ಅಡುಗೆಮನೆಯಲ್ಲಿ ಚಪ್ಪಲಿ ಹಾಕೊಂಡು ಅಡುಗೆ ಮಾಡ್ತೀರಾ? – ಇನ್ಮುಂದೆ ಅಪ್ಪಿತಪ್ಪಿ ಈ ತಪ್ಪುನ್ನ ಮಾಡಬೇಡಿ

ಅಡುಗೆಮನೆಯಲ್ಲಿ ಚಪ್ಪಲಿ ಹಾಕೊಂಡು ಅಡುಗೆ ಮಾಡ್ತೀರಾ? –  ಇನ್ಮುಂದೆ ಅಪ್ಪಿತಪ್ಪಿ  ಈ ತಪ್ಪುನ್ನ  ಮಾಡಬೇಡಿ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ  ಪ್ರತಿಯೊಂದು ಭಾಗವೂ ಒಂದು ಶಕ್ತಿಯನ್ನು ಹೊಂದಿರುತ್ತದೆ. ಅದರಲ್ಲಿಯೂ ಅಡುಗೆಮನೆಯನ್ನು  ‘ಅನ್ನಪೂರ್ಣೇಶ್ವರಿ’ಯ ನೆಲೆ ಎಂದು ಹೇಳಲಾಗುತ್ತೆ. ಅಡುಗೆಮನೆಯಲ್ಲಿ ನಾವು ಮಾಡುವ ಸಣ್ಣ ತಪ್ಪುಗಳು ಮನೆಯವರ ಆರೋಗ್ಯ  ಮತ್ತು ಆರ್ಥಿಕ ಸ್ಥಿತಿಯ ಮೇಲೆ ದೊಡ್ಡ ಪ್ರಭಾವ ಬೀರಬಲ್ಲವು. ಅಡುಗೆಮನೆಯಲ್ಲಿ ಪಾದರಕ್ಷೆಗಳನ್ನು ಧರಿಸುವುದು ವಾಸ್ತು ದೃಷ್ಟಿಯಿಂದ ಎಷ್ಟು ಹಾನಿಕಾರಕ ಎಂಬ ಕುರಿತು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಅಗ್ನಿ ದೇವನಿಗೆ ಅಪಚಾರ

ಅಡುಗೆಮನೆಯು ಅಗ್ನಿ ತತ್ವವನ್ನು ಪ್ರತಿನಿಧಿಸುತ್ತದೆ. ಜ್ಯೋತಿಷ್ಯದಲ್ಲಿ ಮಂಗಳ ಗ್ರಹವು ಅಗ್ನಿಗೆ ಅಧಿಪತಿ. ನಾವು ಪಾದರಕ್ಷೆಗಳನ್ನು ಧರಿಸಿ ಅಡುಗೆ ಮಾಡಿದರೆ, ಅದು ಅಗ್ನಿ ದೇವನಿಗೆ ಮಾಡುವ ಅಪಮಾನ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಮನೆಯಲ್ಲಿ ಮಂಗಳ ದೋಷದ ಪ್ರಭಾವ ಹೆಚ್ಚಾಗಿ, ಅನಗತ್ಯ ಕಲಹಗಳು ಮತ್ತು ಕೋಪದ ವಾತಾವರಣ ನಿರ್ಮಾಣವಾಗಬಹುದು.

ಅನ್ನಪೂರ್ಣೇಶ್ವರಿಯ ಅವಕೃಪೆ
ಅಡುಗೆಮನೆಯನ್ನು ಪವಿತ್ರ ಸ್ಥಳವೆಂದು ಭಾವಿಸಲಾಗುತ್ತದೆ. ಹೊರಗಿನ ಧೂಳು, ಕೊಳೆ ತುಂಬಿದ ಚಪ್ಪಲಿಗಳನ್ನು ಧರಿಸಿ ಅಡುಗೆ ಮನೆ ಪ್ರವೇಶಿಸುವುದರಿಂದ ಅಲ್ಲಿನ ಧನಾತ್ಮಕ ಶಕ್ತಿ ಕುಂದುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಇದು ತಾಯಿ ಅನ್ನಪೂರ್ಣೇಶ್ವರಿಯ ಅಸಮಾಧಾನಕ್ಕೆ ಕಾರಣವಾಗಿ ಮನೆಯಲ್ಲಿ ಆಹಾರದ ಕೊರತೆ ಅಥವಾ ಆರ್ಥಿಕ ಮುಗ್ಗಟ್ಟು ಎದುರಾಗುವಂತೆ ಮಾಡುತ್ತದೆ.
ರಾಹು ಮತ್ತು ಶನಿಯ ಪ್ರಭಾವ
ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾದರಕ್ಷೆಗಳನ್ನು ಶನಿ ಗ್ರಹಕ್ಕೆ ಹೋಲಿಸಲಾಗುತ್ತದೆ. ಅಡುಗೆಮನೆಯಲ್ಲಿ ಚಪ್ಪಲಿ ಧರಿಸುವುದರಿಂದ ಶನಿ ಮತ್ತು ರಾಹುವಿನ ನಕಾರಾತ್ಮಕ ಶಕ್ತಿಗಳು ಆಹಾರದ ಮೂಲಕ ದೇಹವನ್ನು ಪ್ರವೇಶಿಸುತ್ತವೆ ಎಂಬ ನಂಬಿಕೆಯಿದೆ. ಇದು ಮನೆಯ ಸದಸ್ಯರಲ್ಲಿ ದೀರ್ಘಕಾಲದ ಕಾಯಿಲೆಗಳು ಮತ್ತು ಮಾನಸಿಕ ಅಶಾಂತಿಯನ್ನು ಉಂಟುಮಾಡಬಹುದು.

Kishor KV