲ್ ಡೆಕ್ಕರ್ ಬಸ್ ನೋಡಿರುತ್ತೇವೆ. ಅದರಲ್ಲಿ ಅನೇಕರು ಪ್ರಯಾಣ ಮಾಡಿರುತ್ತಾರೆ. ಆದರೆ ಇಲ್ಲೊಬ್ಬ ವೃದ್ದ ಡಬಲ್ ಡೆಕ್ಕರ್ ಸೈಕಲ್ ನಲ್ಲಿ ಸವಾರಿ ಮಾಡಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾರೆ. ಜಾರ್ಖಂಡ್ನ ಅಧಿಕಾರಿ ಸಂಜಯ್ ಕುಮಾರ್ ಎಂಬವರು ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ ವೃದ್ದರೊಬ್ಬರು ವಿಭಿನ್ನ ಸೈಕಲ್ ನಲ್ಲಿ ಸಾಗುತ್ತಿವುದನ್ನು ಕಾಣಬಹುದು. ಇದು ಸಾಮಾನ್ಯ ಸೈಕಲ್ ಅಲ್ಲ. ಸೈಕಲ್ ಮೇಲೆ ಇನ್ನೊಂದು ಸೈಕಲ್ ಜೋಡಿಸಿದ ರೀತಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಜತೆಗೆ, ಹ್ಯಾಂಡಲ್ ಜಾಗಕ್ಕೆ ಕಾರಿನ ಸ್ಟೇರಿಂಗ್ ಅಳವಡಿಸಲಾಗಿದೆ. ಈ ಎತ್ತರದ ಸೈಕಲನ್ನು ಈ ವೃದ್ಧ ಸರಾಗವಾಗಿ ಚಲಾಯಿಸಿಕೊಂಡು ಹೋಗುವುದನ್ನು ಇಲ್ಲಿ ನೋಡಬಹುದಾಗಿದೆ. ಇವರ ಈ ಸಾಹಸವನ್ನು ನೋಡುವಾಗ ಒಂದು ಕ್ಷಣ ಅಚ್ಚರಿಯೂ ಆಗುತ್ತದೆ. ಈ ವೃದ್ಧನ ನಗುಮುಖವೇ ಇವರು ಈ ಸೈಕಲ್ ಸವಾರಿಯನ್ನು ಎಷ್ಟು ಆನಂದಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ.
ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎಲ್ಲರೂ ಬಲು ಕುತೂಹಲದಿಂದಲೇ ಈ ಡಬ್ಬಲ್ ಡೆಕ್ಕರ್ ಸೈಕಲ್ ನೋಡುತ್ತಿದ್ದಾರೆ. ಜತೆಗೆ ಅಚ್ಚರಿ ವ್ಯಕ್ತಪಡಿಸಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಕೆಲವರು ಈ ವೃದ್ಧನ ಸುರಕ್ಷತೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.
कैप्शन..?
☺️ pic.twitter.com/GwZyW4Crkf— Sanjay Kumar, Dy. Collector (@dc_sanjay_jas) May 30, 2023