ಫಿನಾಲೆ ಟಿಕೆಟ್ ವರ್ತೂರು ಸಂತೋಷ್ ಪಡೆಯುವುದು ಗ್ಯಾರಂಟಿ – ಬಿಗ್‌ಬಾಸ್ ಮನೆಯಲ್ಲಿ ಹಳ್ಳಿಕಾರ್ ಹವಾ

ಫಿನಾಲೆ ಟಿಕೆಟ್ ವರ್ತೂರು ಸಂತೋಷ್ ಪಡೆಯುವುದು ಗ್ಯಾರಂಟಿ –  ಬಿಗ್‌ಬಾಸ್ ಮನೆಯಲ್ಲಿ ಹಳ್ಳಿಕಾರ್ ಹವಾ

ಬಿಗ್‌ಬಾಸ್ ಮನೆಯಲ್ಲಿ ವಿಭಿನ್ನ ಆಟದಿಂದ ಜನಮನ ಗೆದ್ದಿರುವ ವರ್ತೂರು ಸಂತೋಷ್ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ ಒನ್ ಆಗಿ ಮುನ್ನುಗ್ಗುತ್ತಿದ್ದಾರೆ. ಕಲೆಯ ನಂಟು ಇಲ್ಲದ, ಹಳ್ಳಿ ಹೈದ, ಶ್ರೀಮಂತ ರೈತ, ಹಳ್ಳಿಕಾರ್ ಸಂತೋಷ್ ಎಂದೇ ಫೇಮಸ್ ಆಗಿರುವ ವರ್ತೂರು ಸಂತೋಷ್ ಆಟಕ್ಕೆ ವೀಕ್ಷಕರು ಕೂಡಾ ಜೈ ಎನ್ನುತ್ತಿದ್ದಾರೆ.

ಇದನ್ನೂ ಓದಿ: ತನಿಷಾ ಮತ್ತು ವರ್ತೂರು ಸಂತೋಷ್ ಮಧ್ಯೆ ಬೆಂಕಿ ಇಟ್ಟ ಬಿಗ್‌ಬಾಸ್..! – ಆಪ್ತರ ಮಧ್ಯೆ ಬಿರುಕು

ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗೋ ಸ್ಪರ್ಧಿಯಾರು ಅಂತಾ ಮನೆಯವರ ಬಳಿ ಕೇಳಿದರೆ ಎಲ್ಲರ ಬಾಯಲ್ಲೂ ವರ್ತೂರು ಸಂತೋಷ್ ಎಂಬ ಹೆಸರು ಮೊದಲು ಬಂದಿರುತ್ತಿತ್ತು. ಆದರೆ, ಈಗ ಫಿನಾಲೆ ಹಂತಕ್ಕೆ ಸಮೀಪ ಇರುವಾಗ ವರ್ತೂರು ಸಂತೋಷ್ ಆಟದ ಶೈಲಿ ನೋಡಿ ಮನೆ ಮಂದಿಯೇ ಶಾಕ್‌ಗೊಳಗಾಗಿದ್ದಾರೆ. ಜನರ ಬೆಂಬಲದಿಂದ ಫಿನಾಲೆಯ ಹೊಸ್ತಿಲವರೆಗೆ ಬಂದು ನಿಂತಿರುವ ವರ್ತೂರು ಸಂತೋಷ್ ಆಟದ ವೈಖರಿ ಬದಲಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ವರ್ತೂರು ಸಂತೋಷ್, ಈಗ ಫಿನಾಲೆಗೆ ಸಮೀಪ ಬಂದಾಗ ಯಾರೂ ಊಹಿಸದ ರೀತಿಯಲ್ಲಿ ಮುಂದೆ ಸಾಗುತ್ತಿದ್ದಾರೆ.

ಈ ವಾರ ಟಿಕೆಟ್ ಟು ಫಿನಾಲೆ ಹೆಸರಿನಲ್ಲಿ ಮನೆಯ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ. ಸ್ಪರ್ಧಿಗಳು ಆಡುವ ಟಾಸ್ಕ್ ಆಧರಿಸಿ ಅವರಿಗೆ ಪಾಯಿಂಟ್ಸ್‌ಗಳನ್ನು ನೀಡಲಾಗುತ್ತಿದೆ. ಯಾರು ಹೆಚ್ಚು ಪಾಯಿಂಟ್ ಪಡೆಯುತ್ತಾರೆಯೋ ಅವರು ಫಿನಾಲೆಗೆ ನೇರ ಪ್ರವೇಶ ಪಡೆಯಲಿದ್ದಾರೆ. ಟಾಸ್ಕ್ ಆರಂಭವಾದಾಗಿನಿಂದ ವರ್ತೂರು ಸಂತೋಷ್ ತಮ್ಮ ಪ್ರದರ್ಶನದಿಂದ ಎಲ್ಲರಿಗೂ ಶಾಕ್ ನೀಡಿದ್ದಾರೆ. ಟಾಸ್ಕ್‌ಗಳಲ್ಲಿ ಬಹಳ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ವರ್ತೂರು ಸಂತೋಷ್, ಮನೆಯಲ್ಲಿ ತಾವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಗೆ ಸಮಜಾಯಿಷಿಯನ್ನು ಸಹ ಪ್ರಬಲವಾಗಿಯೇ ನೀಡುತ್ತಿದ್ದಾರೆ. ಎರಡೆರಡು ಟಾಸ್ಕ್‌ಗಳನ್ನು ಗೆದ್ದಿರುವ ವರ್ತೂರು ಸಂತೋಷ್ ಇದೇ ವೇಗದಲ್ಲಿ ಮುಂದೆ ಸಾಗಿದರೆ ಫಿನಾಲೆಗೆ ಪಕ್ಕಾ ತಲುಪುತ್ತಾರೆ ಎನ್ನಲಾಗುತ್ತಿದೆ. ಟಾಸ್ಕ್ ಆಡಲು ಅವಕಾಶಗಳು ಸಿಗದೆ ಕೊರಗುತ್ತಿದ್ದ ವರ್ತೂರು ಸಂತೋಷ್, ಸಿಕ್ಕ ಕಡಿಮೆ ಅವಕಾಶದಲ್ಲಿಯೇ ಗಮನ ಸೆಳೆದು ಈಗ ಫಿನಾಲೆಗೆ ತಲುಪುವ ಹಂತಕ್ಕೆ ಬಂದು ನಿಂತಿದ್ದಾರೆ.

Sulekha