ವಾಸ್ತು ಪ್ರಕಾರ ಮನೆಯ ಯಾವ ಭಾಗದಕ್ಕೆ ತುಳಸಿ ಗಿಡವನ್ನು ನೆಡಬೇಕು..?

ವಾಸ್ತು ಪ್ರಕಾರ ಮನೆಯ ಯಾವ ಭಾಗದಕ್ಕೆ ತುಳಸಿ ಗಿಡವನ್ನು ನೆಡಬೇಕು..?

ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು  ಭಕ್ತಿಯಿಂದ ಪೂಜಿಸುತ್ತಾರೆ. ಶುಭ-ಅಶುಭ ಕಾರ್ಯಗಳಲ್ಲಿ ತುಳಸಿ ಎಲೆಗೆ ವಿಶೇಷ ಸ್ಥಾನವಿದ್ದು, ನಮ್ಮ ಹಿರಿಯರ ಕಾಲದಿಂದಲೂ, ಪ್ರತಿಯೊಂದು ಹಿಂದೂ ಧರ್ಮೀಯರ ಮನೆಯಲ್ಲೂ ತುಳಸಿ ಗಿಡವನ್ನು ನೆಡುವ ಸಂಪ್ರದಾಯವಿದೆ. ಧರ್ಮಗ್ರಂಥಗಳಲ್ಲಿ, ತುಳಸಿಯನ್ನು ಪೂಜ್ಯ, ಪವಿತ್ರ ಮತ್ತು ದೇವತೆ ಎಂದು ಉಲ್ಲೇಖ ಮಾಡಲಾಗಿದ್ದು, ಮನೆಯಲ್ಲಿ ತುಳಸಿ ಇದ್ದರೆ, ಕೆಲವು ವಿಷಯಗಳನ್ನು ತಿಳಿದುಕೊಂಡು ಪಾಲಿಸುವುದು ಅತ್ಯಗತ್ಯ ಆಗುತ್ತದೆ.

ಹೌದು ತುಳಸಿಯನ್ನು ಲಕ್ಷ್ಮಿ ದೇವಿಯ ದರ್ಶನಕ್ಕೆ ಮಾಡುವುದು ಅವತಾರವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿಸಂಪತ್ತು, ಸಮೃದ್ಧಿ, ಸಂತೋಷ ಮತ್ತು ಶಾಂತಿಯ ದೇವತೆ. ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತದೆ. ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಅದರಲ್ಲೂ ತುಳಸಿಯನ್ನು ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಮನೆಯಲ್ಲಿ ಇಟ್ಟುಕೊಂಡರೆ ಮುಕ್ಕೋಟಿ ದೇವತೆಗಳ ವಿಶೇಷ ಅನುಗ್ರಹವು ನಿಮ್ಮ ಮನೆಯ ಮೇಲಿರುತ್ತದೆ. ಮನೆಯಲ್ಲಿ ಸಕಾರಾತ್ಮಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ, ಹಣದ ಕೊರತೆಯಿರುವುದಿಲ್ಲ ಮತ್ತು ಕುಟುಂಬ ಸದಸ್ಯರಿಗೆ ಆರೋಗ್ಯ ಸೌಲಭ್ಯಗಳು ಸಿಗುತ್ತವೆ. ಹಾಗಾದ್ರೆ ಬನ್ನಿ ವಾಸ್ತು ಪ್ರಕಾರ ಮನೆಯ ಯಾವ ಭಾಗದಕ್ಕೆ ತುಳಸಿ ಗಿಡವನ್ನು ನೆಡಬೇಕು..? ತುಳಸಿ ಗಿಡ ಮನೆಯಲ್ಲಿ ಇರುವುದರಿಂದ ಏನು ಪ್ರಯೋಜನ  ನೋಡೋಣ.

ವಾಸ್ತು ಶಾಸ್ತ್ರ ದ ಪ್ರಕಾರ, ಮನೆಯಲ್ಲಿ ಕೆಲವು ರೀತಿಯ ಸಸ್ಯಗಳನ್ನು ಬೆಳೆಸುವುದರಿಂದ ಅವು ಆರ್ಥಿಕ ಸಮೃದ್ಧಿಯನ್ನು ತರುತ್ತವೆ ಮತ್ತು ಅವರ ಜೀವನದಲ್ಲಿ ಅಪಾರ ಪ್ರಗತಿಯನ್ನು ಉಂಟುಮಾಡುತ್ತವೆ ಎಂಬ ನಂಬಿಕೆ ಇದೆ. ಅಲ್ಲದೇ ವಾಸ್ತು ಶಾಸ್ತ್ರದಲ್ಲಿ ಅನೇಕ ಮಂಗಳಕರ ಸಸ್ಯಗಳ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಅಂತಹ ಗಿಡಗಳಲ್ಲಿ ತುಳಸಿ ಗಿಡ ಕೂಡ ಒಂದಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡ ನೆಡುವುದು ಲಕ್ಷ್ಮಿ ದೇವಿ ಯನ್ನು ಒಲಿಸಿ ಕೊಳ್ಳಬಹುದಾಗಿದ್ದು. ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಗೂ ಈ ಸಸ್ಯಕ್ಕೂ ಸಂಬಂಧವಿದೆ. ಆದ್ದರಿಂದ ಇದನ್ನು ಮನೆಯ ಬಳಿ ಬೆಳೆಸುವುದರಿಂದ ಸಂಪತ್ತು ಬರುತ್ತದೆ.

Kishor KV