ಗೆಳತಿ ಮೇಲೆ ಲವ್..‌ ಮದ್ವೆಗೆ ಸಂಕಷ್ಟ.. ಸ್ಪಿನ್ನರ್ ಬದುಕು ಬದಲಿಸಿದ್ದೇ ಪತ್ನಿ
ವರುಣ್‌ ಚಕ್ರವರ್ತಿ ಲವ್‌ ಲೈಫ್

ಗೆಳತಿ ಮೇಲೆ ಲವ್..‌ ಮದ್ವೆಗೆ ಸಂಕಷ್ಟ.. ಸ್ಪಿನ್ನರ್ ಬದುಕು ಬದಲಿಸಿದ್ದೇ ಪತ್ನಿವರುಣ್‌ ಚಕ್ರವರ್ತಿ ಲವ್‌ ಲೈಫ್

ಸ್ಪಿನ್‌ ಮಾಂತ್ರಿಕ ವರುಣ್‌ ಚಕ್ರವರ್ತಿ.. ನಾಲ್ಕು ವರ್ಷಗಳ ಹಿಂದೆ ಎಲ್ಲಿ ಅವಮಾನ ಆಯ್ತೋ ಅದೇ ಜಾಗದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.. ಇತ್ತೀಚೆಗೆ ದುಬೈನಲ್ಲಿ ನಡೆಯುತ್ತಿರೋ ಚಾಂಪಿಯನ್ಸ್‌ ಟ್ರೋಫಿಯಲ್ಲಿ ವರುಣ್ ಚಕ್ರವರ್ತಿ ಅಬ್ಬರದ ಆಟ ಆಡ್ತಿದ್ದಾರೆ.. ಇದೀಗ ವರುಣ್‌ ಆಟದ ಜೊತೆಗೆ ಅವ್ರ ವೈಯಕ್ತಿ ಜೀವನ ಕೂಡ ಚರ್ಚೆಯಲ್ಲಿದೆ. ಈ ಪ್ಲೇಯರ್‌ ಗೆ ಮದ್ವೆ ಆಗಿದ್ಯಾ? ಅವ್ರ ಮಡದಿ ಯಾರು ಅಂತಾ ಲೇಡಿ ಫ್ಯಾನ್ಸ್‌ ಚರ್ಚೆ ನಡೆಸ್ತಿದ್ದಾರೆ.. ಅಷ್ಟಕ್ಕೂ ವರುಣ್‌ ವೈಫ್‌ ಯಾರು? ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತಾಂಡವ್‌ ಕೈ ಮುರಿದ ಭಾಗ್ಯ! – ಶ್ರೇಷ್ಠಾ ಸೊಕ್ಕು.. ಬೀದಿಗೆ ಬೀಳ್ತಾನಾ?

ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್.. ಫೇಸ್ ಬೌಲರ್.. ಇದೀಗ ಗ್ರೇಟ್‌ ಸ್ಪಿನ್ನರ್ ವರುಣ್ ಚಕ್ರವರ್ತಿ..‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ವರುಣ್‌ ಅದ್ಬುತ ಪ್ರದರ್ಶನ ನೀಡಿದ್ರು.. ಮೈದಾನದಲ್ಲಿ ಒಂದೊಂದೇ ವಿಕೆಟ್‌ ತೆಗಿತಿದ್ದಂತೆ, ಅವ್ರ ವೈಯಕ್ತಿಕ ಜೀವನದ ಬಗ್ಗೆಯೂ ಈಗ ಮುನ್ನೆಲೆಗೆ ಬಂದಿದೆ. ವರುಣ್‌ ಚಕ್ರವರ್ತಿ ಬಹುಕಾಲ ಗೆಳತಿಯನ್ನ ಪ್ರೀತಿಸಿ ಮದುವೆಯಾಗಿದ್ದಾರೆ.. ಅವ್ರ ಮಡದಿ ಯಾರು ಅನ್ನೋದನ್ನ ಹೇಳ್ತೀನಿ..

ವರುಣ್‌ ಚಕ್ರವರ್ತಿ ಪತ್ನಿ ನೇಹಾ ಖೇಡೇಕರ್.. ಇವರಿಬ್ರು ಆರಂಭದಲ್ಲಿ ಫ್ರೆಂಡ್ಸ್‌ ಆಗಿದ್ರು.. ಬರು ಬರುತ್ತಾ ಆ ಫ್ರೆಂಡ್‌ಶಿಪ್‌ ಪ್ರೀತಿಗೆ ಕನ್‌ವರ್ಟ್‌ ಆಯ್ತು.. ಪ್ರೀತಿಯಲ್ಲಿ ಬೀಳೋ ಟೈಮ್‌ ನಲ್ಲಿ ವರುಣ್‌ ಕ್ರಿಕೆಟರ್‌ ಆಗಿರ್ಲಿಲ್ಲ.. ಆರ್ಟಿಟೆಕ್ಚರ್ ಕೆಲಸವನ್ನು ಮಾಡ್ತಿದ್ರಂತೆ. ಬಳಿಕ ಅವ್ರಿಗೆ ಕ್ರಿಕೆಟ್‌ ಮೇಲೆ ಆಸಕ್ತಿ ಮೂಡಿತು. ವೃತ್ತಿ ಜೀವನ ಬದಲಾವಣೆ ಟೈಮ್‌ ನಲ್ಲಿ ನೇಹಾ ಅವ್ರಿಗೆ ತುಂಬಾ ಸಪೋರ್ಟಿವ್‌ ಆಗಿದ್ರು.. ಕಷ್ಟದ ಸಮಯದಲ್ಲಿ ಅವ್ರಿಗೆ ಬೆಂಬಲವಾಗಿ ನಿಂತ್ರು.. ವರುಣ್‌ ಮೈದಾನದಲ್ಲಿ ಆಡ್ತಿದ್ರೆ.. ನೇಹಾ ಕೂಡ ಸ್ಟೇಡಿಯಂ ಗೆ ಬಂದು ಸಪೋರ್ಟ್‌ ಮಾಡ್ತಿದ್ರು.. ಇದ್ರಿಂದಾಗೇ ನೇಹಾ ವರುಣ್‌ ಸಂಬಂಧ ಇನ್ನೂ ಗಟ್ಟಿಯಾಯ್ತು.. ಸುಮಾರು 2 ವರ್ಷಗಳ ಕಾಲ ಡೇಟಿಂಗ್‌ ನಡೆಸಿದ ಜೋಡಿ ಬಳಿಕ ಮದುವೆಯಾಗಲು ನಿರ್ಧರಿಸಿದ್ರು..2020 ರ ಆರಂಭದಲ್ಲಿ ಮದುವೆಯಾಗಲು ಕೂಡ ನಿರ್ಧರಿಸಿದ್ರು.. ಆದ್ರೆ ಇವ್ರ ಮದುವೆಗೆ ಮಹಾಮಾರಿ ಕೋವಿಡ್‌ ಅಡ್ಡಿಯಾಯ್ತು.. ಹೀಗಾಗಿ ಕೆಲ ತಿಂಗಳ ಕಾಲ ಮದುವೆ ಮುಂದೂಡಿಡ್ರು. 2020 ಡಿಸೆಂಬರ್‌ 12, 2020 ರಂದು ಎಲ್ಲರ ಸಮ್ಮುಖದಲ್ಲಿ ಮದುವೆಯಾದ್ರು..

ಇನ್ನು ವರುಣ್‌ ಹಾಗೂ ನೇಹಾಗೆ ಮುದ್ದಾದ ಮಗ ಕೂಡ ಇದ್ದಾನೆ. ನವೆಂಬರ್ 10, 2022 ರಂದು, ವರುಣ್ ಮತ್ತು ನೇಹಾ ಆತ್ಮನ್ ಎಂಬ ಮಗನನ್ನು ಸ್ವಾಗತಿಸಿದರು. ಇದೀಗ ವರುಣ್‌ ಮಗ ಹಾಗೂ ಮುದ್ದಿನ ಮಡದಿಯೊಂದಿಗೆ ಸುಖವಾಗಿ ಬಾಳ್ತಿದ್ದಾರೆ.

Shwetha M