ಮದುವೆ ಮಂಟಪದಲ್ಲೇ ಕುಡಿದು ತೂರಾಡಿದ ವರ – ವಧು ಮಾಡಿದ್ದೇನು ಗೊತ್ತಾ?

ಮದುವೆ ಮಂಟಪದಲ್ಲೇ ಕುಡಿದು ತೂರಾಡಿದ ವರ – ವಧು ಮಾಡಿದ್ದೇನು ಗೊತ್ತಾ?

ಮದುವೆ ಅನ್ನೋದು ಸಂತಸದ ಕ್ಷಣ. ಹೀಗಾಗಿ ಮದುವೆಗೆ ಆಗಮಿಸಿದ ಬಂಧುಗಳಿಗೆ ಯಾವುದೇ ಕೊರತೆ ಆಗಬಾರದು ಅಂತಾ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿರುತ್ತದೆ. ಸ್ನೇಹಿತರು, ಬಂಧುಗಳು ಮದುವೆಯಲ್ಲಿ ಮಜಾ ಮಾಡಬೇಕೆಂದು ಗುಂಡು, ತುಂಡಿನ ವ್ಯವಸ್ಥೆಯನ್ನು ಮಾಡಲಾಗುತ್ತೆ. ಹೀಗಾಗಿ ಬಂದವರೆಲ್ಲಾ ಕುಡಿದು, ಕುಣಿದು ಸಂಭ್ರಮಿಸುತ್ತಾರೆ. ಆದರೆ ಇಲ್ಲೊಂದು ಮದುವೆಯಲ್ಲಿ ವರನೇ ಕಂಠಪೂರ್ತಿ ಕುಡಿದು ತೂರಾಡಿದ್ದಾನೆ. ಇದರಿಂದ ಬೇಸತ್ತ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ.

ಇದನ್ನೂ ಓದಿ: ಹೇಳಿದ್ದಷ್ಟು ವಧುದಕ್ಷಿಣೆ ಕೊಟ್ಟಿಲ್ಲ ಎಂದು ಸಿಟ್ಟಿಗೆದ್ದ ಮದುಮಗಳು – ಕೊನೇ ಕ್ಷಣದಲ್ಲಿ ಮದುವೆಯೇ ಕ್ಯಾನ್ಸಲ್

ಅಸ್ಸಾಂ ನ ನಲ್ಬರಿ ಎಂಬಲ್ಲಿ ಮದುವೆ ಆಯೋಜನೆಯಾಗಿತ್ತು. ಹೀಗಾಗಿ ವಧು, ವರ ಇಬ್ಬರು ಮದುವೆ ಮಂಟಪಕ್ಕೆ ಬಂದು ಕೂತಿದ್ದಾರೆ. ಈ ವೇಳೆ ವರನಿಗೆ ಅರ್ಚಕರು ಕೆಲವೊಂದು ಶಾಸ್ತ್ರಗಳನ್ನು ಮಾಡಿಸುತ್ತಾರೆ. ಆದರೆ ವರ ಮಾತ್ರ ಅದನ್ನು ಕೇಳಿಸಿಕೊಳ್ಳದೇ ಕುಳಿತಲ್ಲೇ ಹೊರಳಾಡುತ್ತಾನೆ.  ಇದನ್ನು ಗಮನಿಸುತ್ತಿದ್ದ ವಧು ಇಂಥ ಕುಡುಕನನ್ನು ಮದುವೆಯಾಗಲಾರೆ ಅಂತಾ ಮಂಟಪದಿಂದ ಎದ್ದು ಹೊರ ನಡೆದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮದುವೆ ರದ್ದಾದ ಬಳಿಕ ವಧುವಿನ ಮನೆಯವರು ನಲ್ಬರಿ ಪೊಲೀಸ್ ಠಾಣೆಗೆ ತೆರಳಿ ವರನ ಮನೆಯವರ ವಿರುದ್ಧ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಮದುವೆಗಾಗಿ ಖರ್ಚು ಮಾಡಿದ ಹಣವನ್ನು ಪಾವತಿಸಬೇಕೆಂದು ಹೇಳಿದ್ದಾರೆ.

ವರ ಹಾಗೂ ವರನ ಅಪ್ಪ ಸೇರಿದಂತೆ ಆತನ ಕುಟುಂಬದ ಬಹುತೇಕ ಸದಸ್ಯರು ಕುಡಿದು ಮದುವೆ ಮಂಟಪಕ್ಕೆ ಬಂದಿದ್ದಾರೆ. ನಾವು ಮದುವೆಗಾಗಿ ಎಲ್ಲವೂ ತಯಾರಿ ಮಾಡಿಕೊಂಡು ಬಂದಿದ್ದರೂ ವರನ ಕಡೆಯವರು ಕಂಠಪೂರ್ತಿ ಕುಡಿದು ಬಂದಿದ್ದಾರೆ. ಆದ್ದರಿಂದ ಮದುವೆಯನ್ನು ರದ್ದು ಮಾಡಿದ್ದೇವೆ. ನಾವು ಮದುವೆಗಾಗಿ ಖರ್ಚು ಮಾಡಿದ ಹಣವನ್ನು ವರನ ಕಡೆಯವರು ಮರಳಿಸಲಿ ಅಂತಾ ವಧುವಿನ ಕುಟುಂಬಸ್ಥರು ಹೇಳಿದ್ದಾರೆ.

suddiyaana