ನಿಮ್ಮ ಮನೆಯ ಬೆಡ್ ರೂಂ ಯಾವ ದಿಕ್ಕಿನಲ್ಲಿ ಇರಬೇಕು- ಏನೆಲ್ಲಾ ವಸ್ತು ಇಡಬಾರದು ಗೊತ್ತಾ?

ನಮ್ಮ ಯಶಸ್ಸಿಗೆ ಮನೆಯ ವಾಸ್ತು ಕಾರಣ ಆಗುತ್ತೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿನ ಕೆಲ ಕೋಣೆಗಳು ನಿರ್ಮಿಸುವುದರಿಂದ ನೀವು ಲಾಭ ಪಡೆಯಬಹುದು. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಗಾಗಿ ವಾಸ್ತು ಸಲಹೆಗಳನ್ನು ಅಳವಡಿಸಿಕೊಳ್ಳಬೇಕು. ಅದರಲ್ಲೂ ಮಲಗುವ ಕೋಣೆ ತುಂಬಾ ಮುಖ್ಯ. ಇಡೀ ದಿನವೆಲ್ಲ ದೇಹವನ್ನು ದಂಡಿಸಿ, ದುಡಿದು ಸಾಕಾಗಿರುವ ನಮ್ಮನ್ನು, ಹಾಗೇ ನಮ್ಮ ಮನಸ್ಸನ್ನು ತಿಳಿಗೊಳಿಸುವುದು ರಾತ್ರಿಯ ಸುಖ ನಿದ್ದೆ. ಅಂತಹ ನೆಮ್ಮದಿಯನ್ನು ತಂದುಕೊಡುವ ಬೆಡ್ ರೂಂಗೂ ಕೆಲ ವಾಸ್ತು ನಿಯಮಗಳಿದ್ದು, ನಿಮ್ಮ ಜೀವನದಲ್ಲಿ ಧನಾತ್ಮಕತೆಯನ್ನು ತರಲು ಬೆಡ್ ರೂಂ ನ ವಾಸ್ತು ಶಾಸ್ತ್ರವು ಅತ್ಯಂತ ಮುಖ್ಯವಾಗಿದೆ. ಹಾಗಾಗಿ ವಾಸ್ತು ಪ್ರಕಾರ, ಮನೆಯ ಬೆಡ್ ರೂಮ್ ಹೇಗಿರಬೇಕು? ಯಾವ ದಿಕ್ಕಿನಲ್ಲಿ ಬೆಡ್ ರೂಂ ಇದ್ದರೆ ಒಳ್ಳೆಯದು..? ಈ ಬಗ್ಗೆ ವಾಸ್ತುಶಾಸ್ತ್ರದಲ್ಲಿ ಒಂದಿಷ್ಟು ನಿಯಮಗಳಿವೆ.
ನೈಋತ್ಯ ದಿಕ್ಕಿನಲ್ಲಿ ಇರಲಿ
ಬೆಡ್‌ರೂಂ ಮನೆಯ ನೈಋತ್ಯ ದಿಕ್ಕಿನಲ್ಲಿದ್ದರೆ ಆರೋಗ್ಯ ಹಾಗೂ ಸಂಪತ್ತು ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ. ಹಾಗೂ ಮನೆಯ ಯಜಮಾನನೂ ದೀರ್ಘಾಯುಷಿಯಾಗುತ್ತಾನೆ. ಆದರೆ ಬೆಡ್‌ರೂಂ ಈಶಾನ್ಯ ಹಾಗೂ ಆಗ್ನೇಯ ದಿಕ್ಕಿನಲ್ಲಿರಬಾರದು. ಆಗ್ನೇಯ ದಿಕ್ಕಿನಲ್ಲಿ ಬೆಡ್‌ರೂಂ ಇದ್ದರೆ ದಂಪತಿಗಳ ಮಧ್ಯೆ ಜಗಳಗಳು ಹೆಚ್ಚಾಗುತ್ತವೆ ಎನ್ನುತ್ತೆ ವಾಸ್ತು ಶಾಸ್ತ್ರ.
ಟಿವಿ, ಕಂಪ್ಯೂಟರ್ ಇಡಬೇಡಿ
ಟಿವಿ, ಕಂಪ್ಯೂಟರ್ ಮತ್ತು ಫೋನ್‌ನಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಬೆಡ್ ರೂಂ ಅಲ್ಲಿ ಹಿಡುವುದು ನಿಷಿದ್ಧವಾಗಿದ್ದು, ಇಂತಹ ವಿದ್ಯುತ್ ವಸ್ತುಗಳನ್ನು ರೂಂ ಅಲ್ಲಿ ಹಿಡಿವುದರಿಂದ ನಿದ್ರೆಯನ್ನು ಅಡ್ಡಿಪಡಿಸುತ್ತದೆ ಮತ್ತು ನೋವು ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.
ಕನ್ನಡಿ ಇಡಬೇಡಿ
ಮಲಗುವ ಕೋಣೆಯಲ್ಲಿ ಕನ್ನಡಿಗಳನ್ನು ಇಡಬಾರದು. ಬೆಡ್ ರೂಂ ಅಲ್ಲಿ ಕನ್ನಡಿ ಹಿಡುವುದರಿಂದ ಋಣಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಈ ಬಣ್ಣ ಬೆಡ್ ರೂಂನಲ್ಲಿ ಬಳಸಿ
ಬೆಡ್ ರೂಂ ನ ಗೋಡೆಗೆ ಹಸಿರು, ನೀಲಿ ಅಥವಾ ಸ್ವಲ್ಪ ಬಿಳಿ ಬಣ್ಣ ಹಚ್ಚುವುದರಿಂದ ನಕಾರಾತ್ಮಕ ಶಕ್ತಿಯನ್ನು ನಿವಾರಿಸಿ ಪಾಸಿಟಿವ್ ಎನರ್ಜಿಯನ್ನು ತುಂಬುತ್ತದೆ. ಇನ್ನು ಇದರೊಂದಿಗೆ ಪಿಂಕ್, ರೋಸ್, ಹಸಿರು, ಹಳದಿ ಈ ರೀತಿಯ ಬಣ್ಣ ನೋಡಲು ಆಕರ್ಷಕವಾಗಿ ಕಾಣುವುದರ ಜೊತೆಗೆ ಶಾಂತಿಯನ್ನು ತರುತ್ತದೆ.

ನೋಡಿರಿ

