ಈ ವಿಗ್ರಹಗಳನ್ನ ಈ ದಿಕ್ಕಿನತ್ತ ಇಟ್ಟರೇ ಸಮಸ್ಯೆಗಳೇ ಬರಲ್ಲ -ನಿಮ್ಮ ಜೊತೆಯಲ್ಲೇ ಇರುತ್ತೆ ಅದೃಷ್ಟ

ವಾಸ್ತು ತಜ್ಞರ ಪ್ರಕಾರ, ಮನೆಯೊಳಗೆ ಸಕಾರಾತ್ಮಕ ಶಕ್ತಿ ಹೆಚ್ಚಿಸಲು ಕೆಲವು ವಿಶೇಷ ವಿಗ್ರಹಗಳು ಮತ್ತು ಅಲಂಕಾರ ವಸ್ತುಗಳನ್ನು ಇರಿಸಬಹುದು. ಇವು ಕೇವಲ ಅಲಂಕಾರಕ್ಕೆ ಮಾತ್ರವಲ್ಲ, ಮನೆಯಲ್ಲಿ ಶುಭಫಲಗಳನ್ನು ಉಂಟುಮಾಡುವ ಶಕ್ತಿಯನ್ನು ಹೊಂದಿದ್ದು, ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಈ ವಿಗ್ರಹಗಳು ಆ ಮನೆಗೆ ಅದೃಷ್ಟ ತರುತ್ತದೆ ಹಾಗೂ ಹಣಕಾಸು ವಿಚಾರದಲ್ಲಿ ಅಭಿವೃದ್ಧಿ ಹೊಂದಲು ಸಹಕಾರಿ. ಹಾಗಿದ್ರೆ ಯಾವ ಮೂರ್ತಿಗಳನ್ನ ಎಲೆಲ್ಲಿ ಇಡಬೇಕು ಅನ್ನೋದ್ದನ್ನ ನೋಡೋಣ.
ಹಸು:
ಹಿಂದೂ ಧರ್ಮದಲ್ಲಿ ಹಸುವನ್ನು ದೇವರಂತೆ ಕಾಣಲಾಗುತ್ತದೆ. ಮನೆಯಲ್ಲಿ ಹಿತ್ತಾಳೆಯ ಕಾಮಧೇನುವಿನ ವಿಗ್ರಹವನ್ನು ಇಟ್ಟರೆ, ಇದು ನಕಾರಾತ್ಮಕ ಶಕ್ತಿಗೆ ಮುಕ್ತಿ ನೀಡುತ್ತದೆ. ಮನೆಯಲ್ಲಿ ಸಂತೋಷ, ಸಮೃದ್ಧಿಯನ್ನು ತರುತ್ತದೆ.
ಮೊಲ:
ಮೊಲವನ್ನು ವಾಸ್ತುವಿನಲ್ಲಿ ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿಯ ಪ್ರತೀಕ ಎಂದು ಪರಿಗಣಿಸಲಾಗಿದ್ದು, ಮನೆಯಲ್ಲಿ ಮೊಲದ ವಿಗ್ರಹವಿದ್ದರೆ ದುಷ್ಟ ಶಕ್ತಿಗಳು ದೂರವಾಗುತ್ತವೆೆ.
ಆಮೆ:
ಆಮೆ ವಾಸ್ತು ಶಾಸ್ತ್ರದಲ್ಲಿ ಸಮೃದ್ಧಿ ಮತ್ತು ದೀರ್ಘಾಯುಷ್ಯದ ಸಂಕೇತ. ಮನೆಯಲ್ಲಿ ಆಮೆಯ ವಿಗ್ರಹ ಇಟ್ಟಲ್ಲಿ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಕೆಲಸಗಳಲ್ಲಿನ ಅಡೆತಡೆಗಳು ದೂರವಾಗುತ್ತವೆ. ಕುಟುಂಬ ಸದಸ್ಯರ ಆರೋಗ್ಯಕ್ಕೂ ಇದು ಶುಭಕರ ಎಂದು ವಾಸ್ತು ಗುರುಗಳು ವಿವರಿಸುತ್ತಾರೆ.
ಮೀನು:
ಅಕ್ವೇರಿಯಂ ಕೇವಲ ಅಲಂಕಾರಿಕ ವಸ್ತು ಆಗಿರದೆ ವಾಸ್ತು ಶಾಸ್ತ್ರದಲ್ಲಿಯೂ ಇದಕ್ಕೆ ವಿಶೇಷ ಮಹತ್ವವಿದೆ. ಮೀನುಗಳು ಮನೆಯ ಆರ್ಥಿಕ ಸ್ಥಿರತೆಯನ್ನು ಬಲಪಡಿಸಲಿದ್ದು, ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನೂ ಹೆಚ್ಚಿಸುತ್ತವೆ. ವಾಸ್ತು ಪ್ರಕಾರ, ಅಕ್ವೇರಿಯಂ ಅನ್ನು ಮನೆಯ ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡುವುದು ಉತ್ತಮ.

ನೋಡಿರಿ

