ವೈಭವ್ Vs ಗುಜರಾತ್ ಟೈಟಾನ್ಸ್ ಕಾದಾಟ – ಸೂರ್ಯವಂಶಿ ವಿರುದ್ಧ ಹೇಗಿರುತ್ತೆ GT ಗೇಮ್ ಪ್ಲ್ಯಾನ್?

ವೈಭವ್ Vs ಗುಜರಾತ್ ಟೈಟಾನ್ಸ್ ಕಾದಾಟ – ಸೂರ್ಯವಂಶಿ ವಿರುದ್ಧ ಹೇಗಿರುತ್ತೆ GT ಗೇಮ್ ಪ್ಲ್ಯಾನ್?

ಕ್ವಾಲಿಫೈಯರ್- 2 ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಈ ಕಾದಾಟ ನಡೆಯಲಿದೆ.  ಗುಜರಾತ್ ಟೈಟಾನ್ಸ್ ಇವತ್ತು ಗೆಲ್ಲೋದು ಹೇಗೆ ಅನ್ನೋ ಲೆಕ್ಕಾಚಾರಕ್ಕಿಂತ ಆರ್‌ಆರ್ ರನ್ ಮೆಷಿನ್ ವೈಭವ್ ಸೂರ್ಯವಂಶಿಯನ್ನು ಕಟ್ಟಿಹಾಕೋದು ಹೇಗೆ ಎಂಬ ವಿಚಾರದಲ್ಲಿ ತಲೆಕೆಡಿಸಿಕೊಂಡಿದೆ.

ಇದನ್ನೂ ಓದಿ:ಮುಂಬೈ ತಂಡದಿಂದ ಹಾರ್ದಿಕ್ ಪಾಂಡ್ಯ ತಲೆದಂಡ –ನಾಯಕನಾಗಿ ಬುಮ್ರಾ ಫಿಕ್ಸ್?

ಗುಜರಾತ್ ಟೈಟಾನ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ವಿರುದ್ಧ ಇವತ್ತು ನಡೆಯುವ ಪಂದ್ಯವನ್ನು ವೈಭವ್ ಮತ್ತು ಜಿಟಿ ನಡುವಿನ ಕಾದಾಟವೆಂದೇ ಪರಿಗಣಿಸಿಲಾಗಿದೆ. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಯನ್ನು ಕಟ್ಟಿಹಾಕಲು ತಯಾರಿ ನಡೆದಿದೆ ಎಂದು ಜಿಟಿಯ ಸಹಾಯಕ ಕೋಚ್ ಪಾರ್ಥಿವ್ ಪಟೇಲ್ ಬಹಿರಂಗಪಡಿಸಿದ್ದಾರೆ. ನ್ಯೂ ಚಂಡೀಗಢ ದ ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.

ಫೈನಲ್  ತಲುಪಲು ಗುಜರಾತ್ ಟೈಟಾನ್ಸ್  ಮತ್ತು ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಉತ್ತಮ ಅವಕಾಶವಿದೆ. ಗೆದ್ದವರು ಆರ್‌ಸಿಬಿ ಎದುರು ಫೈನಲ್‌ನಲ್ಲಿ ಕಾದಾಟ ನಡೆಸಲಿದ್ದಾರೆ. ಹೀಗಾಗಿ ಗುಜರಾತ್ ಟೈಟಾನ್ಸ್‌ ತಂಡ ಆರ್‌ಆರ್ ತಂಡವನ್ನು ಹೇಗೆ ನಿಯಂತ್ರಿಸುವುದು ಅನ್ನೋ ಗೇಮ್‌ಪ್ಲಾನ್ ಕ್ಕಿಂತ ವೈಭವ್ ಸೂರ್ಯವಂಶಿಯನ್ನು ಕಟ್ಟಿ ಹಾಕಲು ರಣತಂತ್ರ ರೂಪಿಸುತ್ತಿದೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಬೇಗನೇ ಔಟ್ ಮಾಡಲು ಮಾಸ್ಟರ್ ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತು ಗುಜರಾತ್ ಟೈಟಾನ್ಸ್ ತಂಡದ ಸಹಾಯಕ ಮತ್ತು ಬ್ಯಾಟಿಂಗ್ ಕೋಚ್ ಪಾರ್ಥಿವ್ ಪಟೇಲ್ ಮಹತ್ವದ ಹೇಳಿಕೆ ನೀಡಿದ್ದಾರೆ.

ಎರಡನೇ ಕ್ವಾಲಿಫೈಯರ್‌ಗೆ ಒಂದು ದಿನ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ವೈಭವ್ ಸೂರ್ಯವಂಶಿಯನ್ನು ಕಟ್ಟಿ ಹಾಕುವ ಬಗ್ಗೆ ಕೇಳಿದಾಗ, ಗುಜರಾತ್ ಟೈಟಾನ್ಸ್‌ನ ಸಹಾಯಕ ಕೋಚ್ ಪಾರ್ಥಿವ್ ಪಟೇಲ್ ಮಾಸ್ಟರ್ ಪ್ಲಾನ್ ಹೇಳಿದ್ದಾರೆ. ಸೂರ್ಯವಂಶಿ ಅವರು ಬ್ಯಾಟಿಂಗ್ ಮಾಡುತ್ತಿರುವ ರೀತಿಯನ್ನು ನೋಡಲು ತುಂಬಾ ಸಂತೋಷವಾಗಿದೆ. ಅವರನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸಲು ನಮ್ಮಿಂದ ಸಾಧ್ಯವಾಗುತ್ತದೆ ಅಂದುಕೊಂಡಿದ್ದೇವೆ. ಈ ಆವೃತ್ತಿಯಲ್ಲಿ ಇತರ ತಂಡಗಳು ಸಹ ಸೂರ್ಯವಂಶಿ ಅವರನ್ನು ಬೇಗನೆ ಔಟ್ ಮಾಡಲು ಯೋಜಿಸಿದ್ದವು, ಆದರೆ ವಿಫಲವಾದವು. ವೈಭವ್ ಅವರ ಬ್ಯಾಟಿಂಗ್‌ನ ವೀಡಿಯೊಗಳನ್ನು ನಾವು ವೀಕ್ಷಿಸಿದ್ದೇವೆ. ಅವರ ವಿರುದ್ಧ ನಮ್ಮ ಯೋಜನೆಗಳನ್ನು ಉತ್ತಮವಾಗಿ ಕಾರ್ಯಗತಗೊಳಿಸಬಹುದು ಎಂದು ಅಂದುಕೊಂಡಿದ್ದೇವೆ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ. ಪಾರ್ಥಿವ್ ಪಟೇಲ್ ಕೂಡ ವೈಭವ್ ಸೂರ್ಯವಂಶಿ ಅವರ ಪ್ರತಿಭೆಯ ಬಗ್ಗೆ ಪ್ರತಿಕ್ರಿಯಿಸಿ, 15 ವರ್ಷದ ಯುವ ಆಟಗಾರನನ್ನು ಶ್ಲಾಘಿಸುತ್ತಾ, “ಕಳೆದ ಬಾರಿ ನಾನು ಅವನ ವಯಸ್ಸಿನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕೆಂದು ಹೇಳಿದ್ದೆ. ಅವನು ಅದ್ಭುತ ಪ್ರತಿಭೆ. ಅವನು ಬ್ಯಾಟಿಂಗ್ ಮಾಡುವುದನ್ನು ಎಲ್ಲರೂ ನೋಡಲು ಇಷ್ಟಪಡುತ್ತಾರೆ. ಆದಾಗ್ಯೂ, ಎದುರಾಳಿ ತಂಡದ ದೃಷ್ಟಿಕೋನದಿಂದ ಈ ಪಂದ್ಯದಲ್ಲಿ ಅವನು ಸುಲಭವಾಗಿ ಸ್ಕೋರ್ ಮಾಡುವುದನ್ನು ತಡೆಯಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

ಈ ಆವೃತ್ತಿಯಲ್ಲಿ ವೈಭವ್ ಸೂರ್ಯವಂಶಿ ಆಡಿರುವ 15 ಪಂದ್ಯಗಳಲ್ಲಿ 680 ರನ್ ಗಳಿಸಿದ್ದಾರೆ. ಜೊತೆಗೆ ಆರೆಂಜ್ ಕ್ಯಾಪ್ ಕೂಡಾ ಇವರಿಗೆ ಸಿಕ್ಕಿದೆ.

Sulekha

Leave a Reply

Your email address will not be published. Required fields are marked *