ಮನೆಗೆ ಸಂಪತ್ತು ಬರಬೇಕಾ? – ಈ 5 ರಹಸ್ಯ ತಿಳಿದುಕೊಳ್ಳಿ

ನಿಮ್ಮ ಮನೆಯಲ್ಲಿ ಹಣದ ಹರಿವು ನಿಂತಂತಿದೆಯೇ? ಅಥವಾ ಆರ್ಥಿಕ ಸಮಸ್ಯೆಗಳು ಪದೇ ಪದೆ ಕಾಡುತ್ತಿವೆಯೇ? ಬಹುಶಃ ಇದಕ್ಕೆ ನಿಮ್ಮ ಮನೆಯ ವಾಸ್ತು ದೋಷ ಕಾರಣವಾಗಿರಬಹುದು. ಹೌದು, ವಾಸ್ತು ಶಾಸ್ತ್ರವು ಕೇವಲ ಮನೆ ನಿರ್ಮಾಣದ ವಿಜ್ಞಾನವಲ್ಲ, ಬದಲಾಗಿ ನಮ್ಮ ಜೀವನದ ಮೇಲೆ ಮನೆಯಲ್ಲಿನ ಶಕ್ತಿಗಳು ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಕುರಿತಾದ ಒಂದು ಜ್ಞಾನ. ಸರಿಯಾದ ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಸಮೃದ್ಧಿ ತುಂಬಿರುತ್ತದೆ. ನಾವು ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿ ಹಣ, ಧನಾತ್ಮಕತೆ ಮತ್ತು ಶಕ್ತಿಯನ್ನು ಆಕರ್ಷಿಸಲು ಐದು ಪ್ರಬಲ ವಾಸ್ತು ಸಲಹೆಗಳನ್ನು ನೀಡಲಾಗಿದೆ.

ಪ್ರತಿ ಮನೆಯಲ್ಲೂ ಶಕ್ತಿ, ಶಾಂತಿ ಮತ್ತು ಸಮೃದ್ಧಿ ನೆಲೆಸಿರಬೇಕು ಎಂಬುದು ಎಲ್ಲರ ಆಶಯ. ಆದರೆ, ಕೆಲವೊಮ್ಮೆ ನಮ್ಮ ಮನೆಯಲ್ಲಿ ವಾಸ್ತು ದೋಷಗಳು ಉಂಟಾದರೆ, ಅದು ಕುಟುಂಬದ ಶಾಂತಿ ಹಾಗೂ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರವು ಮನೆಗೆ ಕೇವಲ ಅಲಂಕಾರ ಅಥವಾ ವಿನ್ಯಾಸ ನೀಡುವುದಲ್ಲ, ಮನೆಯೊಳಗಿನ ಶಕ್ತಿಯನ್ನು ಸಮತೋಲನಗೊಳಿಸುವ ಕಲೆ. ಬನ್ನಿ, ಮನೆಗೆ ಸಂಪತ್ತು, ಆರೋಗ್ಯ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ವಾಸ್ತು ರಹಸ್ಯಗಳನ್ನು ತಿಳಿಯೋಣ. ಇವುಗಳನ್ನು ಅನುಸರಿಸಿದರೆ ನಿಮ್ಮ ಮನೆಯೇ ನಿಮ್ಮ ಯಶಸ್ಸಿನ ಹೆಬ್ಬಾಗಿಲಾಗುತ್ತದೆ.
ಉತ್ತರ ಅಥವಾ ಈಶಾನ್ಯದಲ್ಲಿ ಅಕ್ವೇರಿಯಂ
ವಾಸ್ತು ಪ್ರಕಾರ, ಮನೆಯ ಉತ್ತರ ದಿಕ್ಕು ಸಂಪತ್ತಿನ ಅಧಿಪತಿಯಾದ ಕುಬೇರನಿಗೆ ಸಂಬಂಧಿಸಿದೆ. ಈಶಾನ್ಯ ದಿಕ್ಕು ಪವಿತ್ರ ಮತ್ತು ಸಮೃದ್ಧಿಯ ದಿಕ್ಕು. ಈ ಎರಡೂ ದಿಕ್ಕುಗಳಲ್ಲಿ ನೀರಿನ ಅಂಶವನ್ನು ಇರಿಸುವುದು ಅತ್ಯಂತ ಶುಭ. ಇದಕ್ಕಾಗಿ, ನೀವು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಅಕ್ವೇರಿಯಂ ಅಥವಾ ವಾಟರ್ ಫೌಂಟೇನ್ (ನೀರಿನ ಕಾರಂಜಿ) ಇಡಬಹುದು. ನೀರು ಎಂದರೆ ಹರಿವು, ನಿರಂತರ ಆದಾಯದ ಸಂಕೇತ. ಮನೆಯಲ್ಲಿ ಅಕ್ವೇರಿಯಂ ಇದ್ದರೆ, ಅದರ ನೀರು ಶುದ್ಧವಾಗಿರುವಂತೆ ಮತ್ತು ಸದಾ ಹರಿಯುವಂತೆ ನೋಡಿಕೊಳ್ಳುವುದು ಮುಖ್ಯ. ಇದು ಸಂಪತ್ತಿನ ಹರಿವನ್ನು ನಿರಂತರವಾಗಿರಿಸಲು ಸಹಾಯ ಮಾಡುತ್ತದೆ.
ಆಗ್ನೇಯ ದಿಕ್ಕಿನಲ್ಲಿ ಕೆಂಪು ಬೆಳಕು
ವಾಸ್ತು ಪ್ರಕಾರ, ಮನೆಯ ಆಗ್ನೇಯ ದಿಕ್ಕು ಅಗ್ನಿ ತತ್ವಕ್ಕೆ ಸಂಬಂಧಿಸಿದೆ. ಇದನ್ನು ಹಣ ಮತ್ತು ಖ್ಯಾತಿಯ ವಲಯವೆಂದು ನಂಬಲಾಗಿದೆ. ಈ ದಿಕ್ಕಿನಲ್ಲಿರುವ ಶಕ್ತಿಯನ್ನು ಸಕ್ರಿಯಗೊಳಿಸಲು, ಇಲ್ಲಿ ಕೆಂಪು ಬಣ್ಣದ ಬಲ್ಬ್, ಕೆಂಪು ಬಣ್ಣದ ಬೆಳಕು ಅಥವಾ ಲೈಟ್ ಇಡುವುದು ಉತ್ತಮ. ಅಗ್ನಿ ದೇವ ಮತ್ತು ಶುಕ್ರ ಗ್ರಹ ಈ ದಿಕ್ಕನ್ನು ಆಳುವುದರಿಂದ, ಕೆಂಪು ಬಣ್ಣದ ಬೆಳಕು ಇಲ್ಲಿನ ಶಕ್ತಿಯನ್ನು ಹೆಚ್ಚಿಸಿ, ಆರ್ಥಿಕ ಲಾಭ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ತರುತ್ತದೆ.
ಪೂರ್ವ ಅಥವಾ ಆಗ್ನೇಯದಲ್ಲಿ ಬಿದಿರು ಗಿಡ
ಬಿದಿರು ಸಸ್ಯವು ಸಮೃದ್ಧಿ, ಬೆಳವಣಿಗೆ ಮತ್ತು ದೀರ್ಘಾಯುಷ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಇಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಈ ಸಸ್ಯವನ್ನು ಮನೆಯ ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿ ಇರಿಸುವುದು ಅತ್ಯಂತ ಸೂಕ್ತ. ಪೂರ್ವ ದಿಕ್ಕು ಹೊಸ ಆರಂಭ ಮತ್ತು ಸೂರ್ಯನಿಗೆ ಸಂಬಂಧಿಸಿದೆ. ಇಲ್ಲಿ ಬಿದಿರು ಗಿಡವನ್ನು ಇಡುವುದರಿಂದ ಜೀವನದಲ್ಲಿ ಸ್ಥಿರವಾದ ಪ್ರಗತಿ ಮತ್ತು ಸಕಾರಾತ್ಮಕ ಬೆಳವಣಿಗೆ ಕಾಣಬಹುದು. ಇದು ಕುಟುಂಬದಲ್ಲಿ ಸೌಹಾರ್ದತೆಯನ್ನು ಹೆಚ್ಚಿಸಲು ಮತ್ತು ಅದೃಷ್ಟವನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಬಾಂಬೂ ಗಿಡವನ್ನು ‘ಲಕ್ಕಿ ಬಾಂಬೂ’ ಎಂದೂ ಕರೆಯಲಾಗುತ್ತದೆ.
ಪಶ್ಚಿಮ ದಿಕ್ಕಿನಲ್ಲಿ ನಾಣ್ಯಗಳ ಬೌಲ್ಮ
ನೆಯ ಪಶ್ಚಿಮ ದಿಕ್ಕು ಆರ್ಥಿಕ ಸ್ಥಿರತೆ ಮತ್ತು ಉಳಿತಾಯಗಳಿಗೆ ಸಂಬಂಧಿಸಿದೆ. ಈ ದಿಕ್ಕಿನ ಶಕ್ತಿಯನ್ನು ಹೆಚ್ಚಿಸಲು, ಒಂದು ಬಟ್ಟಲು ಅಥವಾ ಜಾಡಿ ತುಂಬಾ ನಾಣ್ಯಗಳನ್ನು (ನಾಣ್ಯಗಳ ಪಾತ್ರೆ) ಇಲ್ಲಿ ಇರಿಸಬಹುದು. ಇದು ಆರ್ಥಿಕ ಸ್ಥಿರತೆಯನ್ನು ಬಲಪಡಿಸುತ್ತದೆ ಮತ್ತು ಹಣವು ನಿಮ್ಮ ಕೈಯಲ್ಲಿ ಉಳಿಯುವಂತೆ ಮಾಡುತ್ತದೆ. ನಾಣ್ಯಗಳ ಸದ್ದು ಹಣವನ್ನು ಆಕರ್ಷಿಸುತ್ತದೆ ಎಂಬ ನಂಬಿಕೆಯೂ ಇದೆ. ಈ ಸರಳ ತಂತ್ರ ಹಣಕಾಸಿನ ಭದ್ರತೆಯನ್ನು ತಂದುಕೊಡುತ್ತದೆ. ಮನೆಗೆ ಆರ್ಥಿಕ ಸಮತೋಲನ ತರುತ್ತದೆ.
ಮನೆಯ ಬ್ರಹ್ಮಸ್ಥಾನ ಖಾಲಿ ಇಡಿ
ಮನೆಯ ಕೇಂದ್ರ ಭಾಗವನ್ನು ಬ್ರಹ್ಮಸ್ಥಾನ ಎಂದು ಕರೆಯಲಾಗುತ್ತದೆ. ಇದು ಮನೆಯ ಹೃದಯ ಭಾಗವಾಗಿದ್ದು, ಇಡೀ ಮನೆಯ ಶಕ್ತಿ ಕೇಂದ್ರವಾಗಿದೆ. ಇಲ್ಲಿಂದಲೇ ಶಕ್ತಿ ಎಲ್ಲಾ ದಿಕ್ಕುಗಳಿಗೆ ಹರಿಯುತ್ತದೆ. ಬ್ರಹ್ಮಸ್ಥಾನವು ಯಾವುದೇ ಅಡೆತಡೆಗಳು, ಕಂಬಗಳು ಅಥವಾ ಭಾರವಾದ ಪೀಠೋಪಕರಣಗಳಿಂದ ಮುಕ್ತವಾಗಿರುವುದು ಬಹಳ ಮುಖ್ಯ. ಈ ಜಾಗವನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಖಾಲಿಯಾಗಿ ಇಟ್ಟರೆ ಮನೆಯಲ್ಲಿ ಸಮತೋಲನ, ಆರೋಗ್ಯ ಮತ್ತು ಸಂಪತ್ತು ವೃದ್ಧಿಯಾಗುತ್ತದೆ. ಇಲ್ಲಿ ಶಕ್ತಿಯು ಮುಕ್ತವಾಗಿ ಹರಿಯುವುದರಿಂದ ಕುಟುಂಬದ ಸದಸ್ಯರಲ್ಲಿ ಸಂತೋಷ ಮತ್ತು ನೆಮ್ಮದಿ ಹೆಚ್ಚುತ್ತದೆ.

ನೋಡಿರಿ

