RCB ವೆಂಕಿ ಹೊಸ ಇನ್ನಿಂಗ್ಸ್‌.. ಕ್ರಿಕೆಟರ್‌ ಈಗ ಡಾ. ವೆಂಕಟೇಶ್‌ ಅಯ್ಯರ್‌! – ರಿಯಲ್ ನಲ್ಲೂ ವೆಂಕಿ ALL ROUNDER!  

RCB ವೆಂಕಿ ಹೊಸ ಇನ್ನಿಂಗ್ಸ್‌.. ಕ್ರಿಕೆಟರ್‌ ಈಗ ಡಾ. ವೆಂಕಟೇಶ್‌ ಅಯ್ಯರ್‌! – ರಿಯಲ್ ನಲ್ಲೂ ವೆಂಕಿ ALL ROUNDER!  

ವೆಂಕಟೇಶ್‌ ಅಯ್ಯರ್‌.. ಆರ್‌ಸಿಬಿ ತಂಡದ ಆಪತ್ಬಾಂದವ ಅಂತ ಹೇಳಿದ್ರೆ ತಪ್ಪಾಗಲ್ಲ. IPL ಸೀಸನ್‌ 19ರಲ್ಲಿ ಅದ್ಬುತ ಪ್ರದರ್ಶನ ನೀಡ್ತಾ ಬಂದಿದ್ರು. ಆರ್‌ಸಿಬಿ ಟ್ರೋಪಿ ಗೆಲ್ಲಲು ಅಯ್ಯರ್‌ ಪಾತ್ರ ಕೂಡ ದೊಡ್ಡದಿದೆ. ವೆಂಕಟೇಶ್‌ ಅಯ್ಯರ್‌ ಮಲ್ಟಿ ಟ್ಯಾಲೆಂಡೆಟ್‌ ಅಂತಾನೇ ಹೇಳ್ಬೋದು.. ಅಯ್ಯರ್‌ ಆಟಕ್ಕೂ ಸೈ.. ಓದಿಗೂ ಸೈ ಅನ್ನಿಸಿಕೊಂಡಿದ್ದಾರೆ. ಕ್ರಿಕೆಟ್‌ ಲೋಕದಲ್ಲಿ ಮಿಂಚುತ್ತಲೇ ಅಯ್ಯರ್‌ ಈಗ ಮತ್ತೊಂದು ಸಾಧನೆ ಮಾಡಿದ್ದಾರೆ. ವೆಂಕಿ ಈಗ ಡಾಕ್ಟರ್ ವೆಂಕಟೇಶ್‌ ಅಯ್ಯರ್..‌

ಇದನ್ನೂ ಓದಿ: BALANCE ತಪ್ಪಿದ ಬ್ಯಾಟಿಂಗ್! – IPL ಆಟ ವಿದೇಶಗಳಲ್ಲಿ ನಡೆಯಲ್ವಾ?

IPL 2026ರಲ್ಲಿ ಹೆಚ್ಚು ಸದ್ದು ಮಾಡಿದ ಆಟಗಾರರಲ್ಲಿ ಆರ್‌ಸಿಬಿ ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌ ಕೂಡ ಒಬ್ರು. ಈ ವರ್ಷ ವೆಂಕಿ ಬೆಂಕಿ ಆಟಕ್ಕೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ರು. ಈ ಮೂಲಕ ವೆಂಕಟೇಶ್‌ ಅಯ್ಯರ್‌ ಫ್ರಾಂಚೈಸಿ ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ರು. ಬ್ಯಾಟಿಂಗ್‌ಗೂ ಸೈ. ಬೌಲಿಂಗ್‌ಗೂ ಸೈ ಅನ್ನಿಸಿಕೊಂಡಿರುವ ವೆಂಕಟೇಶ್‌ ಅಯ್ಯರ್‌ ಈಗ ಓದಿನಲ್ಲೂ ನಂಬರ್‌ 1 ಅನ್ನಿಸಿಕೊಂಡಿದ್ದಾರೆ. ಕ್ರಿಕೆಟ್‌ ವೃತ್ತಿಜೀವನ ಜೊತೆಗೆ ಉನ್ನತ ಶಿಕ್ಷಣವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅತಿ ಹೆಚ್ಚು ಓದಿದ ಕ್ರಿಕೆಟರ್‌ ಅನ್ನಿಸಿಕೊಂಡಿದ್ದಾರೆ ವೆಂಕಿ.

ಕ್ರಿಕೆಟ್‌ ಲೋಕಕ್ಕೆ ಕಾಲಿಟ್ರೆ ಶಿಕ್ಷಣದ ಕಡೆ ಹೆಚ್ಚು ಗಮನ ಕೊಡೋದಿಕ್ಕೆ ಆಗಲ್ಲ ಅನ್ನೊ ಮಾತಿದೆ. ಕೆಲವರು ಶಿಕ್ಷಣಕ್ಕೆ ಇಂಪಾರ್ಟೆನ್ಸ್‌ ಕೊಡಲು ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದೂ ಇದೆ. ಹಾಗೇ ಕ್ರಿಕೆಟ್‌ನಲ್ಲಿ ಸಾಧನೆ ಮಾಡಿದವರು ಓದಿದ್ದು ಕಡಿಮೆ. ಸ್ಟಾರ್‌ ಕ್ರಿಕೆಟರ್ಸ್‌ ಕೂಡ ಪಿಯುಸಿಗೆ ಓದು ನಿಲ್ಲಿಸಿದ್ದಾರೆ. ಕೆಲಸದ ಒತ್ತಡದಿಂದಾಗಿ ಕ್ರಿಕೆಟ್‌ನ ದಂತಕತೆಗಳಾದ ಎಂ ಎಸ್‌ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಲೆಜೆಂಡರಿ ಟೀಂ ಇಂಡಿಯಾ ಕ್ರಿಕೆಟಿಗರು ಶಿಕ್ಷಣವನ್ನ ಅರ್ಧಕ್ಕೆ ನಿಲ್ಲಿಸಿದ್ದರು. ಆದ್ರೆ RCB ವೆಂಕಟೇಶ್‌ ಅಯ್ಯರ್‌ ಕ್ರಿಕೆಟ್‌ಜೊತೆಗೆ ಶಿಕ್ಷಣವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶಿಕ್ಷಣ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹೌದು, ಮದ್ಯಪ್ರದೇಶದ ಇಂಧೋರ್‌ನಲ್ಲಿ ಹುಟ್ಟಿಬೆಳೆದ ವೆಂಕಟೇಶ್‌ ಅಯ್ಯರ್‌ಗೆ ಕ್ರಿಕೆಟ್‌ ಮೇಲಿನ ಆಸಕ್ತಿ ಹೆಚ್ಚಾಗೇ ಇತ್ತು. ಆಟದಲ್ಲೇ ಕಾಲಕಳೆಯುತ್ತಿದ್ದ ವೆಂಕಟೇಶ್‌ಗೆ ಪೋಷಕರು ಓದಿನ ಕಡೆ ಹೆಚ್ಚಿನ ಗಮನ ಕೊಡುವಂತೆ ಹೇಳಿದ್ರು. ಹೀಗಾಗಿ ಎರಡು ಧೋಣಿಯಲ್ಲಿ ಪಯಣಿಸುವ ಸವಾಲು ಅಯ್ಯರ್ ಮುಂದಿತ್ತು. ಆದರೆ ಯಾವುದಾದರೂ ಪದವಿ ಪಡಯಲೇಬೇಕೆಂದು ಮನೆಯಲ್ಲಿ ಸೂಚಿಸಲಾಗಿತ್ತು. ಆ ಬಳಿಕ ನಿನ್ನ ದಾರಿಯನ್ನು ಆಯ್ಕೆ ಮಾಡಲು ಸ್ವಾತಂತ್ರ್ಯ ನೀಡುವುದಾಗಿ ತಿಳಿಸಿದ್ದರು. ಅದರಂತೆ ವೆಂಕಟೇಶ್ ಅಯ್ಯರ್ ಕ್ರಿಕೆಟ್​ ಜೊತೆ ಓದಿನತ್ತ ಕೂಡ ಗಮನ ನೀಡಿದರು. ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಸಾಗಿದರು. ಇಂದೋರ್‌ನ ಸೇಂಟ್ ಪಾಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರೈಮರಿ ಹಾಗೂ ಹೈಸ್ಕೂಲ್‌ ಎಜುಕೇಷನ್‌ ಪಡೆದ್ರು. ಇನ್ನು ಅಯ್ಯರ್‌ ದೇಶೀಯ ಕ್ರಿಕೆಟ್‌ನಲ್ಲಿ ರೈಲ್ವೇಸ್ ಮತ್ತು ಮಧ್ಯಪ್ರದೇಶವನ್ನು ಪ್ರತಿನಿಧಿಸಲು ಪ್ರಾರಂಭಿಸುವಾಗ ಬಿ.ಕಾಂ ಪದವಿ ಪಡೆದರು. ಅದಾದ ಬಳಿಕ ವೆಂಕಿ ಇಂದೋರ್‌ನ ಪ್ರಸಿದ್ಧ ದೇವಿ ಅಹಲ್ಯಾ ವಿಶ್ವವಿದ್ಯಾಲಯದಿಂದ ಹಣಕಾಸು ಮತ್ತು ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಎಂಬಿಎ ಪೂರ್ಣಗೊಳಿಸಿದ್ದಾರೆ. ಇದೀಗ ಶೀಘ್ರದಲ್ಲೇ ಪಿಎಚ್​ಡಿ ಮೂಲಕ ಡಾಕ್ಟರೇಟ್ ಕೂಡ ಪಡೆಯಲಿದ್ದಾರೆ.

ಇನ್ನೊಂದು ವಿಚಾರ ಎನಂದ್ರೆ ಓದಿನಲ್ಲಿ ಮುಂದಿದ್ದ ವೆಂಕಟೇಶ್‌ ಅಯ್ಯರ್‌ ಬಿಕಾಂ ಕಂಪ್ಲೀಟ್‌ ಆದ ಬೆನ್ನಲ್ಲೇ CA ಇಂಟರ್ಮೀಡಿಯೇಟ್ ಪರೀಕ್ಷೆಗಳಲ್ಲಿಯೂ ಪಾಸ್‌ ಆಗ್ತಾರೆ. ಅಷ್ಟೇ ಅಲ್ಲ ಅವರಿಗೆ ಕೈತುಂಬ ಸಂಬಳ ಕೊಡುವ ಕಂಪನಿ ಜಾಬ್‌ ಕೂಡ ಕೊಡುತ್ತೆ. ಬಿಗ್ ಫೋರ್ ಅಕೌಂಟಿಂಗ್ ಸಂಸ್ಥೆಗಳಲ್ಲಿ ಒಂದಾದ ಡೆಲಾಯ್ಟ್‌ಕಂಪನಿ ₹15 ಲಕ್ಷ ವಾರ್ಷಿಕ ವೇತನದೊಂದಿಗೆ ಕೆಲಸ ಆಫರ್‌ ನೀಡಿತ್ತು. ಆದರೆ ಅಯ್ಯರ್‌ ಕ್ರಿಕೆಟ್‌ ಮೇಲಿನ ಪ್ರೀತಿಯಿಂದ ಈ ಕೆಲಸದ ಆಫರ್‌ನ ರಿಜೆಕ್ಟ್‌ ಮಾಡಿದ್ರು. ಕ್ರಿಕೆಟಿಗರಾಗಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದ್ರು. ಅದ್ರೆ ಶಿಕ್ಷಣವನ್ನ ಇಲ್ಲಿಗೆ ಸ್ಟಾಪ್‌ ಮಾಡಿಲ್ಲ. ಐಪಿಎಲ್ ಮೂಲಕ ಕೋಟಿ ಗಳಿಸಿದರೂ ಮತ್ತು ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದರೂ, ಅವರು ಶಿಕ್ಷಣಕ್ಕೆ ಆದ್ಯತೆ ನೀಡುವುದನ್ನು ಮುಂದುವರೆಸಿರು. ಅಯ್ಯರ್‌ ಡೆಡಿಕೇಷನ್‌ ಎಷ್ಟಿತ್ತಂದ್ರೆ ಕ್ರಿಕೆಟ್‌ ಪ್ರ್ಯಾಕ್ಟೀಸ್‌ ಮುಗಿಯುತ್ತಿದ್ದಂತೆ ಮತ್ತೆ ಓದಲು ಶುರುಮಾಡ್ತಿದ್ರು. ಮ್ಯಾಚ್‌ ಟೈಂ ನಲ್ಲೂ ಓದಿಗೆ ಇಂಪಾರ್ಟೆನ್ಸ್‌ ಕೊಡ್ತಾ ಬಂದಿದ್ದಾರೆ. ಡ್ರೆಸ್ಸಿಂಗ್‌ ರೂಂನಲ್ಲೂ ಅಯ್ಯರ್‌ ಬುಕ್‌ ಪೆನ್‌ ಹಿಡಿದು ಅಭ್ಯಾಸ ಮಾಡಿದ್ರು. ಇದೀಗ ವೆಂಕಿ ಸದ್ಯ ಹಣಕಾಸಿನಲ್ಲಿ ಪಿಎಚ್‌ಡಿ ಪದವಿ ಪಡೆಯುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಡಾ. ವೆಂಕಟೇಶ್ ಅಯ್ಯರ್ ಆಗಲಿದ್ದಾರೆ. ಈ ಮೂಲಕ ಅಯ್ಯರ್‌ ಕ್ರಿಕೆಟ್‌ ಜೊತೆಗೂ ಕಲಿಕೆಯೂ ಮುಖ್ಯ. ಈ ಪೀಳಿಗೆಯಲ್ಲಿ ಉತ್ತಮ ಸಾಧನೆ ಮಾಡೋದ್ರ ಜೊತೆ ಶಿಕ್ಷಣಕ್ಕೂ ಇಂಪಾರ್ಟೆನ್ಸ್‌ ಕೊಡ್ಬೇಕು. ಜೀವನದಲ್ಲೂ ಕಲಿಕೆ ಮುಖ್ಯ ಅನ್ನೋ ಮೆಸೆಜ್‌ನ ನೀಡಿದ್ದಾರೆ. ವೆಂಕಟೇಶ್‌ ಅಯ್ಯರ್‌ ಈ ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ.

Shwetha M