ವರ್ತೂರು ಸಂತೋಷ್ ಹೋದಲ್ಲೆಲ್ಲಾ ಹೂಮಳೆ – ಹಳ್ಳಿಕಾರ್ ಹವಾಗೆ ಸ್ಟಾರ್ ಗಳೇ ಶೇಕ್ ಶೇಕ್

ವರ್ತೂರು ಸಂತೋಷ್ ಹೋದಲ್ಲೆಲ್ಲಾ ಹೂಮಳೆ – ಹಳ್ಳಿಕಾರ್ ಹವಾಗೆ ಸ್ಟಾರ್ ಗಳೇ ಶೇಕ್ ಶೇಕ್

ಬಿಗ್‌ಬಾಸ್ ಸ್ಪರ್ಧಿಯಾಗಿ ಜನಮನ ಗೆದ್ದಿರುವ ವರ್ತೂರು ಸಂತೋಷ್ ಈಗ ಸೆಲೆಬ್ರಿಟಿಯಾಗಿದ್ದಾರೆ. ಹೋದಲ್ಲಿ ಬಂದಲ್ಲಿ ಹಳ್ಳಿಕಾರ್ ಸಂತೋಷ್‌ಗೆ ಅಭಿಮಾನಿಗಳು ಹೂವಿನ ಮಳೆಯನ್ನೇ ಸುರಿಸುತ್ತಿದ್ದಾರೆ. ವರ್ತೂರು ಸಂತೋಷ್ ಈಗ ಎಲ್ಲಿಗೆ ಹೊರಟರು ಜಾತ್ರೆ.. ನಿಂತರೆ ಚರಿತ್ರೆ ಎಂಬ ತುಕಾಲಿ ಸಂತೋಷ್ ಮಾತು ನಿಜವಾಗುತ್ತಿದೆ. ಯಾಕೆಂದರೆ, ವರ್ತೂರು ಸಂತೋಷ್ ಗೆ ಅಭಿಮಾನಿಗಳು ಜೈಕಾರ ಹಾಕುತ್ತಾ ಪ್ರೀತಿ ತೋರಿಸುತ್ತಿದ್ದಾರೆ.

ಇದನ್ನೂ ಓದಿ: ಹಳ್ಳಿಕಾರ್‌ ಒಡೆಯನ ಮನೆಗೆ ಬಂದ ತುಕಾಲಿ ಸಂತುಗೆ ಭರ್ಜರಿ ಗಿಫ್ಟ್‌! – ಸ್ನೇಹಿತನ ಉಡುಗೊರೆಗೆ ಭಾವುಕರಾದ ತುಕಾಲಿ

ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಆಗಿದ್ದವರು ವರ್ತೂರು ಸಂತೋಷ್. ದೊಡ್ಮನೆಗೆ ಹೋದ ಕೆಲವೇ ದಿನಗಳಲ್ಲಿ ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಬೇಕಾಯ್ತು. ಕಂಬಿ ಹಿಂದೆ ಹೋಗಿ ಬಂದಿದ್ದೇ ಬಂದಿದ್ದು.. ರಾತ್ರೋರಾತ್ರಿ ವರ್ತೂರು ಸಂತೋಷ್ ಗೆ ಫ್ಯಾನ್ ಫಾಲೋವರ್ಸ್ ಜಾಸ್ತಿಯಾದರು. ನಂತರ ಬಿಗ್‌ಬಾಸ್ ಮನೆಗೆ ಮರಳಿ ಬಂದ ಮೇಲಂತೂ ಹಳ್ಳಿಕಾರ್ ಹವಾ ಜೋರಾಗಿತ್ತು. ಅಭಿಮಾನಿಗಳಂತೂ ರಿಯಾಲಿಟಿ ಶೋ ಇತಿಹಾಸದಲ್ಲೇ ಯಾರಿಗೂ ಹಾಕದಷ್ಟರ ಮಟ್ಟಿಗೆ ವರ್ತೂರ್​ಗೆ ವೋಟ್ ಹಾಕಿದ್ದರು. ಜನರ ಪ್ರೀತಿ ತನಗೆ ದಕ್ಕಿದೆ ಅಂತಾ ಗೊತ್ತಾಗಿದ್ದೇ ತಡ, ವರ್ತೂರು ಆಟವೇ ಬದಲಾಗಿ ಹೋಗಿತ್ತು. ಸಂತು ಪಂತು ಜೋಡಿ ಗೆಲ್ಲೋದಕ್ಕಿಂತ ಜನರ ಮನಸಲ್ಲಿ ನಿಲ್ಲೋದೇ ಸಾಧನೆ ಎಂಬ ರೀತಿ ಆಟವಾಡಿದರು. ಇದು ಕೂಡಾ ಕರ್ನಾಟಕ ಜನತೆಯ ಹೃದಯ ಮುಟ್ಟಿತ್ತು. ಫೈನಲ್ ವರೆಗೂ ಬಂದ ವರ್ತೂರು ಸಂತೋಷ್ ಕಪ್ ಗೆಲ್ಲದೇ ಇದ್ದರೂ ಕೋಟಿ ಕೋಟಿ ಜನತೆಯ ಮನಸು ಗೆದ್ದರು. ಇದಕ್ಕೆ ಸಾಕ್ಷಿ ಹಳ್ಳಿಕಾರ್ ಗೆ ಸಿಗುತ್ತಿರುವ ಭರ್ಜರಿ ಸ್ವಾಗತ. ಬಿಗ್​ಬಾಸ್ ಮನೆಯಿಂದ ಹೊರ ಬಂದ ಮೇಲೆ ಹೂವಿನ ಮಳೆಯಲ್ಲಿ ಮಿಂದೇಳುತ್ತಿದ್ದಾರೆ. ಬೇರೆ ಬೇರೆ ಊರುಗಳಿಗೆ ಹೋಗಿ ಜನರನ್ನು ಭೇಟಿ ಮಾಡುತ್ತಿರುವ ವರ್ತೂರು ಸಂತುಗೆ ಸಿಗುತ್ತಿರುವ ವೆಲ್‌ಕಮ್ ನೋಡಿದರೆ, ಯಾವ ಸ್ಟಾರ್‌ಗೂ ಕಮ್ಮಿಯಿಲ್ಲ. ಅದರಲ್ಲೂ ಕೋಲಾರ ಸಮೀಪದ ಮಾಲೂರಿಗೆ ತೆರಳಿದ್ದ ವೇಳೆ ಅವರಿಗೆ ಸಿಕ್ಕ ಸ್ವಾಗತ ನೋಡಿ ಸೆಲೆಬ್ರಿಟಿಗಳೇ ಶೇಕ್ ಆಗಿದ್ದಾರೆ. ಮಾಲೂರಿನಲ್ಲಿ ಜನಸಾಗರವೇ ನೆರೆದು ಹೂವಿನ ರಾಶಿಯಲ್ಲೇ ಹಳ್ಳಿಕಾರ್ ಒಡೆಯನಿಗೆ ಜನ ಸ್ವಾಗತ ಕೋರಿದ್ದರು. ಕ್ರೇನ್​ಗಳ ಮೂಲಕ ದೊಡ್ಡ ದೊಡ್ಡ ಹೂವಿನ ಮಾಲೆ ಹಾಕಿ ಭರ್ಜರಿಯಾಗಿಯೇ ಮೆರವಣಿಗೆ ಕೂಡಾ ಮಾಡಿದ್ದಾರೆ. ಇದು ವರ್ತೂರು ಸಂತು ಬಗ್ಗೆ ಇರೋ ಅಭಿಮಾನವನ್ನು ಜನ ತೋರಿಸುವ ರೀತಿ. ದಿನದಿಂದ ದಿನಕ್ಕೆ ವರ್ತೂರು ಸಂತೋಷ್ ಫೇಮಸ್ ಆಗ್ತಿದ್ದಾರೆ. ಹೊಸಕೋಟೆಯಲ್ಲಿ ಜೈ ಹಳ್ಳಿಕಾರ್ ಎಂಬ ಕೂಗು ಜೊತೆಗೆ ವರ್ತೂರು ಸಂತೋಷ್ ಅವರಿಗೆ ಸಿಕ್ಕ ಅಭಿಮಾನದ ಮೆರವಣಿಗೆ ಜನರ ಪ್ರೀತಿ ತೋರಿಸುತ್ತಿತ್ತು. ಸದ್ಯ ಬಿಗ್‌ಬಾಸ್ ವಿನ್ನರ್‌ಗೂ ಸಿಗದ ವೆಲ್‌ಕಮ್ ವರ್ತೂರು ಸಂತೋಷ್‌ಗೆ ಸಿಗುತ್ತಿದೆ. ಸಂತು ಜೊತೆ ಸೆಲ್ಫಿ ತೆಗೆಯಲು ಅಭಿಮಾನಿಗಳ ನೂಕು ನುಗ್ಗಲು ಇವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಂತೂ ವರ್ತೂರು ಸಂತೋಷ್ ಫುಲ್ ಟ್ರೆಂಡಿಂಗ್‌ನಲ್ಲಿದ್ದಾರೆ. ಮುಗ್ಧತೆ, ಬದ್ಧತೆ, ಮಾತಿನಲ್ಲಿ ಪ್ರೌಡತೆ.. ಇದುವೇ ವರ್ತೂರು ಸಂತೋಷ್ ಅವರನ್ನು ಮೆಚ್ಚಲು ಕಾರಣ ಅಂತಿದ್ದಾರೆ ಜನ.

Sulekha