‘ಹಿಟ್ಲರ್ ಕಲ್ಯಾಣ’ದ ಲೀಲಾ ತಾಯಿ ಮಾಯ! – ಕೌಸಲ್ಯ ಪಾತ್ರಕ್ಕೆ ಹೊಸ ನಟಿ ಎಂಟ್ರಿ!

‘ಹಿಟ್ಲರ್ ಕಲ್ಯಾಣ’ದ ಲೀಲಾ ತಾಯಿ ಮಾಯ! – ಕೌಸಲ್ಯ ಪಾತ್ರಕ್ಕೆ ಹೊಸ ನಟಿ ಎಂಟ್ರಿ!

ಕಿರುತೆರೆಯ ಸೂಪರ್ ಹಿಟ್ ಸೀರಿಯಲ್ “ಹಿಟ್ಲರ್ ಕಲ್ಯಾಣ”ದಲ್ಲಿ ತನ್ನದೇ ಆದ ವಿಶಿಷ್ಟ ನಟನೆಯಿಂದ ಎಲ್ಲರ ಮನಗೆದ್ದವರು ಸ್ಯಾಂಡಲ್‌ವುಡ್ ನಟಿ ಅಭಿನಯ. ಆದರೆ, ವರದಕ್ಷಿಣೆ ಕಿರುಕುಳ ವಿಚಾರದಲ್ಲಿ 2 ವರ್ಷ ಜೈಲು ಶಿಕ್ಷೆ, ಮತ್ತು ನಟಿಯ ತಾಯಿಗೆ 5 ವರ್ಷ ಜೈಲು ಶಿಕ್ಷೆ ನೀಡಿ ಹೈಕೋರ್ಟ್ ಏಕಸದಸ್ಯ ಪೀಠ ಇತ್ತೀಚೆಗೆ ತೀರ್ಪು ನೀಡಿತ್ತು. ಈ ಬೆನ್ನಲ್ಲೇ ʻಹಿಟ್ಲರ್ ಕಲ್ಯಾಣʼ ಸೀರಿಯಲ್‌ನ ಕೌಸಲ್ಯ ಪಾತ್ರದಿಂದ ಅಭಿನಯಾ ಔಟ್ ಆಗಿದ್ದಾರೆ. ಅವರ ಪಾತ್ರಕ್ಕೆ ಬೇರೆ ನಟಿಯ ಎಂಟ್ರಿಯಾಗಿದೆ.

ಇದನ್ನೂ ಓದಿ:  ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಶೀರ್ಷಿಕೆಗೆ ಕೋರ್ಟ್ ತಡೆಯಾಜ್ಞೆ

ಹೌದು, ಅಣ್ಣನ ಪತ್ನಿ ಲಕ್ಷ್ಮಿದೇವಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇಲೆ ನಟಿ ಅಭಿನಯಾಗೆ ಶಿಕ್ಷೆ ಪ್ರಕಟವಾಗಿದೆ. ಶಿಕ್ಷೆ ಪ್ರಕಟವಾದ ಕೆಲವೇ ದಿನಗಳಲ್ಲಿ ಸೂಪರ್ ಹಿಟ್ `ಹಿಟ್ಲರ್ ಕಲ್ಯಾಣ’ ಸೀರಿಯಲ್‌ನಿಂದ ನಟಿ ಅಭಿನಯಾರನ್ನು ತೆಗೆದು ಅವರ ಪಾತ್ರಕ್ಕೆ ನಟಿ ವಾಣಿಶ್ರೀ ಆಯ್ಕೆ ಮಾಡಲಾಗಿದೆ.

ಬಣ್ಣದ ಬದುಕಿನಲ್ಲಿ ನಟಿ ವಾಣಿಶ್ರೀ 25 ವರ್ಷಗಳಿಂದ ಸಕ್ರಿಯರಾಗಿದ್ದಾರೆ. 300ಕ್ಕೂ ಅಧಿಕ ಸೀರಿಯಲ್, 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದಾರೆ. ಇದೀಗ ಅಭಿನಯಾ ಜಾಗಕ್ಕೆ ವಾಣಿಶ್ರೀ ಎಂಟ್ರಕೊಟ್ಟಿದ್ದು, ಕೌಸಲ್ಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

1998ರಲ್ಲಿ ಸಹೋದರ ಶ್ರೀನಿವಾಸ್ ಜೊತೆ ಲಕ್ಷ್ಮಿದೇವಿ ಅವರ ವಿವಾಹವಾಗಿತ್ತು. ಮದುವೆ ಸಂದರ್ಭದಲ್ಲಿ ವರದಕ್ಷಿಣೆಯನ್ನ ಅಭಿನಯಾ ಕುಟುಂಬದವರು ಪಡೆದಿದ್ದರು. ಬಳಿಕ ಮತ್ತೆ ವರದಕ್ಷಿಣೆ ತಂದು ಕೊಡುವಂತೆ ಅಭಿನಯ ಹಾಗೂ ಅವರ ತಾಯಿ ಪೀಡಿಸಿದ್ದರು ಎಂದು ದೂರು ದಾಖಲಾಗಿತ್ತು. ಬಳಿಕ ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಏಕಸದಸ್ಯ ಪೀಠ ಅಭಿನಯಾಗೆ 2 ವರ್ಷ, ಅವರ ತಾಯಿಗೆ 5 ವರ್ಷ ಶಿಕ್ಷೆ ಪ್ರಕಟ ಮಾಡಿತ್ತು. ಕೋರ್ಟ್ ಆದೇಶದಂತೆ ಅಭಿನಯ ಜೈಲು ಸೇರಿರೋದ್ರಿಂದ ಅವರ ಪಾತ್ರಕ್ಕೆ ವಾಣಿಶ್ರೀ ಅವರನ್ನ ಆಯ್ಕೆ ಮಾಡಲಾಗಿದೆ.

suddiyaana