ಆಟೋ ಹತ್ತಿದವರಿಗೆ ಐಷಾರಾಮಿ ಕಾರಿನಲ್ಲಿ ಪ್ರಯಾಣ! – ಚಾಲಕನ ಐಡಿಯಾಗೆ ಜನ ಫಿದಾ

ಆಟೋ ಹತ್ತಿದವರಿಗೆ ಐಷಾರಾಮಿ ಕಾರಿನಲ್ಲಿ ಪ್ರಯಾಣ! – ಚಾಲಕನ ಐಡಿಯಾಗೆ ಜನ ಫಿದಾ

ಹೊಸ ಹೊಸ ತಂತ್ರಜ್ಞಾನ ಬಂದಂತೆಲ್ಲಾ ಜನ ಅದಕ್ಕೆ ಸಮನಾಗಿ ಹೊಂದಿಕೊಂಡು ಹೋಗುತ್ತಾರೆ. ಅಷ್ಟೇ ಅಲ್ಲದೆ ಕೆಲವು ಮಂದಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ವಾಹನಗಳಿಗೆ ಹೊಸ ಲುಕ್ ಬರುವಂತೆ ಏನೇನೋ ಮಾರ್ಪಾಡುಗಳನ್ನು ಮಾಡುತ್ತಿದ್ದಾರೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇಂಥದ್ದೇ ಒಂದು ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಸೀರೆಯುಟ್ಟು ನದಿಗೆ ಪಲ್ಟಿ – ನೋಡಿ ಸ್ವಾಮಿ ಅಜ್ಜಿಯ ಜಂಪ್ ಹೇಗಿದೆ..!?

ಉದ್ಯಮಿ ಹರ್ಷ್‌ ಗೋಯೆಂಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಆಸಕ್ತಿಕರ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಇನ್ನೊಂದು ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಐಷಾರಾಮಿ ಕಾರಿನಂತೆ ಆಟೋವನ್ನು ವಿನ್ಯಾಸಗೊಳಿಸಲಾಗಿದೆ. ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ವೈರಲ್ ಆದ 58 ಸೆಕೆಂಡುಗಳ ವಿಡಿಯೋದಲ್ಲಿ ಈ ಆಟೋವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು ಎಲ್ಲರೂ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಐಷಾರಾಮಿ ಕಾರಿನ ರೀತಿಯಲ್ಲಿಯೇ ಈ ಆಟೋದ ಲುಕ್ ಬದಲಿಸಲಾಗಿದೆ. ಈ ಆಟೋದ ಮುಂಭಾಗ ಸಾಮಾನ್ಯ ಆಟೋದಂತೆ ಕಾಣುತ್ತದೆ. ಆದರೆ, ಹಿಂದಿನ ಭಾಗವನ್ನು ವಿಂಟೇಜ್ ಕಾರಿನ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಜತೆಗೆ, ಚಾಲಕನ ಸೀಟು, ಪ್ರಯಾಣಿಕರು ಕುಳಿತುಕೊಳ್ಳುವ ಸೀಟಿಗೂ ಆಧುನಿಕತೆಯ ಟಚ್ ನೀಡಲಾಗಿದೆ. ಸದ್ಯ ಈ ಹೊಸ ಆವಿಷ್ಕಾರಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

suddiyaana