‘ಟೋಬಿ’ ಸಿನಿಮಾ ಟ್ರೈಲರ್‌ನಲ್ಲಿ ನಾನಾ ರೂಪ – ರಾಜ್.ಬಿ ಶೆಟ್ಟಿ ಲುಕ್ ನೋಡಿ ಬೆರಗಾದ ಅಭಿಮಾನಿಗಳು

‘ಟೋಬಿ’ ಸಿನಿಮಾ ಟ್ರೈಲರ್‌ನಲ್ಲಿ ನಾನಾ ರೂಪ – ರಾಜ್.ಬಿ ಶೆಟ್ಟಿ ಲುಕ್ ನೋಡಿ ಬೆರಗಾದ ಅಭಿಮಾನಿಗಳು

ರಾಜ್.ಬಿ ಶೆಟ್ಟಿ ಅಭಿನಯದ ಬಹುನಿರೀಕ್ಷೆಯ ಟೋಬಿ ಚಿತ್ರದ ಟ್ರೇಲರ್‌ ರಿಲೀಸ್ ಆಗಿದ್ದು ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುವಂತಾಗಿದೆ. ಟೋಬಿಯ ನಾನಾ ಅವತಾರವನ್ನು ಟ್ರೇಲರ್‌ನಲ್ಲಿ ಹೇಳಲಾಗಿದೆ. ಸಂಗೀತ, ಕ್ಯಾಮೆರಾ ಕೆಲಸದ ಝಲಕ್ ಸಹ ಟ್ರೈಲರ್​ನಲ್ಲಿ ಸಿಗುತ್ತದೆ. ಇದರ ಜೊತೆಗೆ ಚುರುಕಾದ ಸಂಭಾಷಣೆಯ ಕೆಲವು ತುಣುಕುಗಳನ್ನು ಟ್ರೈಲರ್​ನಲ್ಲಿ ಅಲ್ಲಲ್ಲಿ ಸೇರಿಸಿದ್ದಾರೆ.

ಇದನ್ನೂ ಓದಿ:  ‘ಟೋಬಿ’ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ರಗಡ್ ಲುಕ್..! – ನಟನ ಅವತಾರ ನೋಡಿ ಅಭಿಮಾನಿಗಳಿಗೆ ಅಚ್ಚರಿ..!

ತೀರ ಅಮಾಯಕನೊಬ್ಬ ತನ್ನ ಒಡೆಯರ ಕುತಂತ್ರಕ್ಕೆ ತನ್ನವರನ್ನು ಕಳೆದುಕೊಂಡು, ತನ್ನನ್ನೂ ಬಲಿ ತೆಗೆದುಕೊಳ್ಳಲು ಹವಣಿಸಿದಾಗ ಅದರಿಂದ ತಪ್ಪಿಸಿಕೊಂಡು ದುಷ್ಟರ ಸಂಹಾರಕ್ಕೆ ಸಿದ್ಧನಾಗಿ ಬರುವ ಕತೆಯನ್ನು ಟೋಬಿ ಒಳಗೊಂಡಿದೆ ಅನ್ನೋದು ಟ್ರೈಲರ್ ನಲ್ಲಿ ರಿವೀಲ್ ಆಗಿದೆ. ಕುರುಚಲು ಗಡ್ಡ, ಮೂಗಿನಲ್ಲಿ ದೊಡ್ಡ ಮೂಗುತಿ, ತಲೆ ಹಾಗೂ ಮೂಗಿನಲ್ಲಿ ರಕ್ತದ ಕಲೆಯಿಂದ ಕೂಡಿರುವ ಗಾಯ ಹೀಗೆ ನಾನಾ ರೀತಿಯ ಲುಕ್‍ನಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಟೋಬಿ ಚಿತ್ರದ ಮೂಲಕ ರಾಜ್ ಬಿ ಶೆಟ್ಟಿ ರಗಡ್ ಲುಕ್‌ ಜೊತೆಗೆ ಒಬ್ಬ ವಿಲಕ್ಷಣ ವ್ಯಕ್ತಿಯಾಗಿಯೂ ಕಾಣಿಸಿಕೊಂಡಿದ್ದಾರೆ. ‘ಟೋಬಿ’ ಚಿತ್ರದ ಫಸ್ಟ್ ಲುಕ್ ಮೋಷನ್‌ ಪೋಸ್ಟರ್‌ ರಿಲೀಸ್ ಆದಾಗ, ರಾಜ್ ಬಿ ಶೆಟ್ಟಿ ರುದ್ರ ಭಯಂಕರವಾಗಿ ಕಾಣಿಸಿದ್ದರು.. ಬಳೆಯಾಕಾರದ ದೊಡ್ಡದೊಂದು ಮೂಗುತಿ ಧರಿಸಿರುವ ರಾಜ್ ಬಿ ಶೆಟ್ಟಿ ಕಣ್ಣಲ್ಲಿ ಬೆಂಕಿಯುಂಡೆ ಉಗುಳುತ್ತಿರುವುದನ್ನು ಅಂದು ನೋಡಿದ್ದೆವು.. ಎದೆಯಲ್ಲಿ ಉರಿಯುವ ಬೆಂಕಿ, ಟೀಸರ್ ತುಂಬೆಲ್ಲಾ ರಕ್ತದ ಕೆಂಪು ರಾಚುತ್ತಿತ್ತು. ಕಡು ಕೆಂಪು ಬಣ್ಣದ ರಾಜ್ ಬಿ ಶೆಟ್ಟಿಯ ಕಣ್ಣುಗಳು ದ್ವೇಷ ಕಾರುತ್ತಿದ್ದವು. ಅದು ಈ ಚಿತ್ರದ ಪ್ರಮುಖ ಭಾಗವೊಂದರಲ್ಲಿರುವ ತಮ್ಮ ಲುಕ್‌ ಎಂದು ರಾಜ್‌ ಬಿ ಶೆಟ್ಟಿ ಹೇಳಿಕೊಂಡಿದ್ದರು. ಈಗ ಟ್ರೇಲರ್‌ನಲ್ಲಿ ಅದೇ ವೇಷದಲ್ಲಿ ಫೈಟಿಂಗ್‌ ಸೀನ್‌ನಲ್ಲಿ ಕಾಣಿಸಿಕೊಂಡು ರಾಜ್ ಬಿ ಶೆಟ್ಟಿ ಅಭಿಮಾನಿಗಳನ್ನು ಬೆರಗಾಗಿಸಿದ್ದಾರೆ.

ರಾಜ್ ಬಿ ಶೆಟ್ಟ ಜೊತೆಗೆ ನಟಿ ಚೈತ್ರಾ ಆಚಾರ್ ನಟಿಸಿದ್ದಾರೆ. ಸಂಯುಕ್ತಾ ಹೊರನಾಡು ಕೂಡ ಇಲ್ಲಿ ಸಿಂಪಲ್ ಆಗಿಯೇ ಹೊಳೆಯುತ್ತಾರೆ. ಒಳ್ಳೆಯ ಕತೆ ಮತ್ತು ಹೊಸ ಪ್ರಯೋಗಗಳ ಮೂಲಕ ರಾಜ್‌ ಬಿ ಶೆಟ್ಟಿ  ಅಭಿಮಾನಿಗಳ ಮನಗೆದ್ದವರು. ಇದೀಗ ಆಗಸ್ಟ್ 25ಕ್ಕೆ ಟೋಬಿ ರಿಲೀಸ್ ಆಗಲಿದ್ದು, ಪ್ರೇಕ್ಷಕರ ಮನಸ್ಸಿನಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ.

suddiyaana