ಒಂದೇ ಮಹಿಳೆಗೆ ಎರಡು‌ ಗರ್ಭಕೋಶ, ಎರಡು ಭ್ರೂಣ – ಗರ್ಭಿಣಿಯನ್ನು ಪರೀಕ್ಷಿಸಿದ ವೈದ್ಯರಿಗೆ ಅಚ್ಚರಿಯಾಗಿದ್ದೇಕೆ?

ಒಂದೇ ಮಹಿಳೆಗೆ ಎರಡು‌ ಗರ್ಭಕೋಶ, ಎರಡು ಭ್ರೂಣ – ಗರ್ಭಿಣಿಯನ್ನು ಪರೀಕ್ಷಿಸಿದ ವೈದ್ಯರಿಗೆ ಅಚ್ಚರಿಯಾಗಿದ್ದೇಕೆ?

ಅವಳಿ ಜವಳಿ ಮಕ್ಕಳು ಹುಟ್ಟೋದು‌ ಸಾಮಾನ್ಯ. ಆದ್ರೆ ಇಲ್ಲಿ ಎರಡು ಗರ್ಭಕೋಶಗಳನ್ನು ಹೊಂದಿರುವ ಮಹಿಳೆಯೊಬ್ಬರು, ಎರಡರಲ್ಲಿಯೂ ಭ್ರೂಣಗಳನ್ನು ಹೊಂದಿರುವ ಅಪರೂಪದ ಘಟನೆ ಅಮೆರಿಕದಲ್ಲಿ ವರದಿಯಾಗಿದೆ. ಅಲಬಾಮಾದ ಮಹಿಳೆಯ ಎರಡೂ ಗರ್ಭಕೋಶಗಳಲ್ಲಿ ಹೆಣ್ಣು ಶಿಶುಗಳೇ ಇದ್ದು, ಕ್ರಿಸ್‌ಮಸ್ ದಿನದಂದು ಅವರು ಜನ್ಮ ನೀಡಲಿದ್ದಾರೆ ಎಂದು ವರದಿಯಾಗಿದೆ.

ಕೆಲ್ಸೆ ಹ್ಯಾಚರ್ ಮತ್ತು ಆಕೆಯ ಪತಿ ಕ್ಯಾಲೆಬ್ ಅವರಿಗೆ ಈಗಾಗಲೇ 7, 4 ಮತ್ತು 2 ವರ್ಷಗಳ ಮೂವರು ಮಕ್ಕಳಿದ್ದಾರೆ. ಅವರು ಮತ್ತೊಮ್ಮೆ ಗರ್ಭಿಣಿಯಾಗಿರುವುದನ್ನು ಕಂಡು ಅವರ ವೈದ್ಯರು ಅಚ್ಚರಿಗೊಂಡಿದ್ದಾರೆ.

 ಇದನ್ನೂ ಓದಿ: ಪಟಾಕಿ ಸಿಡಿಸುವಾಗ ಉಸಿರಿನ ಬಗ್ಗೆ ಇರಲಿ ಎಚ್ಚರ! – ದೆಹಲಿಯಂತಾಗುತ್ತಿದೆ ಬೆಂಗಳೂರಿನ ವಾಯುಗುಣಮಟ್ಟ

“ಹೊಟ್ಟೆಯ ಒಳಗೆ ಎರಡು ಗರ್ಭಕೋಶಗಳಲ್ಲಿ ಎರಡು ಮಕ್ಕಳಿವೆ ಎಂದು ನಾನು ಹೇಳಿದಾಗ ಪತಿ ನಂಬಲಿಲ್ಲ. ನೀನು ಸುಳ್ಳು ಹೇಳುತ್ತಿದ್ದೀಯಾ ಎಂದರು. ನಾನು ಸುಳ್ಳು ಹೇಳುತ್ತಿಲ್ಲ” ಎಂದು ಹೇಳಿದ್ದಾಗಿ ಕೆಲ್ಸೆ ತಿಳಿಸಿದ್ದಾರೆ.

ಕೆಲ್ಸೆ ಹ್ಯಾಚರ್ ಅವರಿಗೆ ತಮ್ಮ ಗರ್ಭಕೋಶದ ಸ್ಥಿತಿ ಹೇಗಿದೆ ಎಂಬ ಅರಿವಿದೆ. ಎರಡು ಗರ್ಭಕೋಶಗಳಿದ್ದು, ಎರಡೂ ಪ್ರತ್ಯೇಕ ಗರ್ಭಕಂಠಗಳನ್ನು ಹೊಂದಿವೆ. ಆಕೆಯ ಗರ್ಭಾವಸ್ಥೆಯು ಅಧಿಕ ಅಪಾಯಕಾರಿ ವರ್ಗದ್ದು ಎಂದು ಗುರುತಿಸಲಾಗಿದೆ. ಇದು ಬಹಳ ಬಹಳ ಅಪರೂಪದ ಪ್ರಕರಣ . ಇಂತಹ ಸಂಗತಿ ಪ್ರಸೂತಿ ಹಾಗೂ ಸ್ತ್ರೀರೋಗ ವೈದ್ಯರಿಗೆ ತಮ್ಮ ಇಡೀ ವೃತ್ತಿ ಜೀವನದಲ್ಲಿ ನೋಡಲು ಸಿಗುವುದು ಕಷ್ಟ”ಎಂದು ಪ್ರಸೂತಿ ತಜ್ಞರು ಹೇಳುತ್ತಾರೆ.

ಹುಟ್ಟಿನಿಂದಲೇ ಯಾವುದೇ ಮಹಿಳೆಯಲ್ಲಿ  ಎರಡು ಗರ್ಭಕೋಶಗಳು ಇರುವುದು ವಿರಳ ಸ್ಥಿತಿಯಾಗಿದೆ. ಹೆಣ್ಣು ಭ್ರೂಣದಲ್ಲಿ ಗರ್ಭಕೋಶವು ಎರಡು ಸಣ್ಣ ಕೊಳವೆಗಳ ರೀತಿ ಇರುತ್ತದೆ. ಭ್ರೂಣ ಬೆಳೆದಂತೆ, ಒಂದು ದೊಡ್ಡ ಹಾಗೂ ಟೊಳ್ಳಾದ ಅಂಗ ಸೃಷ್ಟಿ ಮಾಡಲು ಈ ಕೊಳವೆಗಳು ಸಾಮಾನ್ಯವಾಗಿ ಒಂದನ್ನೊಂದು ಸೇರಿಕೊಳ್ಳುತ್ತವೆ. ಈ ಅಂಗವನ್ನು ಗರ್ಭಕೋಶ ಎಂದು ಕರೆಯಲಾಗುತ್ತದೆ.

ಕೆಲವು ಸನ್ನಿವೇಶಗಳಲ್ಲಿ ಎರಡೂ ಗರ್ಭಕೋಶಗಳು ಸಂಪೂರ್ಣವಾಗಿ ಬೆಸೆದುಕೊಳ್ಳುವುದಿಲ್ಲ. ಬದಲಾಗಿ ಎರಡೂ ಪ್ರತ್ಯೇಕವಾಗಿ ಅಂಗಗಳಾಗಿ ಬೆಳೆಯುತ್ತವೆ. ಡಬಲ್ ಗರ್ಭಕೋಶವು ಹೆಣ್ಣಿನ ಗುಪ್ತಾಂಗಕ್ಕೆ ಒಂದು ದ್ವಾರ ಹೊಂದಿರುತ್ತದೆ. ಈ ದ್ವಾರವನ್ನು ಸೆರ್ವಿಕ್ಸ್ ಎಂದು ಕರೆಯಲಾಗುತ್ತದೆ. ಇತರೆ ಪ್ರಕರಣಗಳಲ್ಲಿ ಪ್ರತಿ ಗರ್ಭಕೋಶವೂ ತನ್ನದೇ ಸೆರ್ವಿಕ್ಸ್‌ಗಳನ್ನು ಹೊಂದಿರುತ್ತವೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.

ಎರಡು ಗರ್ಭಕೋಶಗಳನ್ನು ಹೊಂದಿರುವ ಮಹಿಳೆಯರು ಹೆಚ್ಚಿನ ಸಂದರ್ಭಗಳಲ್ಲಿ ಯಶಸ್ವಿಯಾಗಿ ಮಕ್ಕಳನ್ನು ಹೆರುತ್ತಾರೆ. ಆದರೆ ಈ ಸ್ಥಿತಿಯಲ್ಲಿ ಗರ್ಭಪಾತ ಅಥವಾ ಅಕಾಲಿಕ ಜನನದ ಸಾಧ್ಯತೆಯೂ ಹೆಚ್ಚು. ಅಧಿಕ ಅಪಾಯದ ಹೆರಿಗೆಗಳನ್ನು ನಿಭಾಯಿಸುವುದರಲ್ಲಿ ಪರಿಣತಿ ಹೊಂದಿರುವ ಡಾ. ರಿಚರ್ಡ್ ಡೇವಿಸ್, ಸಾವಿರ ಮಹಿಳೆಯರಿಗೆ ಮೂವರಲ್ಲಿ ಎರಡು ಸೆರ್ವಿಕ್ಸ್ ಅಥವಾ ಎರಡು ಗರ್ಭಕೋಶ ಇರುತ್ತದೆ ಎಂದಿದ್ದಾರೆ.

Shwetha M