ಈ ವಸ್ತುಗಳನ್ನ ಅಪ್ಪಿ ತಪ್ಪಿಯೂ ದಾನ ಮಾಡಲೇ ಬೇಡಿ – ಮಾಡಿದ್ರೆ ಕೈ ಬಿಡಲಿದೆ ನಿಮ್ಮ ಅದೃಷ್ಟ

ಹಿಂದೂ ಧರ್ಮದಲ್ಲಿ ದಾನಕ್ಕೆ ತ್ಯಂತ ಮಹತ್ವವಿದೆ. ಆದ್ರೆ ವಾಸ್ತು ಶಾಸ್ತ್ರದಲ್ಲಿ ಕೆಲ ವಸ್ತುಗಳನ್ನು ದಾನ ಮಾಡುವುದು ಅಶುಭ ಎನ್ನಲಾಗುತ್ತೆ. ಕೆಲ ವಸ್ತಗಳ ದಾನದಿಂದ ಆರ್ಥಿಕ ನಷ್ಟ ಕೂಡ ಆಗಬಹುದು. ಹೌದು ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಅಶುಭ ಫಲಗಳು ದೊರೆಯುತ್ತದೆ. ಬಡತನಕ್ಕೆ ದಾರಿಯಾಗುತ್ತದೆ. ಹಾಗಾದರೆ ಆ ವಸ್ತುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ಶ್ವೇತ ವರ್ಣದ ವಸ್ತುಗಳು
ಸಂಪತ್ತನ್ನು ಕರುಣಿಸುವ ಲಕ್ಷ್ಮೀ ದೇವಿಗೆ ಶ್ವೇತ ವರ್ಣದ ವಸ್ತುಗಳು ಪ್ರಿಯವಾಗಿದ್ದು, ಆಕೆಗೆ ಬಿಳಿ ಬಣ್ಣದ ವಸ್ತುಗಳನ್ನು ಅರ್ಪಿಸುವುದರಿಂದ ಸಂತುಷ್ಟಳಾಗುತ್ತಾಳೆ. ಅಂತಹ ಬಿಳಿ ಬಣ್ಣದ ವಸ್ತುಗಳಲ್ಲಿ ಮೊಸರು ಕೂಡ ಒಂದಾಗಿದೆ. ಮೊಸರನ್ನು ನೀವು ಯಾರಿಗಾದರೂ ದಾನವಾಗಿ ನೀಡುವುದರಿಂದ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತೀರಿ. ಇದರಿಂದಾಗಿ ಬಡತನ ನಿಮ್ಮ ಜೀವನವನ್ನು ಕತ್ತಲೆಯಲ್ಲಿ ಕಳೆಯುವಂತೆ ಮಾಡುತ್ತದೆ. ಹಾಗಾಗಿ ಮೊಸರನ್ನು ನೀವು ಯಾರಿಗೂ ದಾನ ಮಾಡಲು ಹೋಗದಿರಿ. ಈ ರೀತಿ ಮೊಸರನ್ನು ದಾನ ಮಾಡುವುದರಿಂದ ನಿಮ್ಮ ಅದೃಷ್ಟ ಕಡಿಮೆಯಾಗುತ್ತದೆ ಎನ್ನುವ ನಂಬಿಕೆಯಿದೆ.
ಹಳಸಿದ ಆಹಾರ
ಹಳಸಿದ ಅಥವಾ ಹಾಳಾಗಿರುವ ಆಹಾರವನ್ನು ಯಾರಿಗೂ ದಾನ ಮಾಡಬಾರದು. ಇಂತಹ ಆಹಾರವನ್ನು ನೀಡುವುದು ಮನೆಯವರ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ನಂಬಲಾಗಿದೆ. ಉದ್ದೇಶಪೂರ್ವಕವಾಗಿ ಹಳಸಿದ ಆಹಾರವನ್ನು ದಾನ ಮಾಡಿದರೆ, ಅದು ಮನೆಯಲ್ಲಿಯೇ ಬಡತನವನ್ನು ಆಕರ್ಷಿಸುತ್ತದೆ ಎನ್ನುವ ಧಾರ್ಮಿಕ ನಂಬಿಕೆ ಇದೆ. ಈ ರೀತಿಯ ದಾನವು ಅನಾರೋಗ್ಯದ ರೂಪದಲ್ಲಿ ಮನೆಗೆ ಮರಳಿ, ದಾನ ಮಾಡುವ ವ್ಯಕ್ತಿಯ ಬದುಕಿನಲ್ಲಿ ಅಶುಭ ಫಲಗಳನ್ನು ತರಬಹುದು.
ಪೊರಕೆ
ಪೊರಕೆ ಹೊಸದಾಗಿದ್ದರೂ ಹಳೆಯದಾಗಿದ್ದರೂ ಸರಿಯೇ ಅದನ್ನು ದಾನ ಮಾಡುವುದು ವಾಸ್ತು ಶಾಸ್ತ್ರದ ಪ್ರಕಾರ ಅಶುಭಕರವೆಂದು ಹೇಳಲಾಗಿದೆ. ಪೊರಕೆ ಲಕ್ಷ್ಮೀ ದೇವಿಯ ಸೂಚಕವಾದುದರಿಂದ, ಅದನ್ನು ದಾನ ಮಾಡಿದರೆ ಲಕ್ಷ್ಮೀ ದೇವಿಯ ಕೃಪೆ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಮನೆಗೆ ಆರ್ಥಿಕ ಸಮಸ್ಯೆಗಳು ಬರಬಹುದು. ಹೀಗಾಗಿ ಪೊರಕೆಯನ್ನು ದಾನ ಮಾಡುವುದನ್ನು ತಪ್ಪಿಸುವುದು ಉತ್ತಮ.

ನೋಡಿರಿ

