ಶೂ ತೋರಿಸಿದ ಸೂರ್ಯವಂಶಿಗೆ ಸಂಕಷ್ಟ – ವೈಭವ್ ಮೇಲೆ PAK ಫ್ಯಾನ್ಸ್ ಉರಿ
ಪಾಕಿಗಳ ಕೊಬ್ಬಿಳಿಸ್ತಾರಾ ಸೆಂಚುರಿ ಸ್ಟಾರ್?

ವೈಭವ್ ಸೂರ್ಯವಂಶಿ. ಮಾರ್ಡ್ರೆನ್ ಕ್ರಿಕೆಟ್ನ ಸೆನ್ಸೇಷನಲ್ ಬ್ಯಾಟರ್. ಪರ್ಫಾಮೆನ್ಸ್ಗೂ ಏಜ್ಗೂ ಸಂಬಂಧನೇ ಇಲ್ಲ ಅಂತಾ ದಿನೇದಿನೇ ದಾಖಲೆಗಳನ್ನೇ ಮೆಟ್ಟಿಲು ಮಾಡ್ಕೊಂಡು ಬೆಳೀತಿರೋ ಹುಡ್ದ. ಅಂಡರ್ 19 ತಂಡದಲ್ಲೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡ್ತಿರೋ ವೆರಿ ಟ್ಯಾಲೆಂಟೆಡ್ ಪ್ಲೇಯರ್. ಆದ್ರೆ ಇದೇ ಸೂರ್ಯವಂಶಿ ಮೇಲೆ ಪಾಕಿಸ್ತಾನಿ ಆಟಗಾರರು ಮತ್ತು ಅಭಿಮಾನಿಗಳು ಉರಿದು ಬಿದ್ದಿದ್ದಾರೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಂತೂ ಐಸಿಸಿಗೆ ದೂರು ಕೊಡ್ತೀವಿ ಅಂತಿದ್ದಾನೆ.
ಇದನ್ನೂ ಓದಿ : RCBಗೆ 2ನೇ ಕಪ್ Loading….. – 2026ಕ್ಕೆ ಟ್ರಂಪ್ ಕಾರ್ಡ್ ಜೇಕಬ್ ಡಫಿ
ಕ್ರಿಕೆಟ್ ಲೋಕದಲ್ಲಿ ಬ್ಯಾಟಿಂಗ್ ಮೂಲಕವೇ ಸದ್ದು ಮಾಡ್ತಿರೋ ವೈಭವ್ ಸೂರ್ಯವಂಶಿ ಪಂದ್ಯದಿಂದ ಪಂದ್ಯಕ್ಕೆ ಬೆಸ್ಟ್ ಪರ್ಫಾಮೆನ್ಸ್ ಕೊಡ್ತಿದ್ದಾರೆ. ಐಪಿಎಲ್ ಸೇರಿದಂತೆ ಬೇರೆ ಬೇರೆ ಫಾರ್ಮೆಟ್ ಕ್ರಿಕೆಟ್‌ನಲ್ಲಿ ಈಗಾಗಲೇ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಌಂಡ್ ಇವತ್ತಿಂದ ಸ್ಟಾರ್ಟ್ ಆಗಿರೋ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಸಿಕ್ಸ್, ಫೋರ್ ಗಳ ಮೂಲಕವೇ ಡೀಲ್ ಮಾಡಿದ ವೈಭವ್ ವೇಗದ ಶತಕ ಸಿಡಿಸಿ ಹಿಸ್ಟರಿ ಕ್ರಿಯೇಟ್ ಮಾಡಿದ್ದಾರೆ. ಹೀಗೆ ವೈಭವ್ ದಿನೇದಿನೇ ಗ್ರೋತ್ ಆಗ್ತಿದ್ರೆ ಅತ್ತ ಪಾಕಿಸ್ತಾನಿಗಳು ಉರಿದು ಬೀಳ್ತಿದ್ದಾರೆ.
ಎಬಿಡಿ ದಾಖಲೆ ಬ್ರೇಕ್ ಮಾಡಿದ ವೈಭವ್!
ವಿಜಯ್ ಹಜಾರೆ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಪರ್ಫಾಮೆನ್ಸ್ ನೋಡ್ಬೇಕು ಅಂತಾ ಕಾಯ್ತಿದ್ದ ಫ್ಯಾನ್ಸ್ಗೆ ವೈಭವ್ ಸೂರ್ಯವಂಶಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಅರುಣಾಚಲ ಪ್ರದೇಶ್ ವಿರುದ್ಧ ಬಿಹಾರ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಫಸ್ಟ್ ಓವರ್ನಿಂದಲೇ ಅರುಣಾಚಲ ಪ್ರದೇಶ್ ಬೌಲರ್ಗಳನ್ನ ಬೆಂಡೆತ್ತಿದ ವೈಭವ್ ಕೇವಲ 36 ಎಸೆತಗಳಲ್ಲಿ ಶತಕ ಪೂರೈಸಿದರು. ಇಷ್ಟಕ್ಕೇ ಸುಮ್ಮನಾಗದೆ ಮೈದಾನದ ಮೂಲೆಮೂಲೆಗೂ ಚೆಂಡನ್ನು ಅಟ್ಟಿ ಕೇವಲ 54 ಎಸೆತಗಳಲ್ಲಿ 150 ರನ್ಸ್ ಕಂಪ್ಲೀಟ್ ಮಾಡಿದ್ರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 150 ರನ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಏಕದಿನ ಕ್ರಿಕೆಟ್‌ನಲ್ಲಿ (ಲಿಸ್ಟ್ ಎ) ಅತೀ ವೇಗವಾಗಿ 150 ರನ್ಗಳನ್ನು ಸಿಡಿಸಿದ ವಿಶ್ವ ದಾಖಲೆ ಸೌತ್ ಆಫ್ರಿಕಾದ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿತ್ತು. ಎಬಿಡಿ 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 64 ಎಸೆತಗಳಲ್ಲಿ 150 ರನ್ ಪೂರೈಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಅಂತಿಮವಾಗಿ 84 ಎಸೆತಗಳಲ್ಲಿ 15 ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ 190 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ರು. ಜಸ್ಟ್ 10 ರನ್ಗಳಿಂದ ದ್ವಿಶತಕದ ಅವಕಾಶ ತಪ್ಪಿಸಿಕೊಂಡ್ರು. ವೈಭವ್ ಸೂರ್ಯವಂಶಿ ಕಳೆದ ಐಪಿಎಲ್ನಲ್ಲಿ ಕೇವಲ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದಾದ ಬಳಿಕ ಭಾರತ ಎ ಪರ 32 ಎಸೆತಗಳಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದರು. ಇದೀಗ ವಿಜಯ ಹಝಾರೆ ಟೂರ್ನಿಯಲ್ಲೂ ಸೆಂಚುರಿ ಸಿಡಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಹೀಗೆ ವೈಭವ್ ದಿನದಿಂದ ದಿನಕ್ಕೆ ಡೇಂಜರಸ್ ಬ್ಯಾಟರ್ ಆಗ್ತಿದ್ರೆ ಅತ್ತ ಪಾಕಿಸ್ತಾನಿಗಳು ಮಾತ್ರ ಉರಿದು ಬೀಳ್ತಿದ್ದಾರೆ.
ಬೌಲರ್ ಗೆ ಶೂ ತೋರಿಸಿದ್ದಕ್ಕೆ ಪಾಕಿಗಳು ಕಿಡಿ!
ನಿಮ್ಗೆಲ್ಲಾ ಗೊತ್ತಿರೋ ಹಾಗೇ ಡಿಸೆಂಬರ್ 21ರಂದು ನಡೆದ ಅಂಡರ್ 19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ಎದುರು ಭಾರತ ಸೋಲು ಕಂಡಿತ್ತು. ಈ ಮ್ಯಾಚಲ್ಲಿ ಉಭಯ ಆಟಗಾರರ ನಡುವೆ ಸಾಕಷ್ಟು ಹೀಟಪ್ ಎನ್ನುವಂತ ಸಿಚುಯೇಷನ್ಸ್ ಕ್ರಿಯೇಟ್ ಆಗಿತ್ತು. ಅದ್ರಲ್ಲೂ ವೈಭವ್ ಸೂರ್ಯವಂಶಿ ಅಂತೂ ನೆಕ್ಸ್ಟ್ ಲೆವೆಲ್ನಲ್ಲೇ ರಿಯಾಕ್ಟ್ ಮಾಡಿದ್ರು. ಆಗಿದ್ದೇನಂದ್ರೆ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 347 ರನ್ಗಳನ್ನ ಕಲೆ ಹಾಕಿತ್ತು. ಸೋ ಭಾರತದ ಆಟಗಾರರು ಪ್ರೆಶರ್ನಲ್ಲೇ ಚೇಸಿಂಗ್ಗೆ ಇಳಿದಿದ್ರು. ಬ್ಯಾಡ್ಲಕ್ ಅಂದ್ರೆ ಐದನೇ ಓವರ್‌ನಲ್ಲಿ ಸೂರ್ಯವಂಶಿ ಬಿಗ್ಹಿಟ್ಗೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಬ್ಯಾಟ್ಗೆ ಚೆಂಡು ಎಡ್ಜ್ ಆಗಿ ನೇರವಾಗಿ ವಿಕೆಟ್ ಕೀಪರ್ ಗ್ಲೌಸ್‌ಗೆ ಹೋಯಿತು. ಹೀಗಾಗಿ ವೈಭವ್ 26 ರನ್‌ಗಳಿಗೆ ಔಟಾದರು. ವೈಭವ್ ನಿರಾಸೆಯಿಂದಲೇ ಪೆವಿಲಿಯನ್ನತ್ತ ಹೊರಟಿದ್ರು. ಇಂಥಾ ಟೈಮಲ್ಲಿ ವೈಭವ್ ವಿಕೆಟ್ ಪಡೆದ ಪಾಕಿಸ್ತಾನಿ ವೇಗದ ಬೌಲರ್ ಅಲಿ ರಜಾ ಫುಲ್ ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡ್ತಿದ್ದ. ಹಾಗೇ ಅಸಭ್ಯ ಪದಗಳಿಂದ ಹೊರ ಹೋಗುವಂತೆ ಸೆಂಡ್ ಆಫ್ ಕೊಡ್ತಿದ್ದ. ಇದರಿಂದ ಕೆರಳಿದ ವೈಭವ್ ತಮ್ಮ ಶೂ ತೋರಿಸುತ್ತಾ ಇದಕ್ಕೂ ಸಮ ಇಲ್ಲ ಎನ್ನುವಂತೆ ತಿರುಗೇಟು ಕೊಟ್ರು.
ಯಾವುದೇ ಮ್ಯಾಚ್ ಇದ್ರೂ ಬ್ಯಾಟರ್ ಔಟ್ ಆದಾಗ ಬೌಲರ್ಸ್ ಸೆಲೆಬ್ರೇಟ್ ಮಾಡೇ ಮಾಡ್ತಾರೆ. ಪ್ರಶ್ನೆ ಅದಲ್ಲ. ಬಟ್ ಅದಕ್ಕೇ ಅಂತಾ ಒಂದಷ್ಟು ಇತಿಮಿತಿಗಳು ಇರುತ್ತೆ. ಅದನ್ನ ಮೀರಿ ವರ್ತಿಸಿದಾಗ ಬ್ಯಾಟರ್ಸ್ ಕೂಡ ಸಿಟ್ಟಾಗ್ತಾರೆ. ಸ್ಪಾಟ್ನಲ್ಲೇ ರಿಯಾಕ್ಟ್ ಮಾಡಿ ತಿರುಗೇಟು ಕೊಡ್ತಾರೆ. ಆದ್ರೆ ಸೂರ್ಯವಂಶಿ ಶೂ ತೋರಿಸಿದ್ದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಕ್ರೀಡಾಸ್ಫೂರ್ತಿ ಅಂದ್ರೆ ಇದಲ್ಲ. ಈಗಷ್ಟೇ ಕ್ರಿಕೆಟ್‌ನಲ್ಲಿ ಜರ್ನಿ ಸ್ಟಾರ್ಟ್ ಮಾಡ್ತಿರೋ ವೈಭವ್ ಈ ರೀತಿಯಾಗಿ ರಿಯಾಕ್ಟ್ ಮಾಡಬಾರದಿತ್ತು ಅಂತಿದ್ದಾರೆ. ಇನ್ನೂ ಕೆಲವರು ಪಾಕಿಸ್ತಾನಿಯರಿಗೆ ಅದೇ ಥರ ತಿರುಗೇಟು ಕೊಡ್ಬೇಕು ಅಂತಾ ಸಪೋರ್ಟ್ ಮಾಡ್ತಿದ್ದಾರೆ. ಮತ್ತೊಂದೆಡೆ ಪಂದ್ಯದ ಬಳಿಕ ಕ್ರೀಡಾಂಗಣದಿಂದ ಸೂರ್ಯವಂಶಿ ಹೊರಬರುವಾಗ ಪಾಕಿಸ್ತಾನಿ ಅಭಿಮಾನಿಗಳು ಹುಚ್ಚಾಟ ಮೆರೆದಿದ್ದಾರೆ. ವೈಭವ್ ನೋಡಿದ ಕೂಡಲೇ ಕಿರುಚುತ್ತಾ ಇರಿಟೇಟ್ ಮಾಡೋ ಥರ ವರ್ತಿಸಿದ್ದಾರೆ. ಪಾಕಿಸ್ತಾನಿ ಅಭಿಮಾನಿಗಳ ಅತಿರೇಕದ ವಿಡಿಯೋ ಕೂಡ ವೈರಲ್ ಆಗಿದೆ.
ಇನ್ನು ಇದೆಲ್ಲದ್ರ ನಡುವೆ ಪಿಸಿಬಿ ಮತ್ತು ಎಸಿಸಿ ಅಧ್ಯಕ್ಷನಾಗಿರೋ ಮೊಹ್ಸಿನ್ ನಖ್ವಿ ಮತ್ತೆ ಹೊಸ ಕ್ಯಾತೆ ತೆಗೆದಿದ್ದಾರೆ. ಭಾರತ ಏಷ್ಯಾಕಪ್ ಫೈನಲ್ ಗೆದ್ರೂ ಟ್ರೋಫಿ ಕೊಡದೆ ಕಳ್ಳಾಟ ಆಡ್ತಿರೋ ನಖ್ವಿ ಈಗ ಕಿರಿಯರ ತಂಡದ ಮೇಲೂ ಕಿರಿಕ್ ತೆಗೆದಿದ್ದಾರೆ. ನಖ್ವಿ ಕೈಯಿಂದ ರನ್ನರ್ ಅಪ್ ಮೆಡಲ್ಗಳನ್ನ ತೆಗೆದುಕೊಳ್ಳಲ್ಲ ಅಂದಿದ್ದಕ್ಕೆ ಶೇಪ್ಔಟ್ ಆಗಿ ಬೇರೆ ದಾರಿ ಹುಡ್ಕಿದ್ದಾರೆ. ಅಂದ್ರೆ ಅಂಡರ್ 19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತೀಯ ಆಟಗಾರರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಈ ಬಗ್ಗೆ ಐಸಿಸಿಗೆ ಅಧಿಕೃತ ದೂರು ನೀಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ. ಭಾರತೀಯ ಆಟಗಾರರ ವಿರುದ್ಧ ಐಸಿಸಿಗೆ ಅಧಿಕೃತವಾಗಿ ದೂರು ನೀಡಲಾಗುವುದು ಮತ್ತು ರಾಜಕೀಯ ಹಾಗೂ ಕ್ರೀಡೆಯನ್ನು ಪ್ರತ್ಯೇಕವಾಗಿ ನೋಡಬೇಕು ಎಂದಿದ್ದಾರೆ. ಆದ್ರೆ ತಮ್ಮದೇ ಆಟಗಾರರು ಮಾಡಿದ ಕುತಂತ್ರಿ ವರ್ತನೆಗಳನ್ನ ಮರೆತಂತಿದೆ. ಫೀಲ್ಡ್ನಲ್ಲಿ ಆಕ್ಷನ್ಗೆ ರಿಯಾಕ್ಷನ್ ಅನ್ನೋ ಹಾಗೇ ಭಾರತೀಯ ಪ್ಲೇಯರ್ಸ್ ವರ್ತಿಸಿದ್ದಾರೆ ಅಷ್ಟೇ. ಹಿರಿಯರ ಏಷ್ಯಾಕಪ್ನಲ್ಲೇ ಪಾಕ್ ಪ್ಲೇಯರ್ಸ್ ಎಷ್ಟೆಲ್ಲಾ ಹುಚ್ಚಾಟ ಆಡಿದ್ರು. ಈಗ ಕಿರಿಯರು ಕೂಡ ಅದನ್ನೇ ಮಾಡ್ತಿದ್ದಾರೆ. ಆದ್ರೆ ಇಂಥವಕ್ಕೆಲ್ಲಾ ಕೇರ್ ಮಾಡದ ವೈಭವ್ ಮೈದಾನದಲ್ಲಿ ಮತ್ತೆ ಅಬ್ಬರಿಸೋದನ್ನ ಕಂಟಿನ್ಯೂ ಮಾಡಿದ್ದಾರೆ. ಐಪಿಎಲ್ನಲ್ಲಿ ಹಂಡ್ರೆಡ್, ಯೂತ್ ಓಡಿಐನಲ್ಲಿ ಹಂಡ್ರೆಡ್, ಯೂತ್ ಟೆಸ್ಟ್ ನಲ್ಲಿ ಹಂಡ್ರೆಡ್, ಇಂಡಿಯಾ ಎ ಪರ ಹಂಡ್ರೆಡ್, ಸ್ಮಾಟ್ನಲ್ಲಿ ಹಂಡ್ರೆಡ್ ಹಾಗೇ ಅಂಡರ್ 19 ಏಷ್ಯಾಕಪ್ನಲ್ಲಿ ಹಂಡ್ರೆಡ್ ಆಗಿತ್ತು. ಈಗ ವಿಜಯ್ ಹಜಾರೆಯಲ್ಲೂ ಭರ್ಜರಿ ಸೆಂಚುರಿ ಬಂದಿದೆ. ಸೋ ಮುಂದಿನ ದಿನಗಳಲ್ಲಿ ಪಾಕ್ ವಿರುದ್ಧವೂ ಇಂಥದ್ದೇ ಪರ್ಫಾಮೆನ್ಸ್ ಬರ್ಬೇಕಿದೆ. ಬ್ಯಾಟಿಂಗ್ನಲ್ಲೇ ರಿವೇಂಜ್ ತೀರಿಸಿಕೊಳ್ಬೇಕಿದೆ.

ನೋಡಿರಿ

