ಎಷ್ಟೇ ಸಂಬಳ ಬಂದ್ರೂ ಕೈಯಲ್ಲಿ ಹಣ ಉಳಿಯಲ್ವಾ – ಮನೆಯಲ್ಲಿ ಈ ಟಿಫ್ಸ್ ಫಾಲೋ ಮಾಡಿ

ಎಷ್ಟೇ ಸಂಬಳ ಬಂದ್ರೂ ಕೈಯಲ್ಲಿ ಹಣ ಉಳಿಯಲ್ವಾ – ಮನೆಯಲ್ಲಿ ಈ ಟಿಫ್ಸ್ ಫಾಲೋ ಮಾಡಿ

ಎಷ್ಟೇ ದುಡಿದರೂ, ಎಷ್ಟೇ ಸಂಬಳ ಬಂದ್ರೂ ಕೈಯಲ್ಲಿ ಹಣ ಉಳಿಯಲ್ಲ.. ಜೀವನದಲ್ಲಿ ಎಷ್ಟೇ ಕಷ್ಟಪಟ್ಟರು ಸಕ್ಸಸ್ ಸಿಗಲ್ಲ ಅಂತ ಸಾಕಷ್ಟು ಜನ ಓದ್ದಾಡುತ್ತಾ ಇರುತ್ತಾರೆ.  ಇಂತಹ ಸಮಸ್ಯೆಗೆ  ಮನೆಯಲ್ಲಿರುವ ವಾಸ್ತು ಸಮಸ್ಯೆಯೂ ಅಥವಾ ವಾಸ್ತು ದೋಷದ   ಪರಿಣಾಮವೂ ಆಗಿರಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಕೆಲವು ದಿಕ್ಕುಗಳಲ್ಲಿ ಉಂಟಾಗುವ ದೋಷಗಳು ಸಂಪತ್ತು ಹಾಗೂ ಆ ಮನೆಯ ಹಣಕಾಸಿನ ಮೇಲೆ ಪರಿಣಾಮ ಬೀರಬಹುದು. ಇದರಿಂದ ಕೈ ತುಂಬಾ ಹಣ ದುಡಿದರೂ, ಅದು ನಿಮ್ಮ ಕೈಯಲ್ಲಿ ನಿಲ್ಲದಂತೆ ತಡೆಯುತ್ತದೆ. ಹಾಗಾದರೆ ಈ ಸಮಸ್ಯೆಗೆ ಪರಿಹಾರ ಅನ್ನೋದ್ದನ್ನ ನೋಡೋಣ.

ಮನೆಯಲ್ಲಿ ಸಸಿಗಳು ಇರಲಿ

ವಾಸ್ತು ಶಾಸ್ತ್ರದಲ್ಲಿ ಹಸಿರು ಸಸ್ಯಗಳು ವಿಶೇಷ ಸ್ಥಾನ ಪಡೆದಿವೆ. ಆಗ್ನೇಯ ಮೂಲೆಯಲ್ಲಿ ಹಸಿರು ಸಸ್ಯಗಳನ್ನು ಇಡುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ. ಮನಿ ಪ್ಲಾಂಟ್ ಸಂಪತ್ತಿನ ಸಂಕೇತವಾಗಿದ್ದು, ಇದನ್ನು ಶುಭದ ಮೂಲೆಯಲ್ಲಿ ಇಡುವುದು ಉತ್ತಮವಾಗಿದ್ದು, ಇದರೊಂದಿಗೆ ಒಣಗಿದ ಸಸ್ಯಗಳನ್ನು ಮನೆಯಲ್ಲಿ ಇರದಂತೆ ನೋಡಿಕೊಳ್ಳುವುದು ಒಳ್ಳೆಯದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಸಂಪತ್ತಿನ ದಿಕ್ಕಾದ ಉತ್ತರದ ಶಕ್ತಿ

ಧನಾಧಿಪತಿ ಕುಬೇರನ ದಿಕ್ಕು ಎನ್ನಲಾದ ಉತ್ತರ ದಿಕ್ಕಿನಲ್ಲಿ ನಿಮ್ಮ ಮನೆಯ ಸಂಪತ್ತನ್ನು ಹೆಚ್ಚಿಸುವ ಶಕ್ತಿ ಇದ್ದು, ಆ ಜಾಗವನ್ನು ಸದಾ ಸ್ವಚ್ಛ ಹಾಗೂ ಶುದ್ಧತೆಯಿಂದ ಇಟ್ಟುಕೊಳ್ಳುವುದು ವಾಸ್ತು ಪ್ರಕಾರ ಅತ್ಯಂತ ಮುಖ್ಯ. ಹಾಗೇ ಇಲ್ಲಿ ಸುಂದರ ನೀರಿನ ಕಾರಂಜಿಯನ್ನು ಇಡುವುದು ಶುಭ ಸೂಚಕ. ಹರಿಯುವ ನೀರು ನಿರಂತರ ಸಂಪತ್ತಿನ ಸಂಕೇತ. ಈ ನಿಯಮವನ್ನು ಪಾಲಿಸುವುದರಿಂದ ಧನದ ಹರಿವು ಹೆಚ್ಚಾಗಲಿದ್ದು, ಉತ್ತರ ದಿಕ್ಕು ಮನೆಯ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಿಸುವಲ್ಲಿ ಪ್ರಮುಖವಾಗಿದೆ.

ಅಡುಗೆಮನೆ ಮತ್ತು ಆರ್ಥಿಕ ಲಾಭ

ಒಂದು ಮನೆಯ ಏಳಿಗೆಗೆ ಆ ಗೃಹದ ಅಡುಗೆಮನೆಯೂ ಪ್ರಮುಖ ಪಾತ್ರವಹಿಸಲಿದ್ದು, ಯಶಸ್ಸು ಹಾಗೂ ಕೀರ್ತಿಯನ್ನು ಹೆಚ್ಚಿಸುವಲ್ಲಿ ಅಡುಗೆಮನೆಯ ವಾಸ್ತು ಬಹಳ ಮುಖ್ಯ ಅಗುತ್ತದೆ. ಹಾಗಾಗಿ ನಿಮ್ಮ ಮನೆಯ ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಿ. ಈ ದಿಕ್ಕು ಅಗ್ನಿ ತತ್ವವನ್ನು ಪ್ರತಿನಿಧಿಸಲಿದ್ದು, ಆರೋಗ್ಯವನ್ನು ಸುಧಾರಿಸುತ್ತದೆ. ಹಾಗೇ ತಪ್ಪಿಯೂ ಅಡುಗೆಮನೆ ಉತ್ತರ ದಿಕ್ಕಿನಲ್ಲಿ ಬಾರದಂತೆ ನೋಡಿಕೊಳ್ಳಿ, ಇದು ಹಣದ ಸ್ಥಿರತೆಯನ್ನು ದುರ್ಬಲಗೊಳಿಸಲಿದ್ದು, ಖರ್ಚು ವೆಚ್ಚವನ್ನು ಹೆಚ್ಚಿಸುತ್ತದೆ.

Kishor KV