ವಾಹನ ಮಾಲೀಕರೇ ಎಚ್ಚರ! – ಫೆಬ್ರವರಿ 1ರಿಂದ FASTAG ನಿಷ್ಕ್ರಿಯೆ ಪಕ್ಕಾ!
ಮೊದ್ಲೆಲ್ಲಾ ಟೋಲ್ಗಳಲ್ಲಿ ಸಿಬ್ಬಂದಿಗೆ ಹಣ ಕೊಟ್ಟು ಟೋಲ್ ಪಾವತಿ ಮಾಡ್ಬೇಕಿತ್ತು. ಆದ್ರೀಗ ಫಾಸ್ಟ್ಯಾಗ್ ವ್ಯವಸ್ಥೆ ಬಂದ ಮೇಲೆ ಹಣ ಡಿಜಿಟಲ್ ಪೇಮೆಂಟ್ ಮೂಲಕ ಕಟ್ ಆಗುತ್ತೆ. ಆದ್ರೆ ನಿಮ್ಮ ಫಾಸ್ಟ್ಟ್ಯಾಗ್ ಮುಂದಿನ ತಿಂಗಳಿಂದ ನಿಷ್ಕ್ರಿಯೆ ಆಗುವ ಚಾನ್ಸಸ್ ಇದೆ. ಯಾಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಈ ಕೆಲ್ಸ ಮಾಡಿದ್ರೆ ಒಂದೇ ಬಾರಿಗೆ 50 ಸಾವಿರ ರೂ. ಗೆಲ್ಲಬಹುದು! – ಸರ್ಕಾರ ಕೋಡ್ತಿರೋ ಆಫರ್ ನ ಮಿಸ್ ಮಾಡ್ಕೊಳ್ಬೇಡಿ!
ಫಾಸ್ಟ್ಯಾಗ್ ಪಾವತಿಯಲ್ಲೂ ಕೆಲವರು ಕಳ್ಳಾಟ ಆಡ್ತಿರೋದು ಬಯಲಾಗಿದೆ. ಬೇರೆ ಬೇರೆ ವಾಹನಗಳಿಗೆ ಒಂದೇ ಫಾಸ್ಟ್ಯಾಗ್ ಅಥವಾ ಒಂದೇ ವಾಹನಕ್ಕೆ ಹಲವು ಫಾಸ್ಟ್ಯಾಗ್ ಬಳಕೆ ಮಾಡ್ತಿದ್ದಾರೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ‘ಒಂದು ವಾಹನ, ಒಂದು ಫಾಸ್ಟ್ಟ್ಯಾಗ್’ ಅಭಿಯಾನವನ್ನು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಫಾಸ್ಟ್ಯಾಗ್ ಹೊಂದಿರುವ ವಾಹನ ಮಾಲೀಕರು, ಫಾಸ್ಟ್ಯಾಗ್ ನಿಷ್ಕ್ರಿಯಗೊಳ್ಳುವುದನ್ನು ತಪ್ಪಿಸಲು ಜನವರಿ 31ರೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.
ಇ-ಕೆವೈಸಿ ಭರ್ತಿಯ ಜತೆಗೆ ಜನವರಿ 31ರೊಳಗೆ ತಮ್ಮ ಬಳಿ ಇರುವ ಹಲವು ಫಾಸ್ಟ್ಯಾಗ್ಗಳ ಪೈಕಿ ಇತ್ತೀಚೆಗೆ ಖರೀದಿಸಿದನ್ನು ಹೊರತುಪಡಿಸಿ ಉಳಿದದ್ದನ್ನು ಬ್ಯಾಂಕ್ಗೆ ಒಪ್ಪಿಸಬೇಕು. ಬಳಿಕ ಗ್ರಾಹಕರ ಬಳಿ ಇರುವ ತೀರಾ ಇತ್ತೀಚಿನ ಫಾಸ್ಟ್ಯಾಗ್ ಹೊರತುಪಡಿಸಿ ಉಳಿದಿದ್ದೆಲ್ಲಾ ನಿಷ್ಕ್ರಿಯವಾಗುತ್ತದೆ. ಒಂದು ವೇಳೆ ಇ – ಕೆವೈಸಿ ಮಾಡಿಸದೇ ಇದ್ದರೆ ಫಾಸ್ಟ್ಯಾಗ್ನಲ್ಲಿ ಹಣ ಇದ್ದ ಹೊರತಾಗಿಯೂ ಅದು ಬಳಕೆಗೆ ಬರುವುದಿಲ್ಲ. ನಿಮಗೆ ಈ ಬಗ್ಗೆ ಗೊಂದಲಗಳಿದ್ದರೆ ನೀವು ಫಾಸ್ಟ್ಯಾಗ್ ಪಡೆದುಕೊಂಡ ಬ್ಯಾಂಕ್ಗಳಿಗೆ ಹೋಗಿ ತಿಳಿಯಬೇಕಾಗುತ್ತದೆ. ಅಥವಾ ಟೋಲ್ ಪ್ಲಾಜಾಗೆ ಹೋಗಿ ಮಾಹಿತಿ ಪಡೆಯಬಹುದು.
ಇ-ಕೆವೈಸಿ ಮಾಡಿಸಲು ಏನೇನು ದಾಖಲೆ ಬೇಕು?
ಪಾಸ್ಪೋರ್ಟ್, ವಾಹನ ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಪಾನ್ ನಂಬರ್, ಆಧಾರ್ ಸಂಖ್ಯೆ, ನರೇಗಾ ಅಥವಾ ಸರ್ಕಾರಿ ದಾಖಲೆಗಳು, ವಾಹನದ ನೋಂದಣಿ ಪ್ರಮಾಣಪತ್ರ ಬೇಕಾಗುತ್ತದೆ. ಅಷ್ಟಕ್ಕೂ NHAI ಇಂಥಾದ್ದೊಂದು ನಿರ್ಧಾರಕ್ಕೆ ಬರಲು ಕಾರಣವೂ ಇದೆ. ಇತ್ತೀಚೆಗೆ ಒಂದೇ ಫಾಸ್ಟ್ಯಾಗನ್ನು ಬೇರೆ ಬೇರೆ ವಾಹನಗಳಿಗೆ ಬಳಸುವುದು ಹಾಗೂ ಒಂದೇ ವಾಹನಕ್ಕೆ ಬೇರೆ ಬೇರೆ ಫಾಸ್ಟ್ಯಾಗ್ ಲಿಂಕ್ ಮಾಡುವ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ NHAI ಬಿಗಿ ಕ್ರಮ ತೆಗೆದುಕೊಂಡಿದೆ. ಇದು ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಂ ದಕ್ಷತೆಯನ್ನು ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಲನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ನೀವೇನಾದ್ರೂ ಒಂದಕ್ಕಿಂತ ಹೆಚ್ಚು ಫಾಸ್ಟ್ಯಾಗ್ಗಳನ್ನ ಹೊಂದಿದ್ದರೆ ಈ ಕೂಡಲೆ ಬ್ಯಾಂಕ್ಗೆ ಒಪ್ಪಿಸಿ. ಇಲ್ಲದಿದ್ರೆ ಫಾಸ್ಟ್ಟ್ಯಾಗ್ ನಿಷ್ಕ್ರಿಯ ಆಗುತ್ತದೆ.