ಚೊಚ್ಚಲ ವಿಜಯ್ ಹಜಾರೆ ಟ್ರೋಫಿ ಎತ್ತಿದ ವಿದರ್ಭ – ಫೈನಲ್ನಲ್ಲಿ ಸೌರಾಷ್ಟ್ರ ತಂಡಕ್ಕೆ ಮುಖಭಂಗ

ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ಚಾಂಪಿಯನ್ ಪಟ್ಟ ಪಡೆದಿದೆ. 38 ರನ್ಗಳಿಂದ ಸೌರಾಷ್ಟ್ರವನ್ನು ಸೋಲಿಸಿದ ವಿದರ್ಭ ಪ್ರಶಸ್ತಿ ಗೆದ್ದುಕೊಂಡಿತು. ಇದು ವಿದರ್ಭ ಪಾಲಿಗೆ ಮೊದಲ ವಿಜಯ್ ಹಜಾರೆ ಟ್ರೋಫಿ ಪ್ರಶಸ್ತಿ. ಚೊಚ್ಚಲ ಟ್ರೋಫಿ ಗೆಲ್ಲುವ ಮೂಲಕ ವಿದರ್ಭ ಇತಿಹಾಸ ಸೃಷ್ಟಿಸಿದೆ.
ಇದನ್ನೂ ಓದಿ:ಕಿಂಗ್ ಕೊಹ್ಲಿ ಏಕಾಂಗಿ ಹೋರಾಟ ವ್ಯರ್ಥ! – ಭಾರತದ ನೆಲದಲ್ಲಿ ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್!
ಎರಡು ಬಾರಿಯ ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ಸೌರಾಷ್ಟ್ರ ತಂಡ ಫೈನಲ್ನಲ್ಲಿ ವಿದರ್ಭ ತಂಡಕ್ಕೆ ಸೋತು ಶರಣಾಗಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ನಾಯಕ ಹಾರ್ವಿಕ್ ದೇಸಾಯಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ಪರ ಆರಂಭಿಕ ಆಟಗಾರ ಅಥರ್ವ ಟೈಡೆ ಅವರ ಅದ್ಭುತ ಶತಕ ಬಾರಿಸಿದರು. ಟೈಡೆ ಇನ್ನಿಂಗ್ಸ್ ಆಧಾರದ ಮೇಲೆ ವಿದರ್ಭ ಎಂಟು ವಿಕೆಟ್ಗಳಿಗೆ 317 ರನ್ ಗಳಿಸಿತು.
318 ರನ್ಗಳ ಗುರಿ ಬೆನ್ನತ್ತಿದ ಸೌರಾಷ್ಟ್ರ ತಂಡವು 48.5 ಓವರ್ಗಳಲ್ಲಿ 279 ರನ್ಗಳಿಸಿ ಆಲೌಟ್ ಆಗಿದೆ.. ಸೌರಾಷ್ಟ್ರ ಪರ ಪ್ರೇರಕ್ ಮಂಕಡ್ 88 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅವರ ಇನ್ನಿಂಗ್ಸ್ನಲ್ಲಿ 10 ಬೌಂಡರಿಗಳಿದ್ದವು. ಚಿರಾಗ್ ಜಾನಿ ಕೂಡ 63 ಎಸೆತಗಳನ್ನು ಎದುರಿಸಿ 3 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಾಯದಿಂದ 64 ರನ್ ಗಳಿಸಿ ಅರ್ಧಶತಕ ಗಳಿಸಿದರು. ಉಳಿದ ಯಾವುದೇ ಬ್ಯಾಟರ್ ಕ್ರೀಸ್ಗೆ ಕಚ್ಚಿ ನಿಂತು ಆಡಲಿಲ್ಲ. ಇದರಿಂದ ಎರಡು ಬಾರಿಯ ಚಾಂಪಿಯನ್ ಸೌರಾಷ್ಟ್ರ ತಂಡಕ್ಕೆ ತೀವ್ರ ಮುಖಭಂಗವಾಗಿದೆ.

ನೋಡಿರಿ

