ಅಬ್ಬಾ ಅದೃಷ್ಟ ಚೆನ್ನಾಗಿತ್ತು- ಸಿಂಹಗಳ ಬಾಯಿಂದ ಎಮ್ಮೆ ಗ್ರೇಟ್ ಎಸ್ಕೇಪ್!

ಅಬ್ಬಾ ಅದೃಷ್ಟ ಚೆನ್ನಾಗಿತ್ತು- ಸಿಂಹಗಳ ಬಾಯಿಂದ ಎಮ್ಮೆ ಗ್ರೇಟ್ ಎಸ್ಕೇಪ್!

ಬೇಟೆಯಾಡಿ ತಿನ್ನುವುದು ಕೆಲ ಪ್ರಾಣಿಗಳ ಆಹಾರ ಕ್ರಮ. ಹೀಗಾಗಿ, ಮಾಂಸಾಹಾರಿ ಪ್ರಾಣಿಗಳು ಬೇಟೆಯಾಡುವುದರಲ್ಲಿ ಪಳಗಿರುತ್ತವೆ. ಅದರಲ್ಲೂ ಕೆಲವೊಂದು ಪ್ರಾಣಿಗಳ ಬೇಟೆಯ ತಂತ್ರವೇ ಬಲು ರೋಚಕ. ಕೆಲ ಮನುಷ್ಯರಂತೆ ಕಾಡಿನಲ್ಲೂ ಕೂಡ ಸೋಂಬೇರಿ ಪ್ರಾಣಿಗಳು ಇರುತ್ತವೆ. ಅವುಗಳು ಇತರ ಪ್ರಾಣಿಗಳು ಬೇಟೆಯಾಡಿದ ಆಹಾರವನ್ನು ಕಿತ್ತು ತಿನ್ನುವುದನ್ನೇ ಖಯಾಲಿ ಮಾಡಿಕೊಂಡಿರುತ್ತೆ. ಇಂತಹ ಸಾಕಷ್ಟು ದೃಶ್ಯಗಳನ್ನು ನೋಡಿರುತ್ತೇವೆ. ಇದೀಗ, ಇದಕ್ಕೆ ಇನ್ನೊಂದು ವಿಡಿಯೋ ಸೇರ್ಪಡೆಯಾಗಿದೆ. ಇದು ಸಿಂಹಗಳ ತಂಡದ ಬೇಟೆಯ ದೃಶ್ಯ.

ಸಿಂಹಗಳ  ತಂಡವೊಂದು ಎಮ್ಮೆಯನ್ನು ನೆಲಕ್ಕೆ ಕೆಡವುದರಲ್ಲಿ ಯಶಸ್ವಿಯಾಗಿತ್ತು. ಹೀಗೆ ಬೇಟೆಯಾಡಿದ ಎಮ್ಮೆಯನ್ನು ತಿನ್ನಬೇಕು ಎನ್ನುವಷ್ಟರಲ್ಲಿ ಅಲ್ಲಿನ ಪರಿಸ್ಥಿತಿ ಬದಲಾಗಿ ಹೋಗಿತ್ತು. ಈ ಬದಲಾದ ಪರಿಸ್ಥಿತಿ ಎಮ್ಮೆಗೆ ವರವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಬಲೆಗೆ ಬಿತ್ತು ಬಂಗಾರದ ಮೀನು! – ಗೋಲ್ಡನ್ ಫಿಶ್ ರೇಟ್ ಎಷ್ಟು ಗೊತ್ತಾ?

ಟ್ವಿಟರ್ ಖಾತೆಯೊಂದರಲ್ಲಿ ಸಿಂಹಗಳು ಎಮ್ಮೆಯನ್ನು ಹಿಡಿದ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಸಿಂಹಗಳ ತಂಡ ಎಮ್ಮೆಯನ್ನು ನೆಲಕ್ಕೆ ಕೆಡವಿ ಭರ್ಜರಿ ಭೋಜನದ ವ್ಯವಸ್ಥೆ ಮಾಡಿಕೊಂಡಿದೆ. ಇನ್ನೇನು ಸಿಂಹಗಳು ಎಮ್ಮೆಯನ್ನು ತಿನ್ನಬೇಕು ಅನ್ನುವಾಗ ಅವುಗಳ ಮಧ್ಯೆ  ಜಗಳ ಶುರುವಾಗಿದೆ. ಸಣ್ಣದಾಗಿ ಶುರುವಾದ ಈ ಕಾದಾಟ ಬಳಿಕ ಎಲ್ಲಾ ಸಿಂಹ ಸಿಂಹಿಣಿಗಳು ಕಿತ್ತಾಡಿಕೊಳ್ಳುವ ಮಟ್ಟಿಗೆ ತಲುಪಿದೆ. ಈ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡ ಎಮ್ಮೆ ಎದ್ನೋ ಬಿದ್ನೋ ಅಂತ ಅಲ್ಲಿಂದ ಓಡಿದೆ. ಇತ್ತ ಸಿಂಹಗಳ ತಂಡ ಕಾದಾಟದಲ್ಲೇ ಮಗ್ನವಾಗಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ನೆಟ್ಟಿಗರು ಬಲು ಕುತೂಹಲದಿಂದಲೇ ನೋಡುತ್ತಿದ್ದಾರೆ. ಜತೆಗೆ, ಎಮ್ಮೆ ಅದೃಷ್ಟಶಾಲಿ. ಹೀಗಾಗಿಯೇ ಈ ಎಮ್ಮೆ ಸಾವಿನ ದವಡೆಯಿಂದ ಪಾರಾಗಿದೆ ಎಂದು ಒಂದಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ.

suddiyaana