ಪಂಚಗಂಗಾ ಎಕ್ಸ್‌ಪ್ರೆಸ್ ಜೊತೆ ವಂದೇಬಾರತ್ ಎಕ್ಸ್‌ಪ್ರೆಸ್ ರೈಲು – ಬೆಂಗಳೂರು ಟು ಗೋವಾ ಪ್ರಯಾಣಕ್ಕೆ ಸದ್ಯದಲ್ಲೇ ಚಾಲನೆ

ಬೆಂಗಳೂರು ಮತ್ತು ಗೋವಾ ನಡುವೆ ಓಡಾಡುವ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಸಿಹಿ ಸುದ್ದಿ ನೀಡುತ್ತಿದೆ. ಬೆಂಗಳೂರು ಮತ್ತು ಗೋವಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಲು ನೈಋತ್ಯ ರೈಲ್ವೆಯು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಹೊಸ ರೈಲು ಯಶವಂತಪುರದಿಂದ ಮಡಗಾಂವ್‌ಗೆ 12 ಗಂಟೆಗಳಲ್ಲಿ ತಲುಪುವ ನಿರೀಕ್ಷೆಯಿದೆ.
ಇದನ್ನೂ ಓದಿ:ಹೋಳಿ ಹಬ್ಬಕ್ಕೆ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್! – ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗಗಳಿಗೆ ವಿಶೇಷ ರೈಲು!
ಬೆಂಗಳೂರು ಮತ್ತು ಗೋವಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸುವ ಕನಸು ನನಸಾಗಲಿದೆ. ನೈಋತ್ಯ ರೈಲ್ವೆ , ದಕ್ಷಿಣ ರೈಲ್ವೆ ಮತ್ತು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ಈ ತಿಂಗಳ ಆರಂಭದಲ್ಲಿ ಯಶವಂತಪುರ ಮತ್ತು ಮಡಗಾಂವ್ ನಡುವೆ ವಂದೇಬಾರತ್ ರೈಲು ಓಡಿಸಬೇಕೆಂಬ ಪ್ರಸ್ತಾವನೆಯೊಂದಿಗೆ ರೈಲ್ವೆ ಮಂಡಳಿ ಮುಂದೆ ಇಟ್ಟಿವೆ. ಸದ್ಯ ಈ ಮಾರ್ಗದಲ್ಲಿ ಸಂಜೆಯ ವೇಳೆಗೆ ಪಂಚಗಂಗಾ ಎಕ್ಸ್‌ಪ್ರೆಸ್ ಓಡಾಟ ನಡೆಸುತ್ತಿದೆ. ರೈಲ್ವೆ ಮಂಡಳಿಗೆ ಸಲ್ಲಿಸಿರುವ ಪ್ರಸ್ತಾವನೆಯ ಪ್ರಕಾರ, ವಂದೇಬಾರತ್ ರೈಲು ವಾರದಲ್ಲಿ ಆರು ದಿನಗಳು ಓಡಲಿವೆ. ಬೆಳಿಗ್ಗೆ 6:05 ಕ್ಕೆ ಯಶವಂತಪುರದಿಂದ ಹೊರಡುತ್ತದೆ. ಇದು 12 ಗಂಟೆಗಳಿಗಿಂತ ಹೆಚ್ಚು ಕಾಲ ಸಂಚಾರ ಮಾಡಿ ಮತ್ತು ಸಂಜೆ 7:15 ರ ವೇಳೆಗೆ ಗೋವಾದ ಮಡ್ಗಾಂವ್ ತಲುಪುತ್ತದೆ. ನಿಲ್ದಾಣಗಳ ನಡುವೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ ಮತ್ತು ಪಡೀಲ್‌ನಲ್ಲಿ ಈ ಟ್ರೇನ್ ನಿಲ್ಲಲಿದೆ.
ಸದ್ಯ ಇರುವ ಯಶವಂತಪುರ-ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ 700 ಕಿ.ಮೀ ಕ್ರಮಿಸಲು ಸುಮಾರು 15 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ನಿಲುಗಡೆಗಳ ಕುರಿತು ರೈಲ್ವೆ ಮಂಡಳಿ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಮತ್ತು ಕೋಚಿಂಗ್ ಅಧಿಸೂಚನೆಯನ್ನು ಹೊರಡಿಸಿಲ್ಲ. SWR ತನ್ನ ಇನ್‌ಪುಟ್‌ಗಳನ್ನು ಸಲ್ಲಿಸಿದೆ ಮತ್ತು ನಿರ್ಧಾರಕ್ಕಾಗಿ ಕಾಯುತ್ತಿದೆ” ಎಂದು SWR ಮುಖ್ಯಸ್ಥ PRO ಮಂಜುನಾಥ್ ಕನಮಾಡಿ ತಿಳಿಸಿದ್ದಾರೆ.

ನೋಡಿರಿ

