ಗಗನಕ್ಕೇರಿದ ತರಕಾರಿ ಬೆಲೆ – ಬೆಳ್ಳುಳ್ಳಿ, ಬೀನ್ಸ್‌ ಬಲು ದುಬಾರಿ!

ಗಗನಕ್ಕೇರಿದ ತರಕಾರಿ ಬೆಲೆ – ಬೆಳ್ಳುಳ್ಳಿ, ಬೀನ್ಸ್‌ ಬಲು ದುಬಾರಿ!

ಮಾರ್ಕೆಟ್‌ಗೆ ಹೋದ್ರೆ ಜೇಬಿಗೆ ಕತ್ತರಿ ಬೀಳುವ ಪರಿಸ್ಥಿತಿ ಎದುರಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ರೋಸಿ ಹೋಗಿದ್ದಾರೆ. ಅಕ್ಕಿ ಬೇಳೆ ಎಲ್ಲವೂ ದುಬಾರಿಯಾಗಿದೆ. ಇದೀಗ ತರಕಾರಿಗಳ ಬೆಲೆ ಕೂಡ ಗಗನಕ್ಕೆ ಏರಿದ್ದು, ಗ್ರಾಹಕರು ಕಂಗಾಲು ಆಗುವಂತೆ ಆಗಿದೆ.

ಇದನ್ನೂ ಓದಿ: IPL ಫೈನಲ್​​ನಲ್ಲಿ WPL ಘಟನೆಗಳು ಪುನರಾವರ್ತನೆ!  – ಮ್ಯಾಚ್‌ನಲ್ಲಿ ಅಚ್ಚರಿಯ ಕಾಕತಾಳೀಯಗಳು!

ಹೌದು, ರಾಜ್ಯದಲ್ಲಿ ತರಕಾರಿಗಳ ಬೆಲೆ ಕೂಡ ಭಾರಿ ಏರಿಕೆಯಾಗುತ್ತಿದೆ. ಕೆಜಿಗೆ 20 ರೂ. ಇದ್ದ ತರಕಾರಿಗಳ ಬೆಕೆ ಈಗ ಬರೋಬ್ಬರಿ 80 ರೂ. ಗಡಿ ದಾಟಿವೆ. ಬಿಸಿಲಿನ ಪ್ರಮಾಣ ಹೆಚ್ಚಾಗಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ‌ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ.‌ ಅಲ್ಲದೇ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಈ ವಾರ ಕೂಡ ಬೆಲೆ‌ ಗಗನಕ್ಕೇರಿದೆ.

ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಮತ್ತು ಮಳೆ ಕೊರತೆಯಿಂದ ಹೆಚ್ಚಿನ ಪ್ರಮಾಣದಲ್ಲಿ‌ ಫಸಲು ಬಂದಿಲ್ಲ. ಈ ಮಧ್ಯೆ, ಕಳೆದ ಒಂದು ವಾರದಿಂದ ಅಕಾಲಿಕವಾಗಿ ಮಳೆಯೂ‌ ಬರುತ್ತಿದ್ದು, ಬೆಳೆ ಹಾಳಾಗುತ್ತಿದೆ. ಹೀಗಾಗಿ ಬರುವ ಅಲ್ಪ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ‌ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿಗಳ‌ ಬೆಲೆ‌ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ‌. ಮಾರುಕಟ್ಟೆಗಳಲ್ಲಿ ಸ್ವಲ್ಪ ಪರವಾಗಿಲ್ಲವೆಂಬ ಬೆಲೆ ಇದ್ದರೂ ಬಡವಾಣೆಗಳ, ಮನೆಗಳ ಬಳಿಯ ತರಕಾರಿ ಅಂಗಡಿಗಳು, ತಳ್ಳುವ ಗಾಡಿ ವ್ಯಾಪಾರಸ್ಥರು, ಹಾಪ್ ಕಾಮ್ಸ್​​​​ಗಗಳಲ್ಲಿ ಬೆಲೆ ವಿಪರೀತ ಹೆಚ್ಚಾಗಿದೆ ಎಂದು ವ್ಯಾಪಾರಸ್ಥರು‌ ಹೇಳುತ್ತಿದ್ದಾರೆ.

ಯಾವ ತರಕಾರಿಗೆ ಎಷ್ಟಿದೆ ಬೆಲೆ?

ತರಕಾರಿ – ಹಿಂದಿನ ಬೆಲೆ – ಈಗಿನ ಬೆಲೆ (ಕೆಜಿಗೆ ರೂಪಾಯಿಗಳಲ್ಲಿ)

  • ಕ್ಯಾರೇಟ್ – 80 – 82 ರೂ.
  • ಬೀನ್ಸ್ – 220 – 220 ರೂ.
  • ನವಿಲುಕೋಸು – 60 – 102 ರೂ.
  • ಬದನೆಕಾಯಿ – 60 – 70 ರೂ.
  • ದಪ್ಪ ಮೆಣಸಿನಕಾಯಿ – 40 – 65 ರೂ.
  • ಬಟಾಣಿ – 140 – 180 ರೂ.
  • ಬೆಂಡೆಕಾಯಿ – 60 – 66 ರೂ.
  • ಟೊಮಾಟೋ – 30 – 60 ರೂ.
  • ಆಲೂಗೆಡ್ಡೆ -30 – 56 ರೂ.
  • ಹಾಗಲಕಾಯಿ – 60 – 82 ರೂ.
  • ಸೋರೆಕಾಯಿ – 40 – 50 ರೂ.
  • ಬೆಳ್ಳುಳ್ಳಿ – 300 – 338 ರೂ.
  • ಶುಂಠಿ – 180 – 195 ರೂ.
  • ಪಡುವಲಕಾಯಿ – 30 – 60 ರೂ.
  • ಗೋರಿಕಾಯಿ – 50 – 89 ರೂ.
  • ಹಸಿ ಮೆಣಸಿಕಾಯಿ – 80 – 106 ರೂ.
  • ಬಿಟ್ರೋಟ್ – 40 – 46 ರೂ.
  • ಈರುಳ್ಳಿ – 20 – 39 ರೂ.
  • ನಾಟಿ ಕೊತ್ತಂಬರಿ ಸೊಪ್ಪು –  100 ರೂ.

Shwetha M