ಅಂದು ಬಾಲನಟಿ.. ಇಂದು ಹಿರೋಯಿನ್! – ವೀರ ಮದಕರಿಯ ಚೂಟಿ ಹುಡುಗಿ ಇವಳೇ

ಅಂದು ಬಾಲನಟಿ.. ಇಂದು ಹಿರೋಯಿನ್! – ವೀರ ಮದಕರಿಯ ಚೂಟಿ ಹುಡುಗಿ ಇವಳೇ

ವೀರ ಮದಕರಿ.. 2009 ರಲ್ಲಿ ಹಿಟ್ ಆಗಿದ್ದ ಸಿನಿಮಾ.. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್, ರಾಗಿಣಿ ಜೊತೆಗೆ ಪುಟ್ಟ ಮಗು ಕೂಡ ಸಖತ್ತಾಗಿ ಅಭಿನಯಿಸಿತ್ತು. ಅಂದು ವೀರ ಮದಕರಿಯ ಮುದ್ದಿನ ಮಗಳಾಗಿ ನಟಿಸಿದ್ದ ಪುಟ್ಟ ಮಗು ಇಂದು  ಹಿರೋಯಿನ್ ಆಗ್ತಿದ್ದಾಳೆ.. ಮತ್ತೊಂದು ಸಿನಿಮಾ ಮೂಲಕ ತೆರೆ ಮೇಲೆ ಎಂಟ್ರಿ ಕೊಡ್ತಾ ಇದ್ದಾಳೆ.. ಅಷ್ಟಕ್ಕೂ ಕಿಚ್ಚನ ಮಗಳಾಗಿ ನಟಿಸಿದ್ದ ಆ ಬಾಲನಟಿ ಯಾರು.. ಯಾವ ಸಿನಿಮಾದಲ್ಲಿ ಹಿರೋಯಿನ್ ಆಗಿ ಮಿಂಚಲಿದ್ದಾಳೆ.

ಜೆರುಶಾ ಕ್ರಿಸ್ಟೋಫರ್(Jerusha Christopher) ಅಂದು ವೀರ ಮದಕರಿಯ ಮುದ್ದಿನ ಪುಟಾಣಿ.. ಇಂದು ಹಿರೋಯಿನ್ ಆಗಿ ತೆರೆಮೇಲೆ ಬರಲು ಸಜ್ಜಾಗಿದ್ದಾರೆ.. ಬೆಂಗಳೂರಿನವರೇ ಆದ ಜೆರುಶಾ ಈಗ ಹಾಟ್ ಹಿರೋಯಿನ್.  ಸದ್ಯದಲ್ಲೆ ಬೆಳ್ಳಿಪರದೆ ಮೇಲೆ ಜೆರುಶಾ ಹೀರೋಯಿನ್ ಆಗಿ ಮಿಂಚಲಿದ್ದಾರೆ..

ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಮಹೇಶ್ ಬಾಬು ಸಿನಿಮಾದಲ್ಲಿ ಜೆರುಶಾ ನಟಿಸಲಿದ್ದಾರೆ.. ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಮನೆಮಾತಾಗಿರುವ ಸ್ಮೈಲ್ ಗುರು ರಕ್ಷಿತ್‌ಗೆ ಜೋಡಿಯಾಗಿ ಜೆರುಶಾ ಮಿಂಚಲಿದ್ದಾರೆ. ಅಂದಹಾಗೇ ಮಹೇಶ್ ಬಾಬು ಹೊಸ ಕಥೆಗೆ ಸದ್ಯ ಶೀರ್ಷಿಕೆ ಫೈನಲ್ ಆಗಿಲ್ಲ. ಯುವಕರ ಕೇಂದ್ರಿತ ಮನರಂಜನೆಯ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಚೇತನ್ ಮತ್ತು ಅನುರಾಗ್ ಬಂಡವಾಳ ಹೂಡಲಿದ್ದಾರೆ. ಮಹೇಶ್ ಬಾಬು ಅವರು ಈ‌ ಸಿನಿಮಾದ ಪ್ರಮುಖ ಪಾತ್ರವೊಂದಕ್ಕೆ ಮತ್ತೊಬ್ಬ ಪ್ರತಿಭಾವಂತ ನಟಿಯ ಆಯ್ಕೆಯಲ್ಲಿ ತೊಡಗಿದ್ದಾರಂತೆ. ಅದರ ವಿವರಗಳನ್ನು ಶೀಘ್ರದಲ್ಲೇ ರಿವೀಲ್ ಮಾಡಲಿದ್ದಾರಂತೆ.. ಅಂದಹಾಗೇ ಜೆರುಶಾ ಅವರಿಗೆ ಕ್ಯಾಮೆರಾ ಎದುರಿಸುವುದು ಹೊಸದೇನಲ್ಲ.  ವೀರ ಮದಕರಿ ಚಿತ್ರದ ಬಳಿಕ ರಂಗಭೂಮಿಯಲ್ಲೂ ಸಾಕಷ್ಟು ಪಾತ್ರಗಳನ್ನು ನಿರ್ವಹಿಸಿದ್ದಾರೆ.. ಅಷ್ಟೇ ಅಲ್ಲದೇ ಹಲವು ಜಾಹೀರಾತುಗಳಲ್ಲಿ ನಟಿಸಿರೋ ಜೆರುಶಾ, ಫಹಾದ್ ಫಾಸಿಲ್ ನಟಿಸಿದ್ದ ಧೂಮಂ ಸಿನಿಮಾದಲ್ಲೂ ನಟಿಸಿದ್ದರು.. ಬಾಲ‌ನಟಿಯಾಗಿದ್ದ ಜೆರುಶಾ ಈಗ ದೊಡ್ಡ ಪರದೆ ಮೇಲೆ ಹೀರೋಯಿನ್ ಆಗಿ ಹೇಗೆ ಮಿಂಚಲಿದ್ದಾರೆಂದು ನೋಡಬೇಕಿದೆ..

Shwetha M

Leave a Reply

Your email address will not be published. Required fields are marked *