27 ಸಾವಿರ ವಿವೋ ಫೋನ್ ಗಳನ್ನು ತಡೆದ ಭಾರತ

27 ಸಾವಿರ ವಿವೋ ಫೋನ್ ಗಳನ್ನು ತಡೆದ ಭಾರತ

ನವದೆಹಲಿ: ಚೀನಾದ ವಿವೋ ಕಂಪನಿಯ ಸುಮಾರು 27 ಸಾವಿರ ಫೋನ್‌ಗಳು ವಿದೇಶಕ್ಕೆ ರಫ್ತು ಆಗಬೇಕಿತ್ತು. ಈ ವೇಳೆ ಕಂದಾಯ ಗುಪ್ತಚರ ವಿಭಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆದಿದೆ.

ಡಿವೈಸ್‌ ಮಾದರಿಗಳು ಮತ್ತು ಅವುಗಳ ಮೌಲ್ಯವನ್ನು ತಪ್ಪಾಗಿ ಘೋಷಿಸಿದ ಆರೋಪದ ಹಿನ್ನೆಲೆ ಸುಮಾರು 15 ದಶಲಕ್ಷ ಡಾಲರ್‌(123.73 ಕೋಟಿ ರೂ.)ಮೌಲ್ಯದ ಸರಕನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: “3ಡಿ ಅವತಾರ್” ಸ್ಟಿಕ್ಕರ್ ಪರಿಚಯಿಸಿದ ವಾಟ್ಸ್‌ಆ್ಯಪ್‌ – ಹೊಸ ಫೀಚರ್ ಹೇಗಿದೆ ಗೊತ್ತಾ?

ಪೋನ್ ತಡೆಹಿಡಿದ ಪ್ರಕರಣದ ಬಗ್ಗೆ ಹಣಕಾಸು ಸಚಿವಾಲಯ ಮತ್ತು ವಿವೋ ಕಂಪನಿ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ವಿವೋ ಕಮ್ಯುನಿಕೇಷನ್ಸ್ ಟೆಕ್ನಾಲಜಿ ಕಂಪನಿ ಭಾರತದ ಘಟಕದಿಂದ ಈ ಫೋನ್ ಗಳನ್ನು ತಯಾರಿಸಲಾಗಿದೆ. ವಿವೋ ಮೊದಲ ಬಾರಿಗೆ ಭಾರತ-ನಿರ್ಮಿತ ಸ್ಮಾರ್ಟ್‌ಫೋನ್‌ಗಳನ್ನು ನವೆಂಬರ್ ಆರಂಭದಲ್ಲಿ ಸೌದಿ ಅರೇಬಿಯಾ ಮತ್ತು ಥೈಲ್ಯಾಂಡ್‌ ಮಾರುಕಟ್ಟೆಗಳಿಗೆ ರಫ್ತು ಮಾಡಿತ್ತು.

ಗಲ್ವಾನ್‌ ಕಣಿವೆಯಲ್ಲಿ ಘರ್ಷಣೆ ನಡೆದ ಬಳಿಕ ಚೀನಾ ಕಂಪನಿಗಳ ಮೇಲೆ ಕೇಂದ್ರ ಹದ್ದಿನ ಕಣ್ಣಿಟ್ಟಿದೆ. ಚೀನಿ ಆ್ಯಪ್‌ಗಳನ್ನು ಸರ್ಕಾರ ನಿಷೇಧಗೊಳಿಸಿದ ಬಳಿಕ, ಚೀನಿ ಕಂಪನಿಗಳ ಮೇಲೆ ಆದಾಯ ತೆರಿಗೆ, ಇಡಿ ದಾಳಿ ಮಾಡಿ ಅಕ್ರಮ ಪತ್ತೆ ಹಚ್ಚಿತ್ತು. ವಿವೋ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

suddiyaana