ನಿಮ್ಮ ಮನೆಯ ಈ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳು ಇದ್ಯಾ? – ಈಗಲೇ ತೆಗೆದು ಹಾಕಿ

ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ. ಇದಕ್ಕಾಗಿ ಮನೆ ಕಟ್ಟುವಾಗ ಯಾವಾಗಲೂ ವಾಸ್ತು ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಲಾಗುತ್ತದೆ. ಮನೆ ನಿರ್ಮಾಣದ ಸಮಯದಲ್ಲಿ ವಾಸ್ತು ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ನಕಾರಾತ್ಮಕ ಶಕ್ತಿಗಳ ಪ್ರವೇಶಿಸಿ ನಾನಾ ತೊಂದರೆ, ಸಮಸ್ಯೆಗಳು ಎದುರಾಗುತ್ತವೆ. ಹಾಗೇ ಕೆಲ ವಸ್ತುಗಳನ್ನು ತಪ್ಪಾದ ದಿಕ್ಕಿನಲ್ಲಿ ಇರಿಸುವುದರಿಂದಲೂ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಪ್ರವೇಶಿಸಿ ನಾನಾ ಸಮಸ್ಯೆ ಉದ್ಭವಿಸುತ್ತದೆ. ಹಾಗಾದರೆ ಭಗವಂತನ ದಿಕ್ಕು ಎನ್ನಲಾದ ಉತ್ತರ ದಿಕ್ಕಿನಲ್ಲಿ ಯಾವೆಲ್ಲಾ ವಸ್ತುಗಳನ್ನು ಇಡಬಾರದು ಅನ್ನೋದ್ದನ್ನ ನೋಡೋಣ.
ಪೊರಕೆ, ಕಸ
ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ಕಾರಣಕ್ಕೂ ಡಸ್ಟ್ ಬಿನ್, ಪೊರಕೆ ಅಥವಾ ಕಸವನ್ನು ಉತ್ತರ ದಿಕ್ಕಿನಲ್ಲಿ ಇಡಬಾರದು ಮತ್ತು ಈ ದಿಕ್ಕನ್ನು ಎಂದೂ ಅಶುದ್ಧವಾಗಿ ಇರಬಾರದು. ಈ ದಿಕ್ಕಿನಲ್ಲಿ ಕಸ ಶೇಖರಣೆ ಮಾಡುವುದು ಹಣದ ನಷ್ಟಕ್ಕೆ ಕಾರಣವಾಗಿ, ಮನೆಯ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಕೊಳಕು ವಸ್ತು
ವಾಸ್ತು ಶಾಸ್ತ್ರದ ಪ್ರಕಾರ ಸಂಪತ್ತಿನ ಅಧಿಪತಿ ಎನ್ನಲಾಗುವ ಕುಬೇರನು ನೆಲೆಸಿರುವ ಉತ್ತರ ದಿಕ್ಕಿನಲ್ಲಿ ಕೊಳಕು ವಸ್ತುಗಳನ್ನು ಇಡುವುದರಿಂದ ಸರಿಯಲ್ಲ. ಇದರಿಂದ ಕುಬೇರನಿಗೆ ಅಗೌರವ ತೋರಿದಂತಾಗುತ್ತದೆ. ಇದೇ ಕಾರಣಕ್ಕೆ ಮನೆಗೆ ಸಂಪತ್ತು ಬರುವುದು ನಿಂತು ನಾನಾ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಈ ಭಗವಂತನ ದಿಕ್ಕಿನಲ್ಲಿ ಶೂ-ಚಪ್ಪಲಿ, ಕೊಳಕು ವಸ್ತುಗಳು ಇಡುವುದನ್ನು ತಪ್ಪಿಸಿ.
ಕಪ್ಪು ಹರಳುಗಳು
ಕುಬೇರ ನೆಲೆಸಿರುವ ಉತ್ತರ ದಿಕ್ಕಿನಲ್ಲಿ ಎಂದಿಗೂ ಕಪ್ಪು ಹರಳುಗಳನ್ನು ಇಡಬಾರದು. ಅದು ಆ ದಿಕ್ಕಿನಲ್ಲಿ ಹರಿಯುವ ಧನಾತ್ಮಕ ಶಕ್ತಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಿಸಲು ಕಪ್ಪು ಹರಳುಗಳನ್ನು ಉತ್ತರ ದಿಕ್ಕಿನಲ್ಲಿ ಇಡಬೇಡಿ.
ಗರಿಗಳು
ಮನೆಯ ಉತ್ತರ ದಿಕ್ಕಿನಲ್ಲಿ ಯಾವುದೇ ರೀತಿಯ ಗರಿಗಳನ್ನು ಇಡುವುದರಿಂದ, ಮನೆಯ ತುಂಬಾ ನೆಗೆಟಿವ್ ಎನರ್ಜಿ ಸೃಷ್ಟಿಯಾಗುತ್ತದೆ. ಇದರಿಂದಾಗಿ ಮನೆಯ ಸದಸ್ಯರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಗರಿಗಳನ್ನು ಇರಿಸಿದ್ದರೆ ತಕ್ಷಣ ತೆಗೆದು ಹಾಕಿರಿ.

ನೋಡಿರಿ

