RCB ಕಂಟಕ ಜಸ್ಟ್ ಮಿಸ್!! 20 ಕೋಟಿ ಜೊತೆ ವೆಂಕಿ ಹೊರೆ
ಅಯ್ಯರ್ ನಂಬಿದ್ರೆ ಅಯ್ಯಯ್ಯೋ.!

ಕ್ರಿಕೆಟಿಗರು ಆಡಿದಾಗ ಅಟ್ಟಕ್ಕೇರಿಸಿ, ಆಡದಾಗ ಪ್ರಪಾತಕ್ಕೆ ತಳ್ಳುವುದು ಸರ್ವೇ ಸಾಮಾನ್ಯ. ಅದರಲ್ಲೂ ಐಪಿಎಲ್ ನಲ್ಲಿ ದೊಡ್ಡ ಮೊತ್ತಕ್ಕೆ ಖರೀದಿಯಾಗಿ ಆಟವಾಡದೇ ಇದ್ದರಂತೂ ಮುಗಿದೇ ಹೋಯಿತು. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಮರ್ಯಾದೆಯನ್ನು ಇನ್ನಿಲ್ಲದಂತೆ ಹರಾಜು ಹಾಕ್ತಾರೆ. 27 ಕೋಟಿ ರೂಪಾಯಿಗೆ ಹರಾಜಾಗಿದ್ದ ಲಖನೌ ಸೂಪರ್ ಜೈಂಟ್ಸ್ ನಾಯಕ ರಿಷಬ್ ಪಂತ್ ನಷ್ಟು ಈ ಬಾರಿ ಯಾರೂ ಟ್ರೋಲ್ ಗೊಳಗಾಗಿರಲಿಕ್ಕಿಲ್ಲ. ಇದೀಗ 23.75 ಕೋಟಿ ಕೊಟ್ಟು ಕೋಲ್ಕತಾ ನೈಟ್ ರೈಡರ್ಸ್ ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ವೆಂಕಟೇಶ್ ಅಯ್ಯರ್ ಸರದಿ. ವೆಂಕಟೇಸ್ ಅಯ್ಯರ್ ಕೂಡ ಪ್ಲಾಫ್ ಶೋ ಪ್ರದರ್ಶನ ನೀಡುತ್ತಿದ್ದು, ಕೆಕೆಆರ್‌ಗೆ ಮಗ್ಗಲ ಮುಳ್ಳಾಗಿದ್ದಾರೆ.
ಆರ್‌ಸಿಬಿ ಸೇರಬೇಕಿದ್ದ ವೆಂಕಟೇಶ್ ಅಯ್ಯರ್ ಜಸ್ಟ್ ಮಿಸ್
ಐಪಿಎಲ್ ಮೆಗಾ ಹರಾಜಿನಲ್ಲಿ ಯಾವ ಆಟಗಾರ ಹೇಗೆಲ್ಲಾ ಆಡಿದ್ದಾನೆ? ಯಾವ್ಯಾವ ಪಂದ್ಯದಲ್ಲಿ ಚೆನ್ನಾಗಿ ಆಡಿದ್ದಾನೆ ಅನ್ನೋ ಲೆಕ್ಕಚಾರದಲ್ಲಿ ಮ್ಯಾನೇಜ್ಮೆಂಟ್ ಆಟಗಾರರಿಗೆ ಮಣೆ ಹಾಕುತ್ತದೆ. ಈ ವೇಳೆ ಆರ್‌ಸಿಬಿ ಸಹ ವೆಂಕಟೇಶ್ ಅಯ್ಯರ್ ಬೇಕೆ ಬೇಕು ಎಂದು ಹಣದ ಹೊಳೆಯನ್ನು ಹರಿಸಲು ಸಜ್ಜಾಗಿತ್ತು. ಆದರೆ 20 ಕೋಟಿ ರೂಪಾಯಿ ದಾಟುತ್ತಿದ್ದಂತೆ ಬಾಜಿ ಕಟ್ಟಲು ಹಿಂದೇಟು ಹಾಕಿತು. ಆಗ ಆರ್‌ಸಿಬಿ ಮ್ಯಾನೇಜ್ಮೆಂಟ್ ಬೇಸರ ಮಾಡಿಕೊಂಡಿತ್ತು. ಆದರೆ ಈಗ ವೆಂಕಟೇಶ್ ಅಯ್ಯರ್ ನೀಡುತ್ತಿರುವ ಪ್ರದರ್ಶನ ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೆ ಬಿಗ್ ರೀಲಿಫ್ ನೀಡಿದೆ. ಆತನನ್ನ ಕೈ ಬಿಟ್ಟಿದ್ದೇ ಒಳ್ಳೆಯದ್ದು ಆಯ್ತು ಅನ್ನೋ ಅಭಿಪ್ರಾಯಕ್ಕೆ ಬಂದಿದ್ದಾರೆ.
ಆಲ್‌ರೌಂಡರ್ ಕೋಟಾದಲ್ಲಿ ವೆಂಕಟ್ ಅಯ್ಯರ್ ಹೆಸರನ್ನು ಸೇರಿಸಲಾಗಿತ್ತು. ವೆಂಕಟ್ ಈ ಸೀಜನ್‌ನಲ್ಲಿ ಬೌಲಿಂಗ್ ಮಾಡುವುದು ಬಿಡಿ, ಬ್ಯಾಟಿಂಗ್ ಮಾಡುವಲ್ಲಿ ವಿಫಲರಾಗಿದ್ದಾರೆ. ಹಿಂದಿನ ಸೀಸನ್‌ನಲ್ಲಿ ಕೆಕೆಆರ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ದೊಡ್ಡ ಕೊಡುಗೆ ನೀಡಿದ್ದ ಸ್ಟಾರ್ ಪ್ಲೇಯರ್ ಈಗ ನಿರಾಸೆಯ ದೋಣಿಯ ನಾವಿಕರಾಗಿದ್ದಾರೆ. ಐಪಿಎಲ್ ಹರಾಜಿನ ಅಂಗಳಕ್ಕೆ ವೆಂಕಟೇಶ್ ಅಯ್ಯರ್ 2 ಕೋಟಿ ಮೂಲ ಬೆಲೆಯೊಂದಿಗೆ ಅಂಗಳಕ್ಕೆ ಇಳಿದಿದ್ದರು. ಕೆಕೆಆರ್ 23.75 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಇವರು ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ವೆಂಟಕೇಶ್ ಅಯ್ಯರ್ ಆಡಿರುವ 10 ಪಂದ್ಯಗಳಲ್ಲಿ 20.28ರ ಸರಾಸರಿಯಲ್ಲಿ 142 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರ ಬ್ಯಾಟ್‌ನಿಂದ ಒಂದು ಅರ್ಧಶತಕ ಬಂದಿದೆ. ಆದರೆ ಇವರು ಕಳೆದ ವರ್ಷ ಮಾಡಿದ ಇಂಪ್ಯಾಕ್ಟ್ ಮಾಡುವಲ್ಲಿ ವಿಫಲರಾಗಿರುವುದು ನಿಜಕ್ಕೂ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ವೆಂಕಟೇಶ್ ಅಯ್ಯರ್ 10 ಪಂದ್ಯಗಳಲ್ಲಿ ಕೇವಲ 15 ಬೌಂಡರಿ, 4 ಸಿಕ್ಸರ್ ಬಾರಿಸಿ ನಿರಾಸೆ ಅನುಭವಿಸಿದ್ದಾರೆ. ಲಯಕ್ಕಾಗಿ ಪರದಾಡುತ್ತಿರುವ ವೆಂಕಟೇಶ್ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದ್ದಾರೆ. ಅಲ್ಲೇ ಪ್ಲಾಫ್ ಶೋ ನೀಡುತ್ತಿರೋ ವೆಂಕಟೇಶ್ ಅಯ್ಯರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಕೂಡ ಆಗುತ್ತಿದೆ. ಕೆಕೆಆರ್ ಸುಖಾ ಸುಮ್ಮನೆ ಇಬ್ಬರ ಆಟಗಾರರ ಭಾರಿ ಮೊತ್ತದ ಹಣ ಸುರಿದು ಕೈ ಸುಟ್ಟುಕೊಂಡಿದೆ. ಆರ್‌ಸಿಬಿ ದೊಡ್ಡ ವಿಘ್ನದಿಂದ ಪಾರಾಗಿದೆ.