ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ – ವೇಟ್‌ಲಿಫ್ಟರ್ ವಲ್ಲೂರಿ ಅಜಯ ಬಾಬು ಅದ್ಭುತ ಸಾಧನೆ

ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ – ವೇಟ್‌ಲಿಫ್ಟರ್ ವಲ್ಲೂರಿ ಅಜಯ ಬಾಬು ಅದ್ಭುತ ಸಾಧನೆ

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ.   ಪುರುಷರ 79 ಕೆಜಿ ವಿಭಾಗದಲ್ಲಿ ಭಾರತದ ಉದಯೋನ್ಮುಖ ವೇಟ್‌ಲಿಫ್ಟರ್ ವಲ್ಲೂರಿ ಅಜಯ ಬಾಬು ಬೆಳ್ಳಿ ಪದಕ ಗೆದ್ದಿದ್ದಾರೆ.

ಇದನ್ನೂ ಓದಿ:ಭಾರತಕ್ಕೆ ಮೊದಲ ಚಿನ್ನ ತಂದ ಮೀರಾಬಾಯಿ ಚಾನು – ಪುರುಷರ ವೇಟ್‌ಲಿಪ್ಟಿಂಗ್‌ನಲ್ಲಿ ಭಾರತಕ್ಕೆ ಎರಡು ಬೆಳ್ಳಿ ಪದಕ

21 ವರ್ಷದ ಬಾಬು, ಸ್ನ್ಯಾಚ್‌ನಲ್ಲಿ 149 ಕೆಜಿ, ಕ್ಲೀನ್ ಮತ್ತು ಜರ್ಕ್‌ನಲ್ಲಿ 181 ಕೆಜಿ ಒಟ್ಟು 330 ಕೆಜಿ ತೂಕ ಎತ್ತಿ ಕೇವಲ ಒಂದು ಅಂಕದ ಅಂತರದಿಂದ ಚಿನ್ನ ಕಳೆದುಕೊಂಡರು. ಪ್ರಸ್ತುತ ಆವೃತ್ತಿಯ ಕ್ರೀಡಾಕೂಟದಲ್ಲಿ ಇದು ಭಾರತದ ಆರನೇ ವೇಟ್‌ಲಿಫ್ಟಿಂಗ್ ಪದಕವಾಗಿದೆ.

ಸೋಮವಾರ ತಡ ರಾತ್ರಿ ನಡೆದ ಈ ಸ್ಪರ್ಧೆಯಲ್ಲಿ ಮಲೇಷ್ಯಾದ ಎರ್ರಿ ಹಿದಾಯತ್ ಮುಹಮ್ಮದ್ ಒಟ್ಟು 331 ಕೆಜಿ (147 ಮತ್ತು 184) ತೂಕ ಎತ್ತಿ ಕೂಟದ ದಾಖಲೆಯೊಂದಿಗೆ ಚಿನ್ನವನ್ನು ಗೆದ್ದರು. ಇಂಗ್ಲೆಂಡ್‌ನ ಕ್ರಿಸ್ ಮುರ್ರೆ ಒಟ್ಟು 325 ಕೆಜಿ ತೂಕದೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಕ್ಲೀನ್ ಮತ್ತು ಜರ್ಕ್‌ನಲ್ಲಿ ಅಂತಿಮ ಲಿಫ್ಟ್‌ಗಳಿಗೆ ಚಿನ್ನದ ಹೋರಾಟ ನಡೆಯಿತು. ಹಿದಾಯತ್ ಮೊದಲು 181 ಕೆಜಿ ಎತ್ತುವ ಮೂಲಕ ಹೊಸ ಕಾಮನ್‌ವೆಲ್ತ್ ಕ್ರೀಡಾಕೂಟದ ದಾಖಲೆಯನ್ನು ಸ್ಥಾಪಿಸಿದರು. ನಂತರ ಅಜಯ ಬಾಬು ತನ್ನ ಅಂತಿಮ ಪ್ರಯತ್ನದಲ್ಲಿ 181 ಕೆಜಿ ಎತ್ತುವ ಮೂಲಕ ಆ ಪ್ರಯತ್ನವನ್ನು ಸರಿಗಟ್ಟಿದರು ಮತ್ತು ಅವರ ಒಟ್ಟು ತೂಕ 330 ಕೆಜಿಗೆ ತಲುಪಿತು. ಹಿದಾಯತ್ ತನ್ನ ಕೊನೆಯ ಪ್ರಯತ್ನದಲ್ಲಿ 184 ಕೆಜಿ ತೂಕ ಎತ್ತುವ ಮೂಲಕ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿ ಚಿನ್ನದ ಪದಕವನ್ನು ಪಡೆದರು.

Kishor KV

Leave a Reply

Your email address will not be published. Required fields are marked *