ಜೈಲಿನಿಂದ ಎಸ್ಕೇಪ್‌ ಆದ ವರ್ತೂರು ಸಂತೋಷ್‌! – ಹೊರಬರಲು ಕುಮ್ಮಕ್ಕು ಕೊಟ್ಟಿದ್ಯಾರು?

ಜೈಲಿನಿಂದ ಎಸ್ಕೇಪ್‌ ಆದ ವರ್ತೂರು ಸಂತೋಷ್‌! – ಹೊರಬರಲು ಕುಮ್ಮಕ್ಕು ಕೊಟ್ಟಿದ್ಯಾರು?

ಬಿಗ್‌ ಬಾಸ್‌ ಮನೆಯಲ್ಲಿ ಯಾವಾಗ ಏನು ಆಗುತ್ತೆ ಅಂತಾ ಹೇಳೊದಿಕ್ಕೆ ಆಗಲ್ಲ. ಯಾರ ಮೇಲೆ ಕೇಸ್‌ ಆಗುತ್ತೆ. ಯಾರು ಜೈಲಿಗೆ ಹೋಗುತ್ತಾರೆ ಅಂತಾ ಊಹಿಸೋದಿಕ್ಕೂ ಸಾಧ್ಯ ಆಗಲ್ಲ. ಕೆಲ ದಿನಗಳ ಹಿಂದೆ ಬಿಗ್‌ಬಾಸ್‌ ಸ್ಪರ್ಧಿ ತನಿಷಾ ಅವರು ನೀಡಿರುವ ಹೇಳಿಕೆಯಿಂದಾಗಿ ಅವರ ಮೇಲೆ ಎಫ್‌ಐಆರ್‌ ಆಗಿತ್ತು. ಇದಕ್ಕೂ ಮುನ್ನ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದರು. ಕೆಲ ದಿನ ಜೈಲು ವಾಸ ಅನುಭವಿಸಿದ ವರ್ತೂರು ಸಂತೋಷ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಬಿಗ್​ಬಾಸ್ ಮನೆ ಪ್ರವೇಶಿಸಿದ್ದರು. ವರ್ತೂರು ಸಂತೋಷ್‌ ಈಗ ಮತ್ತೊಮ್ಮೆ ಜೈಲು ಸೇರಿದ್ದಾರೆ. ಅಷ್ಟು ಮಾತ್ರವಲ್ಲದೇ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿನಯ್ ಚಮಚ ಈಗ ನಮ್ರತಾ ಅಲ್ಲ..ಸಂಗೀತಾ..! – ಗುಂಪುಗಾರಿಕೆ ವಿರುದ್ಧ ಡ್ರೋನ್ ಹಾರಾಟ..!

ಹೌದು, ಪ್ರತಿವಾರ ಬಿಗ್‌ ಬಾಸ್‌ ಮನೆಯಲ್ಲಿ ಕಳೆಪೆ ಯಾರು, ಉತ್ತಮ ಯಾರು ಅನ್ನೋದನ್ನು ನಿರ್ಧರಿಸಲಾಗುತ್ತದೆ. ಯಾವ ಸ್ಪರ್ಧಿ ಕಳಪೆ ಪ್ರದರ್ಶನ ನೀಡಿರುತ್ತಾನೆಯೋ ಅಂಥಹವನ್ನು ಮನೆಯ ಸ್ಪರ್ಧಿಗಳು ಒಮ್ಮತದಿಂದ ಕಳಪೆ ಎಂದು ಹೆಸರಿಸಿ ಮನೆಯ ಒಳಗೆ ಇರುವ ಜೈಲಿನಲ್ಲಿ ಇರಿಸಲಾಗುತ್ತದೆ. ಈ ವಾರದ ಟಾಸ್ಕ್‌ಗಳಲ್ಲಿ ವರ್ತೂರು ಸಂತೋಷ್‌ ಕಳಪೆ ಪಟ್ಟ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ವರ್ತೂರು ಸಂತೋಷ್‌ ಬಿಗ್‌ಬಾಸ್‌ ಮನೆಯಲ್ಲಿರುವ ಜೈಲಿಗೆ ಕಳುಹಿಸಲಾಗಿದೆ.

ಬಿಗ್​ಬಾಸ್​ನ ಇತರೆ ಸ್ಪರ್ಧಿಗಳು ವರ್ತೂರು ಸಂತೋಷ್ ಅವರನ್ನು ಕಳಪೆ ಎಂದು ತೀರ್ಮಾನಿಸಿ, ಅವರಿಗೆ ಜೈಲು ಉಡುಗೆ ನೀಡಿದ್ದಾರೆ. ಈ ಸಮಯದಲ್ಲಿ ಮಾತನಾಡಿರುವ ವರ್ತೂರು ಸಂತೋಷ್, ಕಳಪೆ ಮಾತ್ರವಲ್ಲ, ವಿಷಕಾರಿ ಎಂದು ಬೇಕಾದರೂ ನನ್ನನ್ನು ಕರೆಯಿರಿ ನನ್ನ ವ್ಯಕ್ತಿತ್ವ ಎಂಥಹದ್ದು ಎಂಬುದು ನನಗೆ ಗೊತ್ತು ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಮುಂದುವರೆದು ಇಲ್ಲೆಲ್ಲ ನಡೆಯುವುದು ನರಿ ಸಂಚು ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಸಹ.

ಇದೆಲ್ಲ ಆಗಿ ವರ್ತೂರು ಸಂತೋಷ್ ಅವರನ್ನು ಜೈಲಿಗೆ ಹಾಕಲಾಗಿದೆ. ಜೈಲಿನ ಹೊರಗೆ ಕುಳಿತಿದ್ದ ತುಕಾಲಿ ಸಂತು ಬಳಿ ಮಾತನಾಡುತ್ತಾ, ಈ ವರೆಗೆ ಯಾರೂ ಜೈಲಿನಿಂದ ಹೊರಗೆ ಬಂದಿಲ್ಲ ಅಲ್ಲವಾ? ಎಂದು ವರ್ತೂರು ಪ್ರಶ್ನೆ ಮಾಡಿದ್ದಾರೆ. ಆಗ ತುಕಾಲಿ, ಈವರೆಗೆ ಯಾರೂ ಬಂದಿಲ್ಲ, ಬಂದು ಬಿಡಣ್ಣ ನೋಡೋಣ ಎಂದು ತುಕಾಲಿ, ವರ್ತೂರು ಸಂತುಗೆ ಗುರಿದುಂಬಿಸಿದ್ದಾರೆ. ಕೂಡಲೇ ವರ್ತೂರು ಸಂತೋಷ್, ಜೈಲಿನ ಸರಳುಗಳ ಮಧ್ಯದಿಂದ ತೂರಿಕೊಂಡು ಹೊರಗೆ ಬಂದಿದ್ದಾರೆ.

ಸದ್ಯಕ್ಕೆ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ವರ್ತೂರು ಸಂತೋಷ್ ಜೈಲಿನಿಂದ ತಪ್ಪಿಸಿಕೊಂಡಿರುವುದನ್ನು ಮಾತ್ರವೇ ತೋರಿಸಲಾಗಿದೆ. ಜೈಲಿನಿಂದ ತಪ್ಪಿಸಿಕೊಂಡಿರುವ ವರ್ತೂರು ಮುಂದೇನು ಮಾಡಿದರು. ವರ್ತೂರು ಅವರ ಈ ಕೃತ್ಯಕ್ಕೆ ಮನೆಯ ಸ್ಪರ್ಧಿಗಳು ಹೇಗೆ ಸ್ಪಂದಿಸಿದರು ಇತ್ಯಾದಿಗಳು ಶುಕ್ರವಾರ ರಾತ್ರಿ ಎಪಿಸೋಡ್​ನಲ್ಲಿ ಗೊತ್ತಾಗಲಿದೆ.

Shwetha M