ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಹೈದರಾಬಾದ್ ಗೆ ಸೋಲು – ಕೆಕೆಆರ್ಗೆ 80 ರನ್ಗಳ ಭರ್ಜರಿ ಗೆಲುವು

ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಹೈದರಾಬಾದ್ ಗೆ ಸೋಲು – ಕೆಕೆಆರ್ಗೆ 80 ರನ್ಗಳ ಭರ್ಜರಿ ಗೆಲುವು

ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆದ ಪಂದ್ಯದಲ್ಲಿ ಕೆಕೆಆರ್‌ ಗೆದ್ದು ಬೀಗಿದೆ. 80 ರನ್‌ಗಳ ಅಂತರದಲ್ಲಿ ಕೆಕೆಆರ್‌ ಭರ್ಜರಿ ಗೆಲುವು ಸಾಧಿಸಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ 27 ಸಾವಿರ ಪ್ರಯಾಣಿಕರಿಂದ ನಿಯಮ ಉಲ್ಲಂಘನೆ! – ಪ್ರಯಾಣದ ವೇಳೆ ಮಾಡಿದ ತಪ್ಪುಗಳು ಏನೇನು ಗೊತ್ತೆ?

ಈಡನ್ ಗಾರ್ಡರ್ನ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಕೋಲ್ಕತ್ತಾ ಬ್ಯಾಟಿಂಗ್‌ ಮಾಡಿತ್ತು. ವೆಂಕಟೇಶ್‌ ಅಯ್ಯರ್‌ ಸ್ಫೋಟಕ ಅರ್ಧಶತಕ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಕೋಲ್ಕತ್ತಾ ನೈಟ್‌ರೈಡರ್ಸ್‌ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 200 ರನ್‌ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ 16.4 ಓವರ್‌ಗಳಲ್ಲಿ 120 ರನ್‌ ಕಲೆ ಹಾಕಿ ಆಲೌಟ್‌ ಆಯಿತು. ಈ ಮೂಲಕ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ಕೆಕೆಆರ್‌ 80 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ತನ್ನ 2ನೇ ಗೆಲುವು ದಾಖಲಿಸಿದೆ.

ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 29 ಎಸೆತಗಳಲ್ಲಿ 3 ಸಿಕ್ಸರ್‌, 7 ಬೌಂಡರಿ ನೆರವಿಂದ 60 ರನ್‌, ಆಂಗ್ಕ್ರಿಶ್ ರಘುವಂಶಿ 32 ಎಸೆತಗಳಲ್ಲಿ 2 ಸಿಕ್ಸರ್‌, 5 ಬೌಂಡರಿ ನೆರವಿಂದ 50 ರನ್‌, ಅಜಿಂಕ್ಯ ರಹಾನೆ 27 ಎಸೆತಗಳಲ್ಲಿ 4 ಸಿಕ್ಸರ್‌, 1 ಬೌಂಡರಿ ನೆರವಿನಿಂದ 38 ರನ್‌, ರಿಂಕು ಸಿಂಗ್ 17 ಎಸೆತಗಳಲ್ಲಿ 1 ಸಿಕ್ಸರ್‌, 4 ಬೌಂಡರಿ ನೆರವಿನಿಂದ 32 ರನ್‌ ಕಲೆ ಹಾಕಿದರು.

ಹೈದರಾಬಾದ್‌ ಪರ ಮೊಹಮ್ಮದ್ ಶಮಿ, ಪ್ಯಾಟ್ ಕಮ್ಮಿನ್ಸ್, ಜೀಶನ್ ಅನ್ಸಾರಿ, ಹರ್ಷಲ್ ಪಟೇಲ್, ಕಮಿಂಡು ಮೆಂಡಿಸ್ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

ಹೈದರಾಬಾದ್‌ ಪರ ಹೆನ್ರಿಕ್ ಕ್ಲಾಸೆನ್ 21 ಎಸೆತಗಳಲ್ಲಿ 2 ಸಿಕ್ಸರ್‌, 2 ಬೌಂಡರಿ ನೆರವಿಂದ 33, ಕಮಿಂಡು ಮೆಂಡಿಸ್ 20 ಎಸೆತಗಳಿಲ್ಲ 2 ಸಿಕ್ಸರ್‌, 1 ಬೌಂಡರಿ ನೆರವಿನಿಂದ 27 ರನ್‌, ನಿತಿಶ್‌ ಕುಮಾರ್‌ ರೆಡ್ಡಿ 15 ಎಸೆತಗಳಲ್ಲಿ 19 ರನ್‌ ಕಲೆ ಹಾಕಿದರು.

ವೈಭವ್ ಅರೋರಾ, ವರುಣ್ ಚಕ್ರವರ್ತಿ ತಲಾ 3 ವಿಕೆಟ್‌, ಆಂಡ್ರೆ ರಸೆಲ್ 2 ವಿಕೆಟ್‌, ಹರ್ಷಿತ್ ರಾಣಾ, , ಸುನಿಲ್ ನರೈನ್ ತಲಾ ಒಂದೊಂದು ವಿಕೆಟ್‌ ಕಲೆ ಉರುಳಿಸಿದರು.

Shwetha M

Leave a Reply

Your email address will not be published. Required fields are marked *