ನಿಮ್ಮ ಅಂಗಡಿ ಮುಂದೆ ಈ ವಸ್ತುಗಳು ಇದೆಯೇ? ವ್ಯಾಪಾರ ಹಾಳಾಗಲು ಇದೇ ಕಾರಣ!

ನಿಮ್ಮ ಅಂಗಡಿ ಮುಂದೆ ಈ ವಸ್ತುಗಳು ಇದೆಯೇ? ವ್ಯಾಪಾರ ಹಾಳಾಗಲು ಇದೇ ಕಾರಣ!

ನಿಮ್ಮ ಅಂಗಡಿ ಮುಂದೆ ಈ ವಸ್ತುಗಳು ಇದೆಯೇ? ವ್ಯಾಪಾರ ಹಾಳಾಗಲು ಇದೇ ಕಾರಣ! ಲಾಭಕ್ಕಾಗಿ 5 ವಾಸ್ತು ನಿಯಮಗಳನ್ನು ಈಗಲೇ ಪಾಲಿಸಿ. ಹೌದು, ಕೆಲವೊಂದು ಅಂಶಗಳು ವ್ಯಾಪಾರ ವಹಿವಾಟಿನ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಅಂಗಡಿಯ ಮುಂದೆ ಅಶುಭ ಅಂಶಗಳು ಗೋಚರಿಸಿದರೆ, ಅದು ವ್ಯವಹಾರದಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಿ, ವಹಿವಾಟನ್ನು ಕುಂಠಿತಗೊಳಿಸಬಹುದು. ಇಂತಹ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ವಸ್ತುಗಳನ್ನು ಅಂಗಡಿಯ ಆವರಣದಿಂದ ದೂರವಿಡುವುದು ಉತ್ತಮ.

ವಾಸ್ತು ಶಾಸ್ತ್ರದ ಪ್ರಕಾರ, ಅಂಗಡಿಯ ವ್ಯಾಪಾರದಲ್ಲಿ ನಕಾರಾತ್ಮಕ ಪ್ರಭಾವ ಬೀರಬಹುದಾದ ವಸ್ತುಗಳು  ಯಾವುವು? ಸಕಾರಾತ್ಮಕ ಶಕ್ತಿ ಮತ್ತು ಯಶಸ್ಸಿಗಾಗಿ ಯಾವ ವಾಸ್ತು ನಿಯಮಗಳನ್ನು ಅನುಸರಿಸಬೇಕು? ಈ ಕುರಿತು ಈ ಲೇಖನದಲ್ಲಿ ಜ್ಯೋತಿಷಿಗಳು ನೀಡಿರುವ ಪ್ರಮುಖ ಸಲಹೆಗಳನ್ನು   ತಿಳಿಸಲಾಗಿದೆ. ಅದರಂತೆ, ಕೆಲವು ವಸ್ತುಗಳ ಉಪಸ್ಥಿತಿಯು ವ್ಯಾಪಾರಕ್ಕೆ ಅಡಚಣೆಯಾಗಬಹುದು. ಹಾಗಾಗಿ, ಅಂಗಡಿಯ ಮುಂದೆ ಇರಬಾರದ ವಸ್ತುಗಳು ಮತ್ತು ಸನ್ನಿವೇಶಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ.

ದೊಡ್ಡ ಅಡೆತಡೆಗಳು / ಕಂಬಗಳು

ಅಂಗಡಿಯ ಪ್ರವೇಶ ದ್ವಾರದ ಮುಂದೆ ದೊಡ್ಡ ಕಂಬ, ಮರ ಅಥವಾ ವಿದ್ಯುತ್ ಕಂಬ ಇರುವುದು ಅಶುಭಕರ. ಇದನ್ನು ‘ದ್ವಾರವೇದ’ ಎಂದು ಕರೆಯಲಾಗುತ್ತದೆ. ಇಂತಹ ಅಡೆತಡೆಗಳು ಸಕಾರಾತ್ಮಕ ಶಕ್ತಿಯ ಹರಿವನ್ನು ತಡೆಯುತ್ತವೆ. ಗ್ರಾಹಕರು ಅಂಗಡಿಗೆ ಬರಲು ಹಿಂಜರಿಯುತ್ತಾರೆ. ಇದು ವ್ಯಾಪಾರದ ಕುಂಠಿತಕ್ಕೆ ಕಾರಣವಾಗಬಹುದು.

ತೆರೆದ ಚರಂಡಿ / ಕಸದ ತೊಟ್ಟಿ

ಅಂಗಡಿಯ ಮುಂದೆ ತೆರೆದ ಚರಂಡಿ ಅಥವಾ ಕಸದ ತೊಟ್ಟಿ ಇರುವುದು ಹೆಚ್ಚು ಅಶುಭಕರ. ಇದು ನಕಾರಾತ್ಮಕತೆ ಮತ್ತು ಕೆಟ್ಟ ವಾಸನೆಯನ್ನು ಹರಡುತ್ತದೆ, ಇದು ಲಕ್ಷ್ಮಿಯ ಆಗಮನಕ್ಕೆ ಅಡ್ಡಿಯಾಗುತ್ತದೆ. ಅಲ್ಲದೆ, ಇಂತಹ ಪರಿಸರ ಗ್ರಾಹಕರನ್ನು ದೂರವಿಡುತ್ತದೆ ಮತ್ತು ಆರೋಗ್ಯಕ್ಕೂ ಉತ್ತಮವಲ್ಲ.

ಅತಿಯಾದ ಇಳಿಜಾರು

ಅಂಗಡಿಯ ಮುಖ್ಯ ದ್ವಾರದ ಮುಂದೆ ಅತಿಯಾಗಿ ಕಡಿದಾದ ಇಳಿಜಾರು ಇರಬಾರದು. ಇಂತಹ ಇಳಿಜಾರು ಅಂಗಡಿಯ ಲಾಭ ಮತ್ತು ಹಣವನ್ನು ಹೊರಗೆ ಹರಿಯುವಂತೆ ಮಾಡುತ್ತದೆ.

ಅಶುಚಿತ್ವ ಮತ್ತು ಕತ್ತಲೆ

ಅಂಗಡಿಯ ಹೊರಭಾಗದಲ್ಲಿ ಸಾಕಷ್ಟು ಬೆಳಕು ಇಲ್ಲದೆ ಕತ್ತಲಾಗಿರುವುದು ಅಥವಾ ಕೊಳಕಾಗಿರುವುದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸಮೃದ್ಧಿಯನ್ನು ದೂರವಿಡುತ್ತದೆ ಮತ್ತು ವ್ಯಾಪಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಇದು ವ್ಯಾಪಾರಕ್ಕೆ ಮಾರಕ 

ಅಂಗಡಿಯ ಮುಂದೆ ವಿಶಾಲವಾದ ಮತ್ತು ಆಕರ್ಷಕ ವಾತಾವರಣ ಇಲ್ಲದಿರುವುದು ವ್ಯಾಪಾರಕ್ಕೆ ಮಾರಕ. ಗ್ರಾಹಕರಿಗೆ ಕಾಯಲು ಅಥವಾ ವಾಹನ ನಿಲುಗಡೆ ಮಾಡಲು ಸ್ಥಳವಿಲ್ಲದಿದ್ದರೆ, ಅವರು ಬೇರೆ ಅಂಗಡಿಗಳ ಕಡೆ ಮುಖ ಮಾಡುತ್ತಾರೆ.

 

Kishor KV