ತಿನ್ನೋಕೆ ಆಹಾರವೂ ಸಿಗದಂತೆ  ಮಾಡುತ್ತೆ ಈ ವೈರಸ್‌! – ಅಮೆರಿಕದಲ್ಲಿ ಡೇಂಜರಸ್ ವಾಂಪೈರ್ ಸೋಂಕು ಪತ್ತೆ!

ತಿನ್ನೋಕೆ ಆಹಾರವೂ ಸಿಗದಂತೆ  ಮಾಡುತ್ತೆ ಈ ವೈರಸ್‌! – ಅಮೆರಿಕದಲ್ಲಿ ಡೇಂಜರಸ್ ವಾಂಪೈರ್ ಸೋಂಕು ಪತ್ತೆ!

ಕೋರನಾ ವೈರಲ್‌ ಜಗತ್ತನ್ನು ಕಾಡಿದ ಬಳಿಕ ಹೊಸ ಹೊಸ ವೈರಸ್‌ಗಳು ಪತ್ತೆಯಾಗುತ್ತಲೇ ಇದೆ. ಈ ವೈರಸ್‌ಗಳು ಜನರ ಜೀವ ಹಿಂಡುತ್ತಲೇ ಇದೆ. ಇದೀಗ ಅಮೆರಿಕದಲ್ಲಿ ಮಾರಣಾಂತಿಕ ವೈರಸ್‌ ಒಂದು ಮಣ್ಣಿನಲ್ಲಿ ಪತ್ತೆಯಾಗಿದ್ದು, ಅಲ್ಲಿನ ಜನರನ್ನು ಆತಂಕಕ್ಕೆ ದೂಡುವಂತೆ ಮಾಡಿದೆ.

ಅಮೆರಿಕದ ಮೇರಿಲ್ಯಾಂಡ್ ಮತ್ತು ಮಿಸೌರಿಯಲ್ಲಿ ಮಣ್ಣಿನ ಮಾದರಿಗಳಲ್ಲಿ ಹಲವಾರು ವಾಂಪೈರ್‌ ವೈರಸ್‌ಗಳು ಪತ್ತೆಯಾಗಿವೆ. ಇಂತಹ ವೈರಸ್‌ಗಳ ಕುರುಹುಗಳನ್ನು ಕಂಡು ಹಿಡಿದಿರುವುದು ಇದೇ ಮೊದಲು. ಈ ವಾಂಪೈರ್ ವೈರಸ್ ಅಥವಾ ರಕ್ತಪಿಶಾಚಿ ವೈರಸ್‌ಗಳು ಮತ್ತಷ್ಟು ಬೆಳೆಯಲು ಇತರ ವೈರಸ್‌ಗಳ ಸಹಾಯ ಪಡೆಯುತ್ತವೆ. ಮಣ್ಣಿನಲ್ಲಿ ನಿಧಾನವಾಗಿ ಹರಡಲು ಪ್ರಾರಂಭಿಸುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: ವಿದೇಶದಲ್ಲೂ ದೀಪಾವಳಿ ಸಂಭ್ರಮ! – ಹಿಂದೂ ಸಮುದಾಯದೊಂದಿಗೆ ಹಬ್ಬ ಆಚರಿಸಿದ ಬ್ರಿಟನ್​​ ಪ್ರಧಾನಿ ರಿಷಿ ಸುನಕ್!

ಮೇರಿಲ್ಯಾಂಡ್‌ನ ಪೂಲೆಸ್ವಿಲ್ಲೆ ಬಳಿ ಸಂಗ್ರಹಿಸಲಾದ ಮಣ್ಣಿನ ಮಾದರಿಯಲ್ಲಿ ಈ ವೈರಸ್‌ನ್ನು ಪತ್ತೆಹಚ್ಚಲಾಗಿದೆ. ಬಾಲ್ಟಿಮೋರ್ ಕೌಂಟಿ ಕಾಲೇಜ್ ಆಫ್ ನ್ಯಾಚುರಲ್ ಮ್ಯಾಥಮೆಟಿಕಲ್ ಸೈನ್ಸಸ್‌ನ ಸಹಾಯಕ ನಿರ್ದೇಶಕ ಟಾಗೈಡ್ ಡಿಕಾರ್ವಾಲೋ ಈ ಬಗ್ಗೆ ಮಾತನಾಡಿ, ‘ವೈರಸ್‌ನ್ನು ನೋಡಿದಾಗ ನನಗೆ ಇದನ್ನು ನಂಬಲು ಸಾಧ್ಯವಾಗಲ್ಲಿಲ್ಲ. ಬೇರೊಂದು ವೈರಸ್‌ಗೆ ಬ್ಯಾಕ್ಟೀರಿಯೊಫೇಜ್ ಅಥವಾ ಇನ್ನಾವುದೇ ವೈರಸ್ ಸೇರಿಕೊಂಡಿರುವುದನ್ನು ಯಾರೂ ನೋಡಿಲ್ಲ’ ಎಂದು ತಿಳಿಸಿದ್ದಾರೆ.

ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯ, ಬಾಲ್ಟಿಮೋರ್ ಕೌಂಟಿ ಮತ್ತು ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ತಂಡವು ಈ ವಾಂಪೈರ್ ವೈರಸ್ ಡೇಂಜರಸ್ ಎಂದು ಹೇಳಿದ್ದಾರೆ. ಈ ವೈರಸ್‌, ಬೆಳೆಗಳು ಮತ್ತು ಜಾನುವಾರುಗಳನ್ನು ಕೊಲ್ಲುವ ಕಾಯಿಲೆಗಳನ್ನು ನಿರ್ನಾಮ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಅವು ಮಣ್ಣನ್ನು ಬಲವಾದ ಮತ್ತು ಆರೋಗ್ಯಕರವಾಗಿಡಲು ಅಗತ್ಯವಾದ ಉತ್ತಮ ವೈರಸ್‌ಗಳನ್ನು ಸಹ ಕೊಲ್ಲುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಮಣ್ಣಿನ ಗುಣಮಟ್ಟ ಕಡಿಮೆಯಾದರೆ ಸಹಜವಾಗಿದೆ ಆಹಾರ ಬೆಳೆಯಲು ಕಷ್ಟವಾಗಬಹುದು. ಅಥವಾ ಇಂಥಾ ಮಣ್ಣಿನಲ್ಲಿ ಬೆಳೆಯೋ ಆಹಾರಗಳು ವಿಷಕಾರಿಯಾಗಿರಬಹುದು. ಹೀಗಾಗಿ ಈ ವೈರಸ್‌ನ ಕಾಟ ಮಿತಿ ಮೀರಿದ್ರೆ ಮುಂದೊಂದು ದಿನ ಮನುಷ್ಯರಿಗೆ ತಿನ್ನೋಕೆ ಆಹಾರನೇ ಸಿಗದೇ ಇರೋ ಪರಿಸ್ಥಿತಿನೂ ಬರಬಹುದು ಎನ್ನುತ್ತಾರೆ ತಜ್ಞರು ಎಚ್ಚರಿಸಿದ್ದಾರೆ. ಸದ್ಯ ಈ ವೈರಸ್‌ ಪತ್ತೆಯಾಗಿದ್ದರಿಂದಾಗಿ ಅಲ್ಲಿನ ಜನರು ಆತಂಕದಲ್ಲಿ ಕಾಲ ಕಳೆಯುವಂತೆ ಆಗಿದೆ.

Shwetha M