ಬೀನ್ ಬ್ಯಾಗ್ ಹಿಡಿದು ದೊಡ್ಮನೆಗೆ ಬಂದ ಸಂತು, ಪಂತು – ಚೈತ್ರಾಗೆ ಟಾಂಗ್ ಕೊಟ್ಟಿದ್ಯಾಕೆ ಡ್ರೋನ್?

ಬಿಗ್ ಬಾಸ್ ಕನ್ನಡ ಸೀಸನ್ 11 ಸದ್ಯ ಭಾರಿ ಕುತೂಹಲ ಮೂಡಿಸಿದೆ. ಕಳೆದ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿದ ತ್ರಿವಿಕ್ರಮ್ ಹಾಗೂ ಗೌತಮಿಗೆ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ರು.. ಅಷ್ಟೇ ಅಲ್ಲ ಭಾನುವಾರದ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಅಥವಾ ಐಶ್ವರ್ಯಾ ಈ ಇಬ್ಬರಲ್ಲಿ ಯಾರದರೂ ಒಬ್ಬರು ಬಿಗ್ ಬಾಸ್ನಿಂದ ಹೊರ ಬರುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಕೊನೆಗೆ ಇಬ್ಬರು ಸೇಫ್ ಆಗಿದ್ದಾರೆ. ಇದೀಗ ದೊಡ್ಮನೆಗೆ ಇಂದು ಸೀಸನ್- 10ರ ಸ್ಪರ್ಧಿಗಳು ಆಗಮನವಾಗಿದ್ದು ಹಳಬರ-ಹೊಸಬರ ಮಹಾ ಮಿಲನವಾಗಿದೆ.
ಇದನ್ನೂ ಓದಿ: 2024ರಲ್ಲಿ ಜೈಲಿಗೆ ಹೋದ VIPಗಳು ಯಾರು ಗೊತ್ತಾ? – D ಬಾಸ್, ಪ್ರಜ್ವಲ್ಗೆ ಪರಪ್ಪನ ಅಗ್ರಹಾರ ‘ದರ್ಶನ’
ಹೊರಗಡೆಯಿಂದ ಯಾರು ಬರಬಹುದು ಎಂದು ಸ್ಪರ್ಧಿಗಳೆಲ್ಲಾ ಕುತೂಹಲದಿಂದ ಕಾಯುತ್ತಿರುವಾಗ ಬೆಂಕಿ ತನಿಷಾ ಕುಪ್ಪಂಡಾ ಬಿಗ್ ಎಂಟ್ರಿ ಕೊಟ್ಟರು ನೋಡಿ, ಮನೆಯ ಸದಸ್ಯರೆಲ್ಲಾರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಇವರ ಬಳಿಕ ಸೂಟ್, ಬೂಟಿನಲ್ಲಿ ಡ್ರೋನ್ ಪ್ರತಾಪ್ ಬಂದಿದ್ದೇ ಬಂದಿದ್ದು ಹಂಗೆ ಚೈತ್ರಾ ಕುಂದಾಪುರಗೆ ಟಾಂಗ್ ಕೊಟ್ಟರು. ಚೈತ್ರಾಕ್ಕ ಅಣ್ಣ ಅಂತೇನೂ ಕರೆಯಬೇಡಿ ಎಂದ್ರು. ಬಿಗ್ ಬಾಸ್ ಸ್ಪರ್ಧಿಗಳಿಗೆ ಸರ್ಪ್ರೈಸ್ ಜೊತೆ ಮಜಾ ಕೂಡ ಕಾದಿತ್ತು. ಏಕೆಂದರೆ ಚುಟು ಚುಟು ಅಂತೈತೆ ಎನ್ನುವ ಸಾಂಗ್ಗೆ ಹನುಮಂತು, ತನಿಷಾ ಕುಪ್ಪಂಡಾ ಜೊತೆ ಸ್ಟೆಪ್ಸ್ ಹಾಕಿದರು.
ತುಕಾಲಿ ಸಂತೋಷ ಫುಲ್ ಜಾಲಿಯಾಗಿ ಇರುವಾಗ ಬಿಗ್ ಬಾಸ್ ವಿಶೇಷ ಮನವಿ ಮಾಡಿದ್ದಾರೆ. ಸಂತು-ಪಂತು ಜೋಡಿ ಎತ್ತುಗಳು. ಇಬ್ಬರು ಇರದೆ ಹೋದರೇ ಅಪೂರ್ಣತೆ ಭಾವ ಕಾಡುತ್ತದೆ ಎಂದು ಬಿಗ್ ಬಾಸ್ ಹೇಳುತ್ತಿದ್ದಂತೆ ಮೇನ್ ಡೋರ್ನಿಂದ ವರ್ತೂರು ಸಂತೋಷ ಎರಡು ಕೈಯಲ್ಲಿ ಬ್ಯಾಗ್ ಹಿಡಿದು ಎಂಟ್ರಿ ಕೊಟ್ಟರು. ಇದನ್ನು ನೋಡಿದ ತುಕಾಲಿ ಸಂತು ಓಡಿ ಹೋಗಿ ಗೆಳೆಯನನ್ನ ಅಪ್ಪಿಕೊಂಡು ಸಂತಸ ಪಟ್ಟಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಹೊಸ ಕಳೆ ಬಂದಿದ್ದು ಹಳಬರು ಹಾಗೂ ಹೊಸಬರು ಮಹಾ ಮಿಲನವಾಗಿದೆ. ಮೊದಲು ಬಿಗ್ ಬಾಸ್ ಮನೆಗೆ ಹಳೆ ಸ್ಪರ್ಧಿಗಳನ್ನ ಒಬ್ಬರು ಅಥವಾ ಇಬ್ಬರನ್ನು ಮಾತ್ರ ಕಳುಹಿಸುತ್ತಿದ್ದರು. ಆದರೆ ಇದೇ ಬಾರಿ ಹಳೆಯ ಸ್ಪರ್ಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟು ನಾಲ್ವರು ಬಿಗ್ಬಾಸ್ ಮನೆಗೆ ಬಂದಿದ್ದಾರೆ. ತಾವೆಲ್ಲಾ ಹೇಗೆ ಆಡಿದ್ದರು, ಈಗ ನೀವು ಹೇಗೆ ಆಡಬೇಕು ಎಂದು ಸೀಸನ್-10 ಸ್ಪರ್ಧಿಗಳು, ಈಗಿನವರಿಗೆ ಹೇಳಿಕೊಡಬಹುದು. ಜ್ಯೂನಿಯರ್ ಸ್ಪರ್ಧಿಗಳ ಆಟಕ್ಕೆ ಹೊಸ ಟಚ್ ಸೀನಿಯರ್ ಸ್ಪರ್ಧಿಗಳು ಕೊಡಲಿದ್ದಾರೆ.

ನೋಡಿರಿ

