ವರ್ತೂರು ಸಂತೋಷ್ ಅರೆಸ್ಟ್.. ಸೆಲೆಬ್ರಿಟಿಗಳಿಗೆ ಬರೀ ನೋಟಿಸ್ – ಹುಲಿ ಉಗುರಿನ ಕೇಸ್ ನಲ್ಲಿ ರೈತನಿಗೊಂದು ನ್ಯಾಯ, ಸ್ಟಾರ್ಸ್ ಗೊಂದು ನ್ಯಾಯ!
ಬಿಗ್ ಬಾಸ್ ಮನೆಯಲ್ಲಿ ಹುಲಿ ಉರುಗು ಧರಿಸಿದ್ದ ಆರೋಪದಲ್ಲಿ ವರ್ತೂರು ಸಂತೋಷ್ ಈಗಾಗಲೇ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಜಾಮೀನು ಪಡೆಯಲು ಅರ್ಜಿ ವಿಚಾರಣೆ ಕೂಡ ನಡೆಯುತ್ತಿದೆ. ಆದರೆ ಹಲವು ಸೆಲೆಬ್ರಿಟಿಗಳ ಕೊರಳಲ್ಲಿ ಹುಲಿ ಉಗುರಿನ ಲಾಕೆಟ್ ಪತ್ತೆ ಆಗಿದ್ರೂ ಅವರ ಬಂಧನವಾಗಿಲ್ಲ. ನಾಮಕವಸ್ತೆ ಎಂಬಂತೆ ಉಗುರುಗಳನ್ನ ವಶಕ್ಕೆ ಪಡೆದು ಕೇವಲ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ : ಮಾತಿನ ಬಿಸಿಯ ನಡುವೆ ತಂಗಾಳಿಯಂತೆ ಬಂದ ನಟಿ ತಾರಾ – ಹಬ್ಬದ ದಿನ ಬಿಗ್‌ಬಾಸ್ ಮನೆಯಲ್ಲಿ ಸಂಭ್ರಮ, ಸಿರಿಗೆ ಕೂಡಿ ಬರುತ್ತಾ ಕಂಕಣ?
ಅರಣಾಧಿಕಾರಿಗಳ ಇದೇ ನಡೆ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಂತೋಷ್ಗೆ ಒಂದು ನ್ಯಾಯ, ಸೆಲೆಬ್ರಿಟಿಗಳಿಗೆ ಇನ್ನೊಂದು ನ್ಯಾಯನಾ? ಎಂದು ಪ್ರಶ್ನಿಸುತ್ತಿದ್ದಾರೆ. ಯಾಕಂದ್ರೆ ವರ್ತೂರು ಸಂತೋಷ್ರನ್ನ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಸುವಾಗಲೇ ಹೊರ ಕರೆಸಿ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಉಗುರಿನ ಲಾಕೆಟ್ (Tiger claw) ಧರಿಸಿದ್ದ ಸೆಲೆಬ್ರೆಟಿಗಳ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ರೈತನಿಗೊಂದು ನ್ಯಾಯ, ಸೆಲೆಬ್ರಿಟಿಗಳಿಗೊಂದು ನ್ಯಾಯನಾ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ ಕೊರಳಿನಲ್ಲಿ ಹುಲಿ ಉಗುರಿನ ಲಾಕೆಟ್ ಇದ್ದ ಫೋಟೋ ವೈರಲ್ ಆಗಿತ್ತು. ನಟ ಜಗ್ಗೇಶ್ ಅಂತೂ, ನಾನು 20 ನೇ ವರ್ಷಕ್ಕೆ ಕಾಲಿಟ್ಟ ವೇಳೆ ನನ್ನ ತಾಯಿ ಕೊಟ್ಟ ಹುಲಿ ಉಗುರು. ನನ್ನ ಮಗ ಹುಲಿ ಥರ ಇರಲಿ ಎಂದು ಒರಿಜನಲ್ ಹುಲಿಉಗುರನ್ನೇ ಲಾಕೆಟ್ ಮಾಡಿ ಕೊಟ್ಟಿದ್ದರು ಅಂತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಇದೀಗ ಇದು ಅವರಿಗೆ ಸಂಕಷ್ಟ ತಂದಿಟ್ಟಿದೆ. ಇವರೆಲ್ಲ ಮನೆ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಕೆಲವರ ಲಾಕೆಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಆದ್ರೆ, ವರ್ತೂರ್ ಸಂತೋಷ್ನಂತೆ ಇವರುಗಳ ಬಂಧನ ಯಾವಾಗ ಎನ್ನುವ ಕೂಗು ಬಲವಾಗಿ ಕೇಳಿಬರುತ್ತಿದೆ.
ಅರಣ್ಯಾಧಿಕಾರಿಗಳಿಗೆ ವರ್ತೂರ್ ಸಂತೋಷ್ ಅವರನ್ನ ಬಂಧಿಸಿದ ಬೆನ್ನಲ್ಲೇ ಇನ್ನುಳಿದವರ ಬಂಧನ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. ಒತ್ತಡಗಳು ಹೆಚ್ಚಾಗುತ್ತಿದ್ದಂತೆಯೇ ಅರಣ್ಯಾಧಿಕಾರಿಗಳು, ಹುಲಿ ಉಗುರು ಲಾಕೆಟ್ ಧರಿಸಿದ್ದ ಸೆಲೆಬ್ರೆಟಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಆದ್ರೆ, ಕಾಟಾಚಾರಕ್ಕೆ ದಾಳಿ ಮಾಡಿದ್ದಾರೆ ಎನ್ನುವ ಚರ್ಚೆಗಳು ಶುರುವಾಗಿವೆ. ಅಲ್ಲದೇ ನಾಮಕಾವಸ್ತೆ ನೋಟಿಸ್ ನೀಡಲಾಗಿದೆ. ಏಕೆಂದರೆ ಅರಣ್ಯಾಧಿಕಾರಿ ನೀಡಿದ ನೋಟಿಸ್ನಲ್ಲಿ ಯಾರಿಗೂ ಕಾಲಮೀತಿ ಹಾಕಿಲ್ಲ. ಇಷ್ಟೇ ಸಮಯದಲ್ಲಿ ಬಂದು ಉತ್ತರಿಸಿ ಎಂದು ನೊಟೀಸ್ ನಲ್ಲಿ ಉಲ್ಲೇಖ ಮಾಡಿಲ್ಲ. ಹಾಗಿದ್ರೆ ಸೆಲೆಬ್ರೆಟಿಗಳು ಯಾವಾಗ ಬೇಕಾದ್ರು ವಿಚಾರಣೆಗೆ ಬರಬಹುದಾ? ಸಂತೋಷ್ ರನ್ನ ಏಕಾಏಕಿ ಬಂಧಿಸಿದ ಅಧಿಕಾರಿಗಳು, ಸೆಲೆಬ್ರೆಟಿಗಳ ವಿಚಾರದಲ್ಲಿ ಯಾಕೇ ಇಷ್ಟು ಹಿಂದಡಿ ಇಡುತ್ತಿದ್ದಾರೆ ಎನ್ನುವ ಚರ್ಚೆಗಳು ಸಾರ್ವಜನಿಕ ವಯಲದಲ್ಲಿ ಶುರುವಾಗಿವೆ. ಸೆಲೆಬ್ರಿಟಿಗಳಿಗೆ ವಿಚಾರಣೆಗೆ ಬರುವಂತೆ ಈ ದಿನದಂದು ಬನ್ನಿ ಎಂದು ನೋಟಿಸ್ನಲ್ಲಿ ಉಲ್ಲೇಖಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಪ್ರಮುಖ ವ್ಯಕ್ತಿಗಳ ರಕ್ಷಣೆಗೆ ನಿಂತ್ರಾ? ಎನ್ನುವ ಚರ್ಚೆಗಳು ಶುರುವಾಗಿವೆ.