300 ಪ್ರಪೋಸಲ್, ಅನುಕೂಲ್ ಬೆಸ್ಟ್‌.. ವೈಷ್ಣವಿ ಲವ್‌ ವಿಧಿ ಬರೆದ ಸ್ಟೋರಿ! – ಸೀತಾ – ಅಕಾಯ್‌ ಕಲ್ಯಾಣ ಯಾವಾಗ?

300 ಪ್ರಪೋಸಲ್, ಅನುಕೂಲ್ ಬೆಸ್ಟ್‌.. ವೈಷ್ಣವಿ ಲವ್‌ ವಿಧಿ ಬರೆದ ಸ್ಟೋರಿ! – ಸೀತಾ – ಅಕಾಯ್‌ ಕಲ್ಯಾಣ ಯಾವಾಗ?

ಮದ್ವೆ ಯಾವಾಗ? ಮದ್ವೆ ಯಾವಾಗ? ಇದೊಂದು ಪ್ರಶ್ನೆ ನಟಿ ವೈಷ್ಣವಿ ಗೌಡ ಹೋದಲೆಲ್ಲಾ ಎದುರಾಗ್ತಿತ್ತು. ಮದ್ವೆಗೆ ನೂರಾರು ಪ್ರಪೋಸಲ್‌ ಬಂದಿದ್ರು, ಕನಸಿನ ರಾಜನಿಗಾಗಿ ನಟಿ ಎಲ್ಲಾ ಪ್ರಪೋಸಲ್‌ ರಿಜೆಕ್ಟ್‌ ಮಾಡ್ತಾನೇ ಬಂದಿದ್ರು, ಕಡೆಗೂ ನಟಿ ವೈಷ್ಣವಿಗೆ ತಮ್ಮ ಡ್ರೀಮ್‌ ಬಾಯ್‌ ಸಿಕ್ಕಿದ್ದಾರೆ. ಮನ ಮೆಚ್ಚಿದ ಹುಡುಗನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ವೈಷ್ಣವಿ ಸಜ್ಜಾಗಿದ್ದಾರೆ. ಅನುಕೂಲ್ ಮಿಶ್ರಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:‌ ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಪಾಕಿಸ್ತಾನದ ಟೀಕೆ ಖಂಡಿಸಿದ ಭಾರತ

ಸೀತಾರಾಮ ಸೀರಿಯಲ್‌ ನಟಿ ವೈಷ್ಣವಿ ಗೌಡ ಅಗ್ನಿಸಾಕ್ಷಿ ಸೀರಿಯಲ್‌ ಮೂಲಕ ಕರುನಾಡ ಜನರ ಮನಗೆದ್ದರು. ಸನ್ನಿಧಿ ಅಂತಾನೇ ಫೇಮಸ್‌ ಆಗಿದ್ರು. ಸೀರಿಯಲ್‌ ಮೂಲಕ ಫೇಮಸ್‌ ಆಗ್ತಿದ್ದಂತೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 8 ರಲ್ಲೂ ಚಾನ್ಸ್‌ಗಿಟ್ಟಿಸಿಕೊಂಡಿದ್ರು. ಬಿಗ್ ಬಾಸ್​ನಲ್ಲಿ ಅವರ ವ್ಯಕ್ತಿತ್ವ ಎಲ್ಲರಿಗೂ ಇಷ್ಟ ಆಗಿತ್ತು. ಕೊವಿಡ್ ಬಂದ ಕಾರಣ ಬಿಗ್ ಬಾಸ್​ನ ಅರ್ಧಕ್ಕೆ ನಿಲ್ಲಿಸಿ ಆ ಬಳಿಕ ಶುರು ಮಾಡಲಾಯಿತು. ಮನೆಗೆ ಹೋಗಿ ಬಂದ ಗ್ಯಾಪ್​ನಲ್ಲಿ 200ರಿಂದ 300 ಬಂದಿರಬಹುದು. ಒಂದನ್ನೂ ನೋಡಬೇಕು ಅಂತಲೇ ಅನ್ನಿಸಲಿಲ್ಲ ಎಂದು ವೈಷ್ಣವಿ ಸುದೀಪ್‌ ಮುಂದೆ ಹೇಳಿದ್ರು. ಅದೇ ವೇಳೆ ವೈಷ್ಣವಿ ಒಂದು ಮಾತು ಹೇಳಿದ್ದರು. ನಾನು ಯಾವಾಗಲೂ ಮನಸ್ಸಿನ ಮಾತು ಕೇಳುತ್ತೇನೆ. ಸೋ ಯಾವುದು ಕನೆಕ್ಟ್ ಆಗಲೇ ಇಲ್ಲ. ಕನಸಿನ ಹುಡುಗ ಸಿಕ್ಕಿದ್ಮೇಲೆ ಮದುವೆ ಆಗ್ತೀನಿ ಅಂತಾ ಹೇಳಿದ್ರು.. ಕಡೆಗೂ ವೈಷ್ಣವಿ ಗೌಡಗೆ ತಮ್ಮ ಡ್ರೀಮ್‌ ಬಾಯ್‌ ಸಿಕ್ಕಿದ್ದಾರೆ.   ವೈಷ್ಣವಿ ಗೌಡ ಅನುಕೂಲ್‌ ಮಿಶ್ರಾ ಜೊತೆ ಏಪ್ರೀಲ್‌ 14 ರಂದು ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ.

ವೈಷ್ಣವಿ ಗೌಡ ಈ ಬಾರಿ ಬೆಂಗಳೂರಿನಲ್ಲಿ ನಡೆದ ಏ‌ರ್ ಶೋ ವೀಕ್ಷಣೆ ಮಾಡಿದ್ದರು. ಈ ಸಂದರ್ಭದಲ್ಲಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ “ಧನ್ಯವಾದ ಎ. ನಿಮ್ಮಿಂದ ನನಗೆ ಏರ್‌ಶೋ ನೋಡಲು ಸಾಧ್ಯವಾಯಿತು. ಇದು ಸುಂದರವಾದ ಅನುಭವ ಎಂದು ಪೋಸ್ಟ್ ಮಾಡಿದ್ದರು. ಅವಾಗ್ಲೇ ವೈಷ್ಣವಿ ಫ್ಯಾನ್ಸ್‌ ಪ್ರೀತಿಯಲ್ಲಿ ಬಿದ್ದಿದ್ದಾರೆ ಅಂತಾ ಹೇಳಿದ್ರು, ಆದ್ರೆ ನಟಿ ಈ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿರ್ಲಿಲ್ಲ. ಹೀಗಾಗಿ ವೈಷ್ಣವಿ ಗೌಡ ಮದುವೆಯಾಗಲಿರುವ ಗಂಡು ಯಾರು ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಕಾಡ್ತಿತ್ತು. ಇದೀಗ ವೈಷ್ಣವಿ ಕನಸಿನ ರಾಜ ಯಾರು ಅನ್ನೋದನ್ನ ಪರಿಚಯಿಸಿದ್ದಾರೆ. ಅಂದ್ಹಾಗೆ ಅನುಕೂಲ್‌ ಮಿಶ್ರಾ ಹೊರ ರಾಜ್ಯದವರು. ಅವ್ರಿಗೆ ಕನ್ನಡ ಮಾತನಾಡಲು ಬರೋದಿಲ್ಲ. ಆದ್ರೆ ವೈಷ್ಣವಿಗಾಗಿ ಗೂಗಲ್‌ ನಲ್ಲಿ ಟ್ರಾನ್ಸೇಟ್‌ ಮಾಡಿ ಕನ್ನಡ ಮಾತನಾಡಿದ್ದಾರೆ. ನಾನು ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ ಅಂತಾ ಹೇಳಿದ್ದಾರೆ. ಇನ್ನು ಅನುಕೂಲ್‌ ಇಂಡಿಯನ್‌ ಏರ್‌ಫೋರ್ಸ್‌ ನಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ವೈಷ್ಣವಿ ಹೇಳಿದ್ದಾರೆ. ಅನುಕೂಲ್‌ ಅವರನ್ನ ಅಕಾಯ್‌ ಅಂತಾ ಪ್ರೀತಿಯಿಂದ ಕರಿತಾರೆ. ಸೋಶಿಯಲ್‌ ಮೀಡಿಯಾದಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡ ವೈಷ್ಣವಿ ಗೌಡ, ಅವನದ್ದು ಆಕಾಶ, ಸೇವೆ, ನನ್ನದು ಸ್ಕ್ರಿಪ್ಟ್‌, ವೇದಿಕೆ. ವಿಧಿ ಒಂದು ಸುಂದರ ಲವ್‌ಸ್ಟೋರಿ ಹೆಣೆದಿದೆ ಎಂದು ಹೇಳಿದ್ದಾರೆ.

ಈ ಹಿಂದೆ 2022ರಲ್ಲಿ ವಿದ್ಯಾಭರಣ್‌ ಎಂಬುವವರ ಜೊತೆ ವೈಷ್ಣವಿ ಗೌಡ ಮದುವೆ ಮಾತುಕತೆ ನಡೆದಿತ್ತು. ಹೂ ಮುಡಿಸುವ ಶಾಸ್ತ್ರದ ಫೋಟೊಗಳು ವೈರಲ್ ಆಗಿತ್ತು. ಅದನ್ನು ಕೆಲವರು ನಿಶ್ಚಿತಾರ್ಥ ಎಂದೇ ಭಾವಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಮದುವೆ ಮಾತುಕತೆ ಮುರಿದು ಬಿದ್ದಿತ್ತು. ಇದೀಗ ವೈಷ್ಣವಿಗೆ ಅನುಕೂಲ್‌ ಜೊತೆಗೆ ದಾಂಪತ್ಯ ಜೀವಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದು ಲವ್‌ ಮ್ಯಾರೆಜ್‌ ಅಲ್ಲ. ಅರೆಂಜ್‌ ಮ್ಯಾರೇಜ್‌ ಎಂದು ಹೇಳಲಾಗ್ತಿದೆ.

Shwetha M

Leave a Reply

Your email address will not be published. Required fields are marked *