ದೊಡ್ಡಪ್ಪ ತೋರಿಸಿದ ಹುಡುಗಿಗೆ ತಾಳಿ ಕಟ್ಟಿದೆ, ಗೇಟಿಂದ ಆಚೆ ಹೋಗು ಅಂತಾ ಹೇಳಿದರು – ಮದುವೆ ವಿವಾದಕ್ಕೆ ತೆರೆ ಎಳೆದ ವರ್ತೂರು ಸಂತೋಷ್

ದೊಡ್ಡಪ್ಪ ತೋರಿಸಿದ ಹುಡುಗಿಗೆ ತಾಳಿ ಕಟ್ಟಿದೆ, ಗೇಟಿಂದ ಆಚೆ ಹೋಗು ಅಂತಾ ಹೇಳಿದರು – ಮದುವೆ ವಿವಾದಕ್ಕೆ ತೆರೆ ಎಳೆದ ವರ್ತೂರು ಸಂತೋಷ್

ಹುಲಿ ಉಗುರು ಪ್ರಕರಣ ಮುಗಿದ ಮೇಲೆ ವರ್ತೂರು ಸಂತೋಷ್ ಮೇಲೆ ಬಂದಿರುವ ಮತ್ತೊಂದು ಆರೋಪ ಅಂದರೆ ಅದು ಮದುವೆ ವಿಚಾರ. ವರ್ತೂರು ಸಂತೋಷ್ ಅವರ ಮದುವೆ ವಿಚಾರ ಸಾಕಷ್ಟು ಚರ್ಚೆ ಆಗಿದೆ. ಈ ಬಗ್ಗೆ ವರ್ತೂರು ಸಂತೋಷ್ ಅವರ ಮಾವನೇ ಸಾಕಷ್ಟು ಆರೋಪ ಮಾಡಿದ್ದಾರೆ. ಆದರೆ, ಈಗ ಬಿಗ್‌ಬಾಸ್ ಮನೆಯಲ್ಲಿ ತನ್ನ ಮದುವೆ ವಿಚಾರ ಮಾತನಾಡಿದ ವರ್ತೂರು ಸಂತೋಷ್ ಅವರ ತನ್ನ ಮೇಲೆ ಬಂದಿರುವ ಆರೋಪಗಳಿಗೆ ಸರಿಯಾದ ವೇದಿಕೆಯಲ್ಲಿ ಸೂಕ್ತ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಡ್ರೋನ್ ಪ್ರತಾಪ್ ಮೇಲೆ ಮುಗಿಬಿದ್ದ ಸ್ಪರ್ಧಿಗಳು – ಬಿಗ್‌ಬಾಸ್ ಮನೆಯಲ್ಲಿ ಮತ್ತೆ ವರ್ತೂರು ಸಂತೋಷ್ ಹವಾ?

ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಅವರನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ವರ್ತೂರು ಬಿಗ್‌ಬಾಸ್ ಮನೆಯಲ್ಲಿ ಇರುವಾಗಲೇ ಹುಲಿ ಉಗುರು ಹೊಂದಿರುವ ಆರೋಪ ಬಂತು. ಅವರನ್ನು ಬಂಧಿಸಲಾಯಿತು. ಆ ಬಳಿಕ ಅವರು ಬಿಗ್‌ಬಾಸ್ ಮನೆಗೆ ಮರಳಿದರು. ಇದಾದ ನಂತರ ಶುರುವಾಗಿದ್ದೇ ವರ್ತೂರು ಸಂತೋಷ್ ಅವರ ಮದುವೆ ವಿಚಾರ. ವರ್ತೂರು ಸಂತೋಷ್‌ಗೆ ಮದುವೆಯಾಗಿದೆ. ಎಲ್ಲೂ ಆ ವಿಚಾರವನ್ನು ವರ್ತೂರು ಬಾಯಿಬಿಟ್ಟಿಲ್ಲ. ವರ್ತೂರು ನಮಗೆ ಮೋಸ ಮಾಡಿದ್ದಾನೆ ಹೀಗೆ ನಾನಾ ರೀತಿಯಲ್ಲಿ ವರ್ತೂರು ಸಂತೋಷ್ ಅವರ ಮಾವ ಸಾಕಷ್ಟು ಆರೋಪ ಮಾಡಿದ್ದರು. ಇದೀಗ ಕೊನೆಗೂ ವರ್ತೂರು ಸಂತೋಷ್ ತನ್ನ ಮದುವೆ ವಿಚಾರವನ್ನು ಬಾಯಿಬಿಟ್ಟಿದ್ದಾರೆ.

‘ದೊಡ್ಡಪ್ಪ ತೋರಿಸಿದ ಹುಡುಗಿಗೆ ತಾಳಿ ಕಟ್ಟುತ್ತೇನೆ ಎಂದೆ. ಅದರಂತೆ ನಡೆದುಕೊಂಡೆ. ಮದುವೆ ಆದ ಹುಡುಗಿ ನನ್ನ ತಾಯಿಯನ್ನು ಕಡೆಗಣಿಸಲು ಆರಂಭಿಸಿದರು. ಹೀಗಾಗಿ, ನಾನು ಪತ್ನಿಯಿಂದ ದೂರ ಆದೆ’ ಎಂದಿದ್ದಾರೆ ಸಂತೋಷ್. ನನ್ನ ದೊಡ್ಡಪ್ಪನ ಮಾತು ಕೇಳಿ ತಾಳಿ ಕಟ್ಟಿದ್ದೆ. ನನ್ನ ತಾಯಿಯನ್ನ ಇಗ್ನೋರ್ ಮಾಡೋಕೆ ಆಕೆ ಶುರು ಮಾಡಿದ್ರು. ನನ್ನ ಜನ ಎಲ್ಲಾ ಬಿಟ್ಟು ಅವರ ಹಿಂದೆ ಹೋಗೋಕೆ ಆಗಲ್ಲ ನನಗೆ.  ಇಲ್ಲಿಂದ ಆಚೆ ಹೋದ್ಮೇಲೆ ಮನೆ ಹತ್ರ ಹೋಗ್ತೀನಿ. ನನ್ನ ಮಾತಿಗೆ ಒಪ್ಪಿ ಬಂದ್ರೆ ಅವರು ಈಗಲೂ ರಾಣಿನೇ. ಗೇಟಿಂದ ಆಚೆ ಹೋಗು ಅಂದಿದ್ರು. ಆವತ್ತೇ ಮಾತು ಕೊಟ್ಟು ಬಂದೆ. ಆ ಮಾತಿಗೆ ಇವತ್ತಿಗೂ ನಿಂತಿದೀನಿ. ಹೀಗೆ ಮದುವೆಯ ಸಂಪೂರ್ಣ ವಿಚಾರ   ಕೊನೆಗೂ ವರ್ತೂರ್ ಸಂತೋಷ್ ಬಾಯ್ಬಿಟ್ಟಿದ್ದಾರೆ. ಮದುವೆ ಆಗಿದ್ದು ನಿಜ. ನನ್ನ ಕಂಡಿಷನ್ ಗೆ ಒಪ್ಪಿ ಅವಳು ಮತ್ತೆ ಬಂದರೆ ರಾಣಿ ಹಾಗೆ ನೋಡ್ಕೋತೀನಿ ಅಂದಿದ್ದಾರೆ. ಮದುವೆ ಆದ ನಂತರ ಕುಟುಂಬದ ಬಗ್ಗೆ ಆಕೆಗೆ ತಾತ್ಸಾರ ಇತ್ತು. ಕುಟುಂಬ ಮತ್ತು ನಾನು ಸಂಪಾದಿಸಿದ ಜನರನ್ನು ತೊರೆದು ಬರುವಂತೆ ಹೇಳಿದರು. ಅದಕ್ಕಾಗಿ ನಾನು ಹೋಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಒಂದು ಕಡೆ ಬಿಗ್ ಬಾಸ್ ಕಾರಣದಿಂದ ವರ್ತೂರು ಸುದ್ದಿ ಆಗುತ್ತಿದ್ದರೆ, ಮತ್ತೊಂದು ಕಡೆ ಅವರು ಮದುವೆ ಆಗಿದ್ದಾರೆ ಎನ್ನಲಾದ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಜಯಶ್ರೀ ಅನ್ನುವವರ ಜೊತೆ ಸಂತೋಷ್ ಈ ಹಿಂದೆ ಮದುವೆ ಆಗಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ, ಈ ಕುರಿತು ಬಿಗ್ ಬಾಸ್ ಮನೆಯಲ್ಲಿ ಯಾವತ್ತೂ ಸಂತೋಷ್ ಹೇಳಿಕೊಂಡಿರಲಿಲ್ಲ. ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೂ ಅವರು ತಮ್ಮ ತಾಯಿಯನ್ನು ಮಾತ್ರ ಕರೆದುಕೊಂಡು ಬಂದಿದ್ದರು. ಹೆಂಡತಿ ಬಂದಿರಲಿಲ್ಲ. ಆದರೆ, ವರ್ತೂರು ಸಂತೋಷ್ ಅವರದ್ದೇ ಎನ್ನಲಾದ ಮದುವೆ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಈಗ ಎಲ್ಲದಕ್ಕೂ ಸಂತೋಷ್ ಫುಲ್ ಸ್ಟಾಪ್ ಇಟ್ಟಿದ್ದಾರೆ.

Sulekha