2ನೇ ಮದುವೆಗೆ ವರ್ತೂರ್ ರೆಡಿ! – ತನಿಷಾ ಅಲ್ಲ.. ಮತ್ಯಾರು?
ಸಂತು ಭಾವಿ ಪತ್ನಿ ಗುಟ್ಟು ರಟ್ಟು!
ವರ್ತೂರ್ ಸಂತೋಷ್.. ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ.. ಹಳ್ಳಿಕಾರ್ ಒಡೆಯ ಎಂದು ಫೇಮಸ್ ಆಗಿದ್ದ ವರ್ತೂರು ಸಂತೋಷ್ ದೊಡ್ಮನೆಗೆ ಬರ್ತಿದ್ದಂತೆ ವಿವಾದಗಳಿಂದಲೇ ಸದ್ದು ಮಾಡಿರೋದು ನಿಮ್ಗೆಲ್ಲಾ ಗೊತ್ತೇ ಇದೆ.. ಜೈಲಿಗೆ ಹೋಗಿ ಬಂದ್ಮೇಲೆ ಸಂತೋಷ್ ಮೊದಲ ಮದುವೆ ವಿಚಾರ ಭಾರಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು.. ಅದಾದ್ಮೇಲೆ ಸಹ ಸ್ಪರ್ಧಿ ತನಿಷಾ ಕುಪ್ಪಂಡ ಜೊತೆ ಕೂಡ ಇವ್ರ ಹೆಸ್ರು ತಳುಕು ಹಾಕಿಕೊಂಡಿತ್ತು.. ತನಿಷಾ ವರ್ತೂರು ಮದುವೆ ಮಾಡಿಕೊಳ್ತಾರಾ ಅನ್ನೋದು ವೀಕ್ಷಕರನ್ನ ಕಾಡ್ತಿರೋದು ಸುಳ್ಳಲ್ಲ.. ಇದೀಗ ವರ್ತೂರ್ ಸಂತೋಷ್ ಮದುವೆ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಇದೀಗ ವರ್ತೂರು ಸಂತೋಷ್ 2ನೇ ಮದುವೆಗೆ ರೆಡಿಯಾಗಿದ್ದಾರೆ. ಶೀಘ್ರವೇ ಹಸೆಮಣೆ ಏರೋದಾಗಿ ವರ್ತೂರು ಸಂತೋಷ್ ಹೇಳಿದ್ದಾರೆ.
ಇದನ್ನೂ ಓದಿ: ಸಂಕ್ರಾಂತಿ ನಂತರ ಕೆಎಸ್ಆರ್ಟಿಸಿ, ಬಿಎಂಟಿಸಿ ಟಿಕೆಟ್ ದರ ಹೆಚ್ಚಳ?
ಬಿಗ್ಬಾಸ್ ಕನ್ನಡ ಸೀಸನ್ 10ರ ನಾಲ್ಕನೇ ರನ್ನರ್ ಅಪ್ ವರ್ತೂರು ಸಂತೋಷ್ ಹಳ್ಳಿಕಾರ್ ಒಡೆಯಾ ಎಂದೇ ಫೇಮಸ್ ಆದವರು. ಆದ್ರೆ ದೊಡ್ಮನೆಗೆ ಬರ್ತಿದ್ದಂತೆ ವರ್ತೂರು ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು. ಅಲ್ಲಿಯವರೆಗೆ, ಹಳ್ಳಿಕಾರ್ ಹಸು ತಳಿಯನ್ನು ಪ್ರಚಾರ ಮಾಡಿ ಹೀರೋ ಆಗಿದ್ದ ವರ್ತೂರು ಅವರ ಸುತ್ತ ಒಂದೊಂದೇ ವಿವಾದ ಹುಟ್ಟಿಕೊಂಡಿತ್ತು. ಬಿಗ್ಬಾಸ್ ಮನೆಯಿಂದ ಜೈಲಿಗೂ ಹೋಗಿ ರಾಜಕೀಯ ವಲಯದಲ್ಲಿಯೂ ಕೋಲಾಹಲ ಸೃಷ್ಟಿಸಿದ್ದು ಈಗ ಎಲ್ಲವೂ ಇತಿಹಾಸ. ವರ್ತೂರ್ ಸಂತೋಷ್ ವಿವಾದಕ್ಕೆ ಗುರಿಯಾಗ್ತಿದ್ದಂತೆ ಅವ್ರ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಗಾಸಿಪ್ ಹರಿದಾಡಿತ್ತು.. ಯುವತಿಯೊಬ್ಬರ ಜೊತೆ ವರ್ತೂರು ಸಂತೋಷ್ ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ವರ್ತೂರ್ ಗೆ ಮದುವೆಯಾಗಿದ್ದರೂ ಆ ವಿಷಯವನ್ನು ಮುಚ್ಚಿಟ್ಟಿದ್ದಾರೆ. ಹೆಂಡ್ತಿಗೆ ಟಾರ್ಚರ್ ಕೊಟ್ಟಿದ್ರಿಂದ ಅವರು ದೂರವಾಗಿದ್ದಾರೆ ಅನ್ನೋ ಸುದ್ದಿ ಸದ್ದು ಮಾಡಿತ್ತು. ಕೊನೆಗೂ ಈ ಬಗ್ಗೆ ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಸ್ಪಷ್ಟನೆ ಕೊಟ್ಟಿದ್ರು ವರ್ತೂರು. ಮದುವೆ ಎನ್ನುವುದು ವೈಯಕ್ತಿಕ ವಿಷಯ. ನಾನು ಎಲ್ಲಿಯೂ ನನ್ನ ಮದ್ವೆಯಾಗಿಲ್ಲ ಎಂದು ಹೇಳಿಲ್ಲ. ಈಗಲೂ ನನ್ನ ಮಾತು ಒಪ್ಪಿ ಬಂದರೆ ಪತ್ನಿಯನ್ನು ರಾಣಿಯಂತೆ ನೋಡಿಕೊಳ್ಳುತ್ತೇನೆ. ಎಲ್ಲೂ ಯಾರ ಮೇಲೂ ನಾನು ಆರೋಪ ಹೊರಿಸುತ್ತಿಲ್ಲ.. , ಕಾಲಾಯ ತಸ್ಮೈ ನಮಃ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು. ಕೊನೆಗೆ ಆ ವಿಷಯ ಅಲ್ಲಿಯೇ ತಣ್ಣಗಾಯಿತು. ಅದರ ನಡುವೆಯೇ, ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ದೊಡ್ಮನೆಯಲ್ಲಿ ಫುಲ್ ಕ್ಲೋಸ್ ಆಗಿದ್ರು.. ವರ್ತೂರ್ ಮತ್ತೆ ಬೆಂಕಿ ಮಧ್ಯೆ ಸಮ್‌ಥಿಂಗ್ ಸಮ್‌ಥಿಂಗ್ ನಡಿತಾ ಇದೆ ಎಂಬ ಗಾಸಿಪ್ ಹರಿದಾಡಿತ್ತು. ದೊಡ್ಮನೆಯಿಂದ ಹೊರಗೆ ಬಂದ್ಮೇಲೆ ಇಬ್ಬರ ಸ್ನೇಹ ಮುಂದುವರೆದಿತ್ತು. ಆಗಾಗ ಭೇಟಿಯಾಗೋದನ್ನ ಕಂಡು ಇಬ್ಬರ ನಡುವೆ ಪ್ರೀತಿ ಚಿಗುರಿದೆ.. ಇಬ್ಬರೂ ಮದುವೆ ಆಗ್ತಾರೆ ಅಂತ ಜನ ಮಾತಾಡಿಕೊಂಡಿದ್ರು. ಆದ್ರೀಗ ವರ್ತೂರು ಸಂತೋಷ್ ನಾನು ಪ್ರೀತಿ ಮಾಡ್ತೀರೋ ಹುಡುಗಿ ತನಿಷಾ ಅಲ್ಲ ಅಂತಾ ನೇರವಾಗಿ ಹೇಳಿದ್ದಾರೆ.
ಹೌದು, ಸಂದರ್ಶನವೊಂದರಲ್ಲಿ ಮಾತಾಡಿದ ವರ್ತೂರು ಸಂತೋಷ್, ನನ್ನ ಜೀವನದಲ್ಲೇ ಏನೇನೋ ನಡೆದು ಹೋಗಿದೆ. ಅದು ನಿಮಗೂ ಗೊತ್ತು .. ಹಾರಿ ಹೋದ ಬಳ್ಳಿಯಿಂದ ಹೂವು ಅರಳೋದಿಲ್ಲ. ಹಿಂದಿನ ಕಥೆ ಮುಗಿದಿದೆ.. ನನ್ನ ಜೀವನದಲ್ಲಿ ಹೊಸ ಪ್ರೀತಿಕಥೆ ಶುರುವಾಗಿದೆ ಎಂದಿದ್ದಾರೆ. ನನ್ನ ಜೀವನಕ್ಕೆ ಒಂದು ಹುಡುಗಿಯ ಪ್ರವೇಶವಾಗಿದೆ. ನಾವಿಬ್ಬರೂ ತುಂಬಾ ಚೆನ್ನಾಗಿದ್ದೇವೆ. ಫೋನ್, ಮೆಸೇಜ್ ಹಾಗೂ ಮೀಟ್ ಮಾಡ್ತಾ ಖುಷಿಯಾಗಿದ್ದೇವೆ. ಆದ್ರೆ ಆ ಹುಡುಗಿ ತನಿಷಾ ಅಲ್ಲ ನಮ್ಮ ಸಂಬಂಧಿಕರ ಹುಡುಗಿಯನ್ನ ನಾನು ಮದುವೆ ಆಗೋದಾಗಿ ವರ್ತೂರು ಸಂತೋಷ್ ಹೇಳಿಕೊಂಡಿದ್ದಾರೆ. ಆದ್ರೆ ಆ ಹುಡುಗಿ ಯಾರು? ಏನ್ ಮಾಡ್ತಿದ್ದಾರೆ ಅನ್ನೋ ಸೀಕ್ರೆಟ್ ಅನ್ನ ವರ್ತೂರ್ ಬಿಟ್ಟುಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಮನಗೆದ್ದ ಸುಂದರಿ ಯಾರು ಅನ್ನೋದನ್ನ ರಿವೀಲ್ ಮಾಡ್ತಾರಾ ಅಂತಾ ಕಾದು ನೋಡ್ಬೇಕು.