ಕಾಮನ್ವೆಲ್ತ್ ಕ್ರೀಡಾಕೂಟ ಆತಿಥ್ಯದಿಂದ ಹಿಂದೆ ಸರಿದ ವಿಕ್ಟೋರಿಯಾ ರಾಜ್ಯ..! – ಒಪ್ಪಂದ ಅಂತ್ಯಗೊಳಿಸುವಂತೆ ಮೊರೆ..!

ಕಾಮನ್ವೆಲ್ತ್ ಕ್ರೀಡಾಕೂಟ ಆತಿಥ್ಯದಿಂದ ಹಿಂದೆ ಸರಿದ ವಿಕ್ಟೋರಿಯಾ ರಾಜ್ಯ..! – ಒಪ್ಪಂದ ಅಂತ್ಯಗೊಳಿಸುವಂತೆ ಮೊರೆ..!

2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ವಹಿಸಿಕೊಂಡಿತ್ತು. ಇದೀಗ ವಿಕ್ಟೋರಿಯಾ ರಾಜ್ಯ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯದಿಂದ ಹಿಂದೆ ಸರಿಯುವುದಾಗಿ ವಿಕ್ಟೋರಿಯಾ ರಾಜ್ಯ ತಿಳಿಸಿದೆ. ಕ್ರೀಡಾಕೂಟ ಆಯೋಜನೆಗೆ ಕನಿಷ್ಠ 2 ಶತಕೋಟಿ ಆಸ್ಟ್ರೇಲಿಯನ್ ಡಾಲರ್ (1.36 ಶತಕೋಟಿ ಯುಎಸ್ ಡಾಲರ್) ಬೇಕು. ಇನ್ನೂ ಚೆನ್ನಾಗಿ ಆಯೋಜನೆ ಮಾಡುತ್ತೇವೆ ಎಂದರೆ ಸುಮಾರು 7 ಶತಕೋಟಿ ಡಾಲರ್‌ನಷ್ಟು ಹಣ ಬೇಕಾಗುತ್ತದೆ. ಅದಕ್ಕಾಗಿ ವಿಕ್ಟೋರಿಯಾ ಆತಿಥ್ಯದಿಂದ ಹಿಂದೆ ಸರಿದೆ ಎಂದು ಮೆಲ್ಬರ್ನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಪ್ರಧಾನ ಅಧಿಕಾರಿ ಡೇನಿಯಲ್ ಆಂಡ್ರ್ಯೂಸ್ ತಿಳಿಸಿದ್ದಾರೆ.

ಇದನ್ನೂ ಓದಿ:  ಸೋತ ಬಳಿಕ ಅಲ್ಕರಾಝ್‌ಗೆ ‘ಸ್ಪ್ಯಾನಿಷ್ ಬುಲ್’ ಎಂದ ಜೊಕೊವಿಕ್ – ಮಗನಿಗಾಗಿ ಕಣ್ಣೀರಿಟ್ಟ ಟೆನಿಸ್ ದೈತ್ಯ

ಕಳೆದ ಬಾರಿ ಮಂಡಿಸಿದ ವಾರ್ಷಿಕ ಬಜೆಟ್‌ಗಿಂತಲೂ ಮೂರು ಪಟ್ಟು ಹೆಚ್ಚಿನ ಹಣ ಈ ಕಾರ್ಯಕ್ರಮಕ್ಕೆ ಬೇಕಾಗುತ್ತದೆ. ಅದಕ್ಕಾಗಿ ಆಸ್ಪತ್ರೆ ಮತ್ತು ಶಾಲೆಗಳಿಗೆ ಮೀಸಲಾದ ಹಣವನ್ನ ತೆಗೆಯಲಾಗುವುದಿಲ್ಲ. ಆದ್ದರಿಂದ 2026ರಲ್ಲಿ ವಿಕ್ಟೋರಿಯಾದಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ಆಯೋಜನೆ ಮಾಡುವುದಿಲ್ಲ. ಈ ಒಪ್ಪಂದವನ್ನು ಅಂತ್ಯಗೊಳಿಸುವಂತೆ ಕಾಮನ್‌ವೆಲ್ತ್‌ ಕ್ರೀಡಾಕೂಡಕ್ಕೆ ತಿಳಿಸಲು ಅಧಿಕಾರಿಗಳಿಗೆ ಹೇಳಿದ್ದೇವೆ ಎಂದು ಆಂಡ್ರ್ಯೂಸ್ ತಿಳಿಸಿದ್ದಾರೆ. ಕಾಮನ್ ವೆಲ್ತ್ ಕ್ರೀಡಾಕೂಟವು 20 ಕ್ರೀಡೆಗಳು ಮತ್ತು 26 ವಿಭಾಗಗಳನ್ನ ಒಳಗೊಂಡಿರುತ್ತದೆ. ವಿಕ್ಟೋರಿಯಾದಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟ ನಡೆಸಲು ಗೀಲಾಂಗ್, ಬಲ್ಲರಾಟ್, ಬೆಂಡಿಗೊ, ಗಿಪ್ಸ್ಲ್ಯಾಂಡ್ ಮತ್ತು ಶೆಪ್ಪರ್ಟನ್ ಪ್ರಾದೇಶಿಕ ಕೇಂದ್ರಗಳನ್ನು ಒಳಗೊಂಡಿದೆ. ಆಂಡ್ರ್ಯೂಸ್ ಆತಿಥ್ಯ ನಿರಾಕರಿಸಲು ನಿರ್ಧಾರ ಪ್ರಕಟಿಸಿದ ನಂತರ ಆಸೀಸ್ ರಾಜಧಾನಿ ಮೇಲ್ಬರ್ನ್ನಲ್ಲಿ ಕ್ರೀಡಾಕೂಟ ಆಯೋಜಿಸಲು ನಿರ್ಧರಿಸಲಾಯಿತು. ಅದು ಸಾಧ್ಯವಾಗದ ನಂತರ 2 ಶತಕೋಟಿ ಡಾಲರ್ಗಳ ಕಡಿಮೆ ವೆಚ್ಚದ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಈ ಬಗ್ಗೆ ವಿಕ್ಟೋರಿಯಾ ರಾಜ್ಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ನಡುವೆ ವಿಕ್ಟೋರಿಯಾ ಕ್ರೀಡಾ ಇಲಾಖೆ ವಿರುದ್ಧ ಆಕ್ಷೇಪಗಳು ಕೇಳಿಬರುತ್ತಿವೆ. ಕ್ರೀಡಾಕೂಟ ಆಯೋಜನೆ ಮಾಡುವುದಿಲ್ಲ ಎನ್ನುತ್ತಿರುವುದು ವಿಕ್ಟೋರಿಯಾ ರಾಣಿಗೆ ಮಾಡುತ್ತಿರುವ ಅವಮಾನ, ಕಾಮನ್ವೆಲ್ತ್ ಕ್ರೀಡಾಕೂಟ ಸಮಿತಿಗೂ ಇದರಿಂದ ನಿರಾಶೆಯಾಗಿದೆ ಎಂಬ ಆಕ್ಷೇಪ ಕೇಳಿಬಂದಿದೆ. ಕಳೆದ ಬಾರಿ ಇಂಗ್ಲೆಂಡ್‌ನ ಬರ್ಮಿಂಗ್ ಹ್ಯಾಮ್‌ನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆದಿತ್ತು.

suddiyaana