ಮನೆಯ ದೇವರ ಕೋಣೆಯಲ್ಲಿ ಯಾವ ರೀತಿಯ ಫೋಟೋಗಳನ್ನ ಇಡಬೇಕು ಗೊತ್ತಾ?, ಒಮ್ಮೆ ಇದ್ದನ್ನ ಓದಿ

ಮನೆ ಕಟ್ಟುವಾಗ ಹೆಚ್ಚಿನವರು ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುತ್ತಿದ್ದು, ಮನೆಯ ವಿನ್ಯಾಸ, ಕೊಠಡಿಗಳ ವ್ಯವಸ್ಥೆ, ಕಿಟಕಿಗಳು, ಬಾಗಿಲುಗಳ ಸ್ಥಾನ — ಇವೆಲ್ಲವೂ ವಾಸ್ತು ಪ್ರಕಾರವೇ ಇರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಆದರೆ ಬಹುತೇಕರು ಗಮನಿಸದೇ ಬಿಡುವ ಒಂದು ಮುಖ್ಯ ಅಂಶವೆಂದರೆ ಮನೆಯ ಪೂಜಾ ಕೋಣೆ. ಮನೆಯಲ್ಲಿ ದೇವರ ಆರಾಧನೆಗೆ ಒಂದು ವಿಶೇಷ ಸ್ಥಾನವಿದೆ. ಕೆಲವರು ಪ್ರತ್ಯೇಕ ಪೂಜಾ ಕೋಣೆಯನ್ನೇ ನಿರ್ಮಿಸುತ್ತಾರೆ. ಮನೆ ಮಂದಿಯವರ ನಂಬಿಕೆ ಮತ್ತು ಇಷ್ಟ ದೈವದ ಆಸ್ಥೆ ಅನ್ವಯ, ವಿಧ ವಿಧ ಮೂರ್ತಿಗಳು ಮತ್ತು ಫೋಟೊಗಳನ್ನು ಪೂಜಾ ಜಾಗದಲ್ಲಿ ಇಡುವುದು ಸಾಮಾನ್ಯ. ಆದರೆ ವಾಸ್ತು ಪ್ರಕಾರ ದೇವರ ವಿಗ್ರಹಗಳನ್ನು ಮನೆಯಲ್ಲಿ ಇಡುವಾಗ ಕೆಲವು ಮುಖ್ಯ ನಿಯಮಗಳನ್ನು ಪಾಲಿಸಬೇಕು ಅನ್ನೋದ್ದನ್ನ ನೋಡೋಣ.
# ಹಿಂಸಾತ್ಮಕ ಅಥವಾ ವಿಧ್ವಂಸಕ ಸ್ಥಿತಿಯಲ್ಲಿರುವ ದೇವರ ವಿಗ್ರಹಗಳು ಮನೆಯಲ್ಲಿ ನೆಗಟಿವಿಟಿ ಉಂಟು ಮಾಡುತ್ತವೆ. ಇಂತಹ ಮೂರ್ತಿಗಳು ಮನೆಯಲ್ಲಿನ ಶಾಂತಿಗೆ ಧಕ್ಕೆಯಾಗಿ ಜಗಳ-ತಕರಾರು ಹೆಚ್ಚಾಗುವ ಸಾಧ್ಯತೆ ಇದೆ.
# ಪೂಜಾ ಕೋಣೆಯಲ್ಲಿ ಒಂದೇ ದೇವರ ಎರಡು ಅಥವಾ ಮೂರು ಮೂರ್ತಿಗಳು/ಫೋಟೊ ಇಡುವುದು ವಾಸ್ತು ಪ್ರಕಾರ ಗೊಂದಲ ಮತ್ತು ಕಷ್ಟವನ್ನು ಆಹ್ವಾನಿಸುತ್ತದೆ. ಒಂದೇ ರೂಪದ ದೇವರ ವಿಗ್ರಹ ಒಂದು ಸಾಕು.
# ಒಡೆದ ಅಥವಾ ಬಿರುಕು ಮೂಡಿದ ವಿಗ್ರಹಗಳನ್ನು ಮನೆಯಲ್ಲಿ ಇಡುವುದು ಅಶುಭ. ಇಂತಹ ವಿಗ್ರಹಗಳು ಇದ್ದರೆ ಅವುಗಳನ್ನು ಮನೆಯಿಂದ ತೆಗೆದು, ಮರದ ಕೆಳಗೆ ಇರಿಸುವುದು ಅಥವಾ ನದಿಗೆ ಸಮರ್ಪಿಸುವುದು ಉತ್ತಮ.
# ಮೂರ್ತಿ ಹಿಂಭಾಗವು ಹೊರಗೆ ಕಾಣುವಂತಿದ್ದರೆ ದಾರಿದ್ರ್ಯ ಮತ್ತು ಅಡೆತಡೆಗಳು ಹೆಚ್ಚಾಗುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಿಶೇಷವಾಗಿ ಗಣೇಶನ ಮೂರ್ತಿಗೆ ಈ ನಿಯಮ ಅನಿವಾರ್ಯ.
#ವಾಸ್ತು ಪ್ರಕಾರ ನಿಂತಿರುವ ಮೂರ್ತಿಗಳಿಗಿಂತ ಕುಳಿತ ಸ್ಥಿತಿಯ ಮೂರ್ತಿಗಳು ಶುಭಕರ. ಮೂರ್ತಿಯ ಮುಖವು ಶಾಂತ ಮತ್ತು ನಗುತ್ತಿರುವಂತಿರಬೇಕು. ದೇವರ ಕೈ ಆಶೀರ್ವಾದ ಮುದ್ರೆಯಲ್ಲಿ ಯಲ್ಲಿದ್ದರೆ ಇನ್ನೂ ಉತ್ತಮ.

ನೋಡಿರಿ

