ಮೇ 5 ರಿಂದ 9 ದಿನಗಳ ಕಾಲ BMTC, KSRTC ಬಸ್ ಸೇವೆಯಲ್ಲಿ ವ್ಯತ್ಯಯ!

ಮೇ 5 ರಿಂದ 9 ದಿನಗಳ ಕಾಲ BMTC, KSRTC ಬಸ್ ಸೇವೆಯಲ್ಲಿ ವ್ಯತ್ಯಯ!

ಬೆಂಗಳೂರು: ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಚುನಾವಣಾ ಆಯೋಗವು ಚುನಾವಣೆ ನಡೆಸಲು ಸಕಲ ಸಿದ್ಧತೆ ನಡೆಸುತ್ತಿದೆ.  ಇದೀಗ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕೆಲವು ದಿನಗಳ ಕಾಲ ಬಸ್ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಬಾರಿ ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಮೇ 5 ರಿಂದ 13 ರವರೆಗೆ ಚುನಾವಣಾ ಓಡಾಟಗಳಿಗೆ ವಾಹನಗಳ ಅವಶ್ಯಕತೆ ಇದ್ದು ಚುನಾವಣಾ ಅಧಿಕಾರಿಗಳು ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್ಸುಗಳನ್ನ ಬುಕಿಂಗ್ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಮಾವನ ಪರ ಅಖಾಡಕ್ಕಿಳಿದ ಸೊಸೆ – ಮನೆ ಮನೆಗೂ ತೆರಳಿ ಮತಯಾಚಿಸಿದ ಸ್ಮಿತಾ ರಾಕೇಶ್ ಸಿದ್ದರಾಮಯ್ಯ

ಎಲೆಕ್ಷನ್ ಸಿದ್ದತೆಗೆ ಬೇಕಾದ ಸಾರಿಗೆ ವ್ಯವಸ್ಥೆಗೆ ರಾಜ್ಯಾದ್ಯಂತ ಅಂದಾಜು 10 ಸಾವಿರ ಬಿಎಂಟಿಸಿ, ಕೆಎಸ್​ಆರ್​ಟಿಸಿ ಹಾಗೂ ಆರ್​ಟಿಒ ವಾಹನಗಳನ್ನ ಬಳಕೆ ಮಾಡಿಕೊಳ್ಳಗುತ್ತಿದೆ. 800 ಆರ್​ಟಿಒ ವಾಹನಗಳನ್ನ ಸ್ಕ್ರೀನಿಂಗ್ ಹಾಗೂ ಸ್ಕಾಡ್ ಗಳಿಗೆ ನೀಡಲು ಬಳಕೆ ಮಾಡಿಕೊಳ್ಳಲಾಗುತ್ತಿದೆ.‌ ಸರ್ಕಾರಿ ಬಸ್ಸುಗಳನ್ನ ಪೊಲೀಸ್ ಇಲಾಖೆ, ಬಿಬಿಎಂಪಿ, ಆರ್​ಟಿಒ, ಸಾರಿಗೆ ಇಲಾಖೆಗಳ ಸಿಬ್ಬಂದಿಗೆ ಪಿಕಪ್-ಡ್ರಾಪ್ ಹಾಗೂ ಹಲವು ಚುನಾವಣಾ ಕೆಲಸಗಳ ನಿಮಿತ್ತ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಧ್ಯ ಈ ಬಸ್ಸುಗಳನ್ನ ಮೇ 5 ರಿಂದ ಮೇ 13 ರವರೆಗೂ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಸಾರ್ವಜನಿಕರಿಗೆ ಬಸ್ಸುಗಳ ಕೊರತೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 8,063 ಪೋಲಿಂಗ್ ಬೂತ್ ಗಳಿದ್ದು, ಅವುಗಳನ್ನ ಮತ ಕೇಂದ್ರಗಳಿಗೆ ಕೊಂಡೋಯ್ಯಲು ಹಾಗೂ ಮತದಾನ ಮುಗಿದ ಮೇಲೆ ಸ್ಟ್ರಾಂಗ್ ರೂಂ ಗೆ ತರಲು ವಾಹನಗಳ ಅವಶ್ಯತೆಗೆ ಇದೆ. ಇದಕ್ಕಾಗಿ ಅನುಕೂಲಕರವಾಗುವ ನಿಟ್ಟಿನಿಂದ ನಗರದಲ್ಲಿರುವ ಒಂದೊಂದು ಆರ್ ಟಿ ಒ ಕಚೇರಿಗಳಿಗೂ ನೂರರಿಂದ ಇನ್ನೂರು ಗಾಡಿಗಳನ್ನ ಕೊಡುವುದಕ್ಕೆ ಸೂಚಿಸಲಾಗಿದೆ.

suddiyaana