ನಿಮ್ಮ ಮನೆಯಲ್ಲಿ ವಾಸ್ತು ದೋಷ ಇದ್ಯಾ – ಕರ್ಪೂರದಿಂದ ದುಷ್ಟ ಶಕ್ತಿ ನಿವಾರಣೆ

ನಿಮ್ಮ ಮನೆಯಲ್ಲಿ ವಾಸ್ತು ದೋಷ ಇದ್ಯಾ –  ಕರ್ಪೂರದಿಂದ ದುಷ್ಟ ಶಕ್ತಿ ನಿವಾರಣೆ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ವಾಸ್ತು ಸಲಹೆ ಪಾಲಿಸುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತಡೆಯಬಹುದು. ವಾಸ್ತು ಶಾಸ್ತ್ರದಲ್ಲಿ ಕರ್ಪೂರಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಕರ್ಪೂರವು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ಮನೆಗೆ ಸಕಾರಾತ್ಮಕತೆಯನ್ನು ತರುತ್ತದೆ ಎಂದು ನಂಬಲಾಗಿದೆ.   ಕೈಗೊಂಡ ಕೆಲಸ ಪದೇ ಪದೇ ವಿಫಲವಾದರೆ ಅಥವಾ ಮನೆಯಲ್ಲಿ ಅಶಾಂತಿಯ ವಾತಾವರಣವಿದ್ದರೆ, ಅದಕ್ಕೆ ಕಾರಣ ಮನೆಯಲ್ಲಿನ ನಕಾರಾತ್ಮಕ ಶಕ್ತಿ ಇರಬಹುದು. ಬೆಳಿಗ್ಗೆ ಮತ್ತು ಸಂಜೆ ಕರ್ಪೂರ ಹಚ್ಚುವುದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದು ವಾತಾವರಣವನ್ನು ಶುದ್ಧೀಕರಿಸುತ್ತದೆ. ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ.

Kishor KV