ಸಾಕ್ಷಾತ್ಕಾರ ಚಿತ್ರದ ನಾಯಕಿ ಇನ್ನಿಲ್ಲ – ಕಂಬನಿ ಮಿಡಿದ ಚಿತ್ರರಂಗ

ಸಾಕ್ಷಾತ್ಕಾರ ಚಿತ್ರದ ನಾಯಕಿ ಇನ್ನಿಲ್ಲ – ಕಂಬನಿ ಮಿಡಿದ ಚಿತ್ರರಂಗ

ಹೈದರಾಬಾದ್: ಕನ್ನಡದಲ್ಲಿ ಭೂಕೈಲಾಸ, ಸಾಕ್ಷಾತ್ಕಾರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಜಮುನಾ ಅವರು ಹೈದರಾಬಾದ್ ನಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಜಮುನಾ ಅವರು 1936 ಆಗಸ್ಟ್ 30 ರಂದು ಹಂಪಿಯಲ್ಲಿ ಜನಿಸಿದ್ದರು. 1953ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಹಲವು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು. ಅವರ ಅಗಲಿಕೆಗೆ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಜಮುನಾ ಅವರ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ  ಫಿಲಂ ಚೇಂಬರ್ ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

‘ತೆನಾಲಿ ರಾಮಕೃಷ್ಣ’, ‘ಭೂಕೈಲಾಸ’ಸಾಕ್ಷಾತ್ಕಾರ ಸೇರಿದಂತೆ ಕನ್ನಡದಲ್ಲಿ ಒಟ್ಟು 8 ಚಿತ್ರಗಳಲ್ಲಿ ಜಮುನಾ ನಟಿಸಿದ್ದರು. ಸತ್ಯಭಾಮ ಪಾತ್ರದ ಮೂಲಕ ಜಮುನಾ ಹೆಚ್ಚು ಜನಮನ್ನಣೆ ಗಳಿಸಿದ್ದರು. ತೆಲುಗಿನಲ್ಲಿ ಸುಮಾರು 100 ಚಿತ್ರಗಳಲ್ಲಿ ಅವರು ನಟಿಸಿದ್ದರು. ಹಿಂದಿ ಚಿತ್ರರಂಗದಲ್ಲೂ ಜಮುನಾ ಹಲವು ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

suddiyaana