ಏನಿಲ್ಲ.. ಏನಿಲ್ಲ ಅಲ್ಲ.. ನೀರಿಲ್ಲ.. ನೀರಿಲ್ಲ.. – ಓ ನಲ್ಲ ನೀ ನಲ್ಲನ ನ್ಯೂ ಗೆಟಪ್

ಏನಿಲ್ಲ.. ಏನಿಲ್ಲ ಅಲ್ಲ.. ನೀರಿಲ್ಲ.. ನೀರಿಲ್ಲ..  – ಓ ನಲ್ಲ ನೀ ನಲ್ಲನ ನ್ಯೂ ಗೆಟಪ್

ಕಳೆದ ಎರಡು ತಿಂಗಳಿಂದ ಸೋಶಿಯಲ್ ಮೀಡಿಯಾ ತುಂಬೆಲ್ಲಾ ಬರೀ ಕರಿಮಣಿ ಮಾಲೀಕನೇ ಕಾಣ್ತಿದ್ದ. ಓ ನಲ್ಲ, ನೀ ನಲ್ಲ ಅನ್ನೋ ರೀಲ್ಸ್​ಗಳೇ ರಾರಾಜಿಸುತ್ತಿದ್ವು. ಉಪ್ಪಿ ಹಾಡಿನ ಕ್ರೇಜ್ ಈಗ ಚೂರು ಕಮ್ಮಿ ಆಗಿದೆ ನಿಜ. ಆದ್ರೆ ಅದೇ ಸಾಂಗ್ ಬೇರೆ ಬೇರೆ ವರ್ಷನ್​ಗಳಲ್ಲಿ ಟ್ರೆಂಡ್ ಆಗ್ತಿದೆ. ನೀರು, ಮೇಕಪ್, ಬೋಳುತಲೆ, ಸ್ಟೂಡೆಂಟ್ಸ್, ಪಾಲಿಟಿಕ್ಸ್​ ಅಂತಾ ನ್ಯೂ ಲುಕ್​ನಲ್ಲಿ ಹವಾ ಎಬ್ಬಿಸಿದೆ.

ಇದನ್ನೂ ಓದಿ: 10 ಟೀಮ್‌ಗಳ ಪೈಕಿ ಅತ್ಯಂತ ಸ್ಟ್ರಾಂಗ್ ಯಾವುದು? – ಐಪಿಎಲ್‌ನಲ್ಲಿ ಹೆಚ್ಚು all-rounders ಇರೋ ಟೀಮ್ ಯಾವುದು?

ಮಳೆ ಇಲ್ದೇ ಈ ಸಲ ಕುಡಿಯೋ ನೀರಿಗೂ ಬರ ಬಂದಿದೆ. ಅದ್ರಲ್ಲೂ ಬೆಂಗಳೂರಿನ ಸ್ಥಿತಿ ಭಯಾನಕವಾಗಿದೆ.  ವಾಟರ್ ಟ್ಯಾಂಕರ್ ಮಾಫಿಯಾದವ್ರು ಜನರ ಜೀವ ಹಿಂಡುತ್ತಿದ್ದಾರೆ. ಮನೆ ಮಾಲೀಕರು ಒಂದು ಟ್ಯಾಂಕ್ ನೀರು ತರಿಸಿಕೊಳ್ಳೋಕೂ ಸಾವಿರಾರು ರೂಪಾಯಿ ಕೊಡಬೇಕಾಗಿದೆ. ಇಂಥಾ ಸಿಚುಯೇಷನ್ ಬಗ್ಗೆ ನಮ್ಮ ವಿಕಾಸ್ ವಿಕ್ಕಿಪೀಡಿಯಾ ತುಂಬಾ ನಾಜೂಕಾಗಿ ಹೇಳಿದ್ದಾರೆ. ಏನಿಲ್ಲ ಏನಿಲ್ಲ ಹಾಡನ್ನು ತಮ್ಮದೇ ಶೈಲಿಯಲ್ಲಿ ಕ್ರಿಯೇಟ್ ಮಾಡಿ ರಾಹುಲ್ಲನನ್ನ ಫೇಮಸ್ ಮಾಡಿದ್ದ ಮತ್ತು ನಾನು ನಂದಿನಿ ಹಾಡಿನ ಮೂಲಕ ಕೋಟಿ ಕೋಟಿ ಜನರನ್ನು ಸೆಳೆದಿದ್ದ ವಿಕಾಸ್, ‘ಏನಿಲ್ಲ ಏನಿಲ್ಲ’ ಹಾಡನ್ನೇ ‘ಓ ನಲ್ಲ ನೀರಿಲ್ಲ’ ಎಂದು ಸಾಹಿತ್ಯ ಬರೆದು ವಿಡಿಯೋವೊಂದನ್ನು ಮಾಡಿದ್ದಾರೆ. ಆ ವಿಡಿಯೋ ಸಖತ್ ವೈರಲ್ ಆಗಿದೆ. ಹಾಗೇ ಅಷ್ಟೇ ಅರ್ಥಗರ್ಭಿತವಾಗಿದೆ.

ಹೀಗೆ ಓ ನಲ್ಲ ನೀ ನಲ್ಲ ಸ್ಟೈಲಲ್ಲೇ ನೀರಿಲ್ಲ ಅಂತಾ ವಿಕಾಸ್ ಮಾಡಿರುವ ಹಾಡು ಮತ್ತು ಅವರ ಗೆಟಪ್ ಮತ್ತೆ ಜನರ ಮೆಚ್ಚುಗೆ ಪಡೆದಿದೆ. ಇದ್ರ ನಡುವೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮೋಹನ್ ರಾಜ್ ಅವರು ಇದೇ ಥರ ರೀಲ್ಸ್ ಮಾಡಿ ತಮ್ಮ ಫೇಸ್‌ಬುಕ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದಷ್ಟು ಮಹಿಳೆಯರನ್ನ ಖಾಲಿ ಬಿಂದಿಗೆ ಸಮೇತ ಸೇರಿಸಿಕೊಂಡು ತಮ್ಮದೇ ಧ್ವನಿಯಲ್ಲಿ ನೀರಿಲ್ಲ..ನೀರಿಲ್ಲ ಎಂದು ಹಾಡಿದ್ದಾರೆ. ಪಾತ್ರೆ ತೊಳೆಯಲು ನೀರಿಲ್ಲ.. ಕುಡಿಯಲು ನೀರಿಲ್ಲ.. ಮೋರಿಲಿರೋ ನೀರು ನೀರಲ್ಲ ಎಂದು ಗಮನ ಸೆಳೆದಿದ್ದಾರೆ.

ಇದು ನೀರಿನ ಪ್ರಾಬ್ಲಂ ಆದ್ರೆ ಅತ್ತ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧದ ಅಭಿಯಾನಕ್ಕೂ ಇದೇ ಸಾಂಗ್ ಬಳಸಿಕೊಳ್ಳಲಾಗಿದೆ. ಓ ನಲ್ಲ ನೀ ನಲ್ಲ ಹಾಡನ್ನು ಶೋಭಾ ಕರಂದ್ಲಾಜೆ ವಿರುದ್ಧ ಟ್ರೋಲ್ ಮಾಡಲಾಗಿದ್ದು, ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಸದ್ದು ಮಾಡಿದೆ.

ಇನ್ನು ಓ ನಲ್ಲ ಸಾಂಗ್ ಸದನದಲ್ಲೂ ಕೂಡ ಬಾರೀ ಸದ್ದು ಮಾಡಿತ್ತು. ಬಜೆಟ್ ಮಂಡನೆ ದಿನವೇ ವಿಪಕ್ಷನಾಯಕರು ಏನಿಲ್ಲ ಏನಿಲ್ಲ ಬಜೆಟ್​ನಲ್ಲಿ ಏನಿಲ್ಲ ಎಂದು ವ್ಯಂಗ್ಯವಾಡಿದ್ದರು. ಅದಾದ ಮೇಲೆ ಕಲಾಪದ ವೇಳೆಯೂ ಬೆಂಗಳೂರಿನ ನೀರಿನ ಸಮಸ್ಯೆ ವಿಚಾರವಾಗಿ ನೀರಿಲ್ಲ ನೀರಿಲ್ಲ ಎಂದು ಸರ್ಕಾರವನ್ನ ಟೀಕಿಸಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ಅದೇ ಸ್ಟೈಲಲ್ಲೇ ಏನಿಲ್ಲ ಏನಿಲ್ಲ ವಿಪಕ್ಷ ನಾಯಕರ ತಲೆಯಲ್ಲಿ ಏನೂ ಇಲ್ಲ ಎಂದು ತಿರುಗೇಟು ನೀಡಿದ್ದರು.

ಹೀಗೆ ಸಾಮಾಜಿಕ ಸಮಸ್ಯೆಗಳು, ರಾಜಕೀಯದಲ್ಲೂ ವೈರಲ್ ಆದ ಈ ಸಾಂಗ್ ಹೆಣ್ಮಕ್ಕಳ ಮೇಕಪ್​ಗೂ ಕಾಲಿಟ್ಟಿದೆ. ಯುವತಿಯೊಬ್ಬಳು ಖಾಲಿಯಾಗಿರೋ ಲಿಪ್​ಸ್ಟಿಕ್ ಹಿಡಿದು ಇದನ್ನ ತರದೆ ಹೋದರೆ ಕರಿಮಣಿ ಮಾಲೀಕ ನೀನಲ್ಲ ಎಂದು ತನ್ನ ಗಂಡನಿಗೆ ಹೇಳಿದ್ದಾಳೆ.

ಇನ್ನು ಇವ್ರ ಗೋಳಂತೂ ಕೇಳೋದೇ ಬೇಡ. ಬೋಡು ತಲೆ ಹಿಡ್ಕೊಂಡು ಉಪೇಂದ್ರ ರೇಂಜ್​ನಲ್ಲೇ ಪೋಸ್ ಕೊಟ್ಟಿದ್ದಾರೆ. ತಲೆಯ ಮೇಲೆ ಖಾಲಿ ಖಾಲಿ, ನೀ ಬದಿಯಲ್ಲಿ ಇದ್ದರೂ ಅಲ್ಲಿಗೇ ನಿಲ್ಲದೆ ಉದುರಿ ಹೋದೆಯಾ.. ಕೇಶದ ಮಾಲೀಕ ನಾನಲ್ಲ, ಬೋಳು ತಲೆ ಮಾಲೀಕ ನಾ ನಲ್ಲ ಅಂತಾ ಬಿಂದಾಸಾಗಿ ಸ್ಮೈಲ್ ಕೊಟ್ಟಿದ್ದಾರೆ.

ಕಾಲೇಜ್​ಗಳಂತೂ ಓ ನಲ್ಲ ಸಾಂಗ್ ಒಂದು ಲೆವೆಲ್​ಗೆ ಹವಾ ಸೃಷ್ಟಿಸಿದೆ. ಎಕ್ಸಾಂ ವಿಚಾರವನ್ನೇ ಮುಂದಿಟ್ಕೊಂಡು ಸ್ಟೂಡೆಂಡ್ಸ್ ಡಿಫ್ರೆಂಟ್ ಡಿಫ್ರೆಂಟಾಗಿ ರೀಲ್ಸ್ ಮಾಡಿದ್ದಾರೆ. ಪ್ರಶ್ನೆಗೆ ಉತ್ತರ ಹುಡುಕಿದರೆ ಏನೇನಿಲ್ಲ ಎಂದು ತಲೆ ಮೇಲೆ ಕೈ ಹೊತ್ತುಕೊಂಡಿದ್ದಾರೆ.

ಹೀಗೆ ತಮಾಷೆ ವಿಚಾರಗಳ ಜೊತೆ ಜೊತೆಗೆ ಸೀರಿಯಸ್ ಮ್ಯಾಟರ್​ಗಳಲ್ಲೂ ಓ ನಲ್ಲ ಸಾಂಗ್ ಸದ್ದು ಮಾಡಿದೆ. ಇಷ್ಟು ದಿನ ಓ ನಲ್ಲ ನೀ ನಲ್ಲ.. ಕರಿಮಣಿ ಮಾಲೀಕ ನೀನಲ್ಲ ಅಂತಾ ರೀಲ್ಸ್ ಮಾಡ್ತಿದ್ದವ್ರೆಲ್ಲ ಈಗ ತಮ್ಮದೇ ಸಾಹಿತ್ಯ ಬರೆದು ವಿಡಿಯೋ ಶೇರ್ ಮಾಡ್ತಿದ್ದಾರೆ.

Shwetha M