ಹಾಸಿಗೆಯ ಕೆಳಗೆ ಅಥವಾ ಹತ್ತಿರ ಕೆಲವು ವಸ್ತುಗಳನ್ನ ಇಟ್ಟಿದ್ದೀರಾ? – ಈಗಲೇ ತೆಗೆದು ಹಾಕಿ

ಹಾಸಿಗೆಯ ಕೆಳಗೆ ಅಥವಾ ಹತ್ತಿರ ಕೆಲವು ವಸ್ತುಗಳನ್ನ ಇಟ್ಟಿದ್ದೀರಾ? – ಈಗಲೇ ತೆಗೆದು ಹಾಕಿ

ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಕೆಳಗೆ ಅಥವಾ ಹತ್ತಿರ ಕೆಲವು ವಸ್ತುಗಳನ್ನು ಇಡುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು. ವಿಶೇಷವಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಪೊರಕೆ, ಚಪ್ಪಲಿ, ಎಣ್ಣೆ ಬಾಟಲಿ ಮತ್ತು ಹಾಸಿಗೆಯ ಎದುರು ಕನ್ನಡಿ ಇಡುವುದನ್ನು ತಪ್ಪಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಇವು ನಿದ್ರಾಹೀನತೆ, ಮಾನಸಿಕ ಅಶಾಂತಿ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.

ವಾಸ್ತು ಶಾಸ್ತ್ರದಲ್ಲಿ   ಮನೆಯ ಪ್ರತಿಯೊಂದು ವಸ್ತುವಿನ ಸ್ಥಾನಕ್ಕೂ ವಿಶೇಷ ಮಹತ್ವವಿದೆ. ಮನೆ ನಿರ್ಮಾಣದ ಜೊತೆಗೆ ಮನೆ ಒಳಗಿನ ಪೀಠೋಪಕರಣಗಳ ವ್ಯವಸ್ಥೆಯೂ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಮಲಗುವ ಕೋಣೆ ಮತ್ತು ಹಾಸಿಗೆಯ ಸುತ್ತಮುತ್ತ ಇರುವ ವಸ್ತುಗಳು ಆರೋಗ್ಯ, ಮನಶಾಂತಿ ಹಾಗೂ ಕುಟುಂಬದ ಸಂತೋಷಕ್ಕೆ ಸಂಬಂಧ ಹೊಂದಿವೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ವಾಸ್ತು ಶಾಸ್ತ್ರದ ಪ್ರಕಾರ ದೇವರ ಮುಂದೆ ದೀಪ ಹೇಗೆ ಹಚ್ಚಬೇಕು ಗೊತ್ತಾ? – ಈ ತಪ್ಪು ಮಾಡಬೇಡಿ

ವಾಸ್ತು ಶಾಸ್ತ್ರದ ಸಲಹೆ ಪ್ರಕಾರ  ವ್ಯಕ್ತಿಯೊಬ್ಬನು ದಿನದ ಸುಮಾರು 7ರಿಂದ 8 ಗಂಟೆಗಳ ಕಾಲ ಕಳೆಯುವ ಸ್ಥಳವೇ ಹಾಸಿಗೆ. ಆದ್ದರಿಂದ ಹಾಸಿಗೆಯ ಸುತ್ತಮುತ್ತ ಇರುವ ವಸ್ತುಗಳ ವ್ಯವಸ್ಥೆ ಸರಿಯಾಗಿರಬೇಕು. ಹಲವರು ಮಂಚದ ಕೆಳಗಿನ ಖಾಲಿ ಜಾಗವನ್ನು ಬಳಸಿಕೊಂಡು ವಿವಿಧ ವಸ್ತುಗಳನ್ನು ಇಡುವ ಅಭ್ಯಾಸ ಹೊಂದಿರುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಹಾಸಿಗೆಯ ಕೆಳಗೆ ಅಥವಾ ಹತ್ತಿರ ಇಡುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಎಲೆಕ್ಟ್ರಾನಿಕ್ ವಸ್ತುಗಳು ಹಾಳಾದ ಅಥವಾ ಬಳಸದ ಎಲೆಕ್ಟ್ರಾನಿಕ್ ಸಾಧನಗಳನ್ನು ಹಾಸಿಗೆಯ ಕೆಳಗೆ ಇಡುವುದು ತಪ್ಪು ಎಂದು ವಾಸ್ತು ಹೇಳುತ್ತದೆ. ಇದರಿಂದ ನಿದ್ರಾಹೀನತೆ ಹಾಗೂ ಮಾನಸಿಕ ಅಶಾಂತಿ ಉಂಟಾಗುವ ಸಾಧ್ಯತೆ ಇದೆ.

ಚಪ್ಪಲಿ ಮತ್ತು ಶೂಗಳು

ಕೆಲವರು ರಾತ್ರಿ ಮಲಗುವಾಗ ಚಪ್ಪಲಿಗಳನ್ನು ಹಾಸಿಗೆಯ ಕೆಳಗೆ ಇಡುವ ಅಭ್ಯಾಸ ಹೊಂದಿರುತ್ತಾರೆ. ವಾಸ್ತು ಪ್ರಕಾರ ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ಹೇಳಲಾಗಿದೆ.

ಪೊರಕೆ  

ಹಾಸಿಗೆಯ ಕೆಳಗೆ ಪೊರಕೆ ಇಡುವುದು ಕೂಡ ಅಶುಭ ಎಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿನ ಆರೋಗ್ಯ ಸಮಸ್ಯೆಗಳು ಮತ್ತು ಆರ್ಥಿಕ ಅಡಚಣೆಗಳು ಹೆಚ್ಚಾಗಬಹುದು ಎಂದು ವಾಸ್ತು ನಂಬಿಕೆ ಹೇಳುತ್ತದೆ.

ಕನ್ನಡಿ ಸ್ಥಾನ

ಹಾಸಿಗೆಯ ಮುಂದೆ ಕನ್ನಡಿ ಇಡುವುದನ್ನು ವಾಸ್ತು ತಜ್ಞರು ತಪ್ಪಿಸಲು ಸಲಹೆ ನೀಡುತ್ತಾರೆ. ಇದು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ.

ಎಣ್ಣೆ ಬಾಟಲಿ

ಕೂದಲಿಗೆ ಎಣ್ಣೆ ಹಚ್ಚಿದ ಬಳಿಕ ಅದನ್ನು ಹಾಸಿಗೆಯ ಬಳಿ ಇಡುವುದೂ ಒಳ್ಳೆಯದು ಅಲ್ಲ ಎಂದು ವಾಸ್ತು ಹೇಳುತ್ತದೆ. ಇದು ಜೀವನದಲ್ಲಿ ಅನಗತ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನಲಾಗಿದೆ.

ಎರಡು ಬೆಡ್‌ಶೀಟ್ ಬಳಕೆ

ವಿಭಜಿತ ಹಾಸಿಗೆಯ ಮೇಲೆ ಎರಡು ಬೇರೆ ಬೆಡ್‌ಶೀಟ್‌ಗಳನ್ನು ಬಳಸುವುದು ಪತಿ-ಪತ್ನಿಯರ ನಡುವೆ ಅಸಮಾಧಾನ ಹೆಚ್ಚಿಸುವ ಸಾಧ್ಯತೆ ಇದೆ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

Kishor KV