ಸೂರ್ಯವಂಶಿ Vs ಮುಝರಬಾನಿ – ZIMಯಲ್ಲೂ ಬ್ಯಾಟಿಂಗ್ ವೈಭವ್ ಸಾಧ್ಯನಾ?
ಸಿಕಂದರ್ ರಝಾ ಭವಿಷ್ಯ ನಿಜವಾಗುತ್ತಾ?

ಭಾರತ ಮತ್ತು ಜಿಂಬಾಬ್ವೆ ನಡುವಿನ ಮೊದಲ ಟಿ-20ಐ ಪಂದ್ಯಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಸಂಜೆ ನಾಲ್ಕು ಮೂವತ್ತಕ್ಕೆ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಮ್ಯಾಚ್ ಶುರುವಾಗುತ್ತೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಪಂದ್ಯದಲ್ಲಿ ಎಲ್ಲರ ಕಣ್ಣು ಮತ್ತೊಮ್ಮೆ ವೈಭವ್ ಸೂರ್ಯವಂಶಿ ಮೇಲೆ ನೆಟ್ಟಿದೆ. ಜಿಂಬಾಬ್ವೆ ನಾಯಕ ಕೂಡ ಸೂರ್ಯವಂಶಿ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ : RO-KOಗೆ ಯುವಿ ಸ್ಥಿತಿ ಬರುತ್ತಾ? – ಸಂಜು ಕೈ ಹಿಡಿದ ಹಿಟ್ಮ್ಯಾನ್
ಕ್ರಿಕೆಟ್ ಲೋಕದಲ್ಲಿ ಸೆನ್ಸೇಷನಲ್ ಸ್ಟಾರ್ ಆಗಿ ಸದ್ದು ಮಾಡಿ ಟೀಂ ಇಂಡಿಯಾ ಮೆನ್ಸ್ ಸೀನಿಯರ್ಸ್ ತಂಡಕ್ಕೆ ಸೆಲೆಕ್ಟ್ ಆದವ್ರು ವೈಭವ್ ಸೂರ್ಯವಂಶಿ. ಜಗತ್ತಿನ ದಿಗ್ಗಜ ಬೌಲರ್ಗಳ ಎದುರಲ್ಲಿ ಫಿಯರ್ಲೆಸ್ ಆಗಿ ಬ್ಯಾಟಿಂಗ್ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದವ್ರು. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕೆ ಕಾಲಿಟ್ಟ ಬಾಸ್ ಬೇಬಿ ಇಂಗ್ಲೆಂಡ್ ಸರಣಿಯಲ್ಲಿ ಮೈದಾನಕ್ಕೂ ಇಳಿದಿದ್ರು. ಆಂಗ್ಲರ ನಾಡಿನಲ್ಲಿ ಮೂರು ಪಂದ್ಯಗಳನ್ನ ಆಡಿದ್ರೂ ಬಿಗ್ ಸ್ಕೋರ್ ಬಂದಿಲ್ಲ. ಈಗ ಜಿಂಬಾಬ್ವೆಯಲ್ಲಿ ಸೂರ್ಯವಂಶಿ ಅಬ್ಬರಿಸ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ.
ಜಿಂಬಾಬ್ವೆ ಸರಣಿಯಲ್ಲಿ ಸೂರ್ಯವಂಶಿ ಟ್ರೆಂಡ್!
ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾರತದ ಪರ ವೈಭವ್ ಸೂರ್ಯವಂಶಿ ಓಪನರ್ ಆಗಿ ಇನ್ನಿಂಗ್ಸ್ ಆರಂಭ ಮಾಡ್ತಾರೆ. ಅದೂ ಅಲ್ದೇ ತಂಡದಲ್ಲಿ ಸಂಜು ಸ್ಯಾಮ್ಸನ್ ಕೂಡ ಇಲ್ಲದೇ ಇರೋದ್ರಿಂದ ಅಭಿಷೇಕ್ ಶರ್ಮಾ ಜೊತೆ ವೈಭವ್ ಇನ್ನಿಂಗ್ಸ್ ಆರಂಭಿಸೋದು ಪಕ್ಕಾ ಆಗಿದೆ. ಈಗಾಗ್ಲೇ ಇಂಗ್ಲೆಂಡ್ ಪ್ರವಾಸದಲ್ಲಿ ಮೂರು ಪಂದ್ಯಗಳನ್ನ ಆಡಿದ್ರೂ ಮೂರೂ ಪಂದ್ಯಗಳೂ ಸೇರಿ 50 ರನ್ಸ್ ಬಂದಿಲ್ಲ. ಹೀಗಾಗಿ ಜಿಂಬಾಬ್ವೆಯಲ್ಲಿ ವೈಭವ್ ಬ್ಯಾಟಿಂಗ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನ ಇಡಲಾಗಿದೆ. ಇನ್ನು ಅಂಡರ್ 19 ವಿಶ್ವಕಪ್ನಲ್ಲಿ ಜಿಂಬಾಬ್ವೆ ವಿರುದ್ಧ ಒಂದು ಪಂದ್ಯ ಆಡಿದ್ದ ವೈಭವ್ 24 ಬಾಲಲ್ಲೇ ಅರ್ಧಶತಕ ಬಾರಿಸಿದ್ರು. ಹೀಗಾಗಿ ಮತ್ತೊಮ್ಮೆ ಜಿಂಬಾಬ್ವೆ ವಿರುದ್ಧ ಬಿಗ್ ಇನ್ನಿಂಗ್ಸ್ ನಿರೀಕ್ಷೆ ಮಾಡಲಾಗಿದೆ. ಇನ್ನು ವೈಭವ್ ಆಟವನ್ನ ಜಿಂಬಾಬ್ವೆ ನಾಯಕ ಕೂಡ ಕೊಂಡಾಡಿದ್ದಾರೆ.
ಜನರೇಷನಲ್ ಟ್ಯಾಲೆಂಟ್.. ಭವಿಷ್ಯದ ಸ್ಟಾರ್ ಪ್ಲೇಯರ್!
ಇನ್ನು ವೈಭವ್ ಸೂರ್ಯವಂಶಿ ಬಗ್ಗೆ ಮಾತ್ನಾಡಿರೋ ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಾಝಾ ವೈಭವ್ರನ್ನ ಜನರೇಷನಲ್ ಟ್ಯಾಲೆಂಟ್ ಎಂದಿದ್ದಾರೆ. 15 ವರ್ಷದ ಬಾಲಕನೊಬ್ಬ ಹಿರಿಯರ ತಂಡದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡೋದು ಸಣ್ಣ ವಿಚಾರವಲ್ಲ. ವೈಭವ್ ಬಳಿ ತುಂಬಾ ಟ್ಯಾಲೆಂಟ್ ಇದೆ. ಒಳ್ಳೆಯ ಮಾರ್ಗದರ್ಶನ ಸಿಕ್ಕರೆ ಭವಿಷ್ಯದಲ್ಲಿ ದೊಡ್ಡ ಸ್ಟಾರ್ ಆಟಗಾರನಾಗಿ ಬೆಳೆಯುತ್ತಾರೆ ಎಂದಿದ್ದಾರೆ. ಹಾಗೇ ಒಂದೆರಡು ಪಂದ್ಯಗಳ ಫೇಲ್ಯೂರ್ಗೆ ಟೀಕೆ ಮಾಡೋದು ಸರಿಯಲ್ಲ ಎಂದಿದ್ದಾರೆ. ಹೀಗೆ ಜಿಂಬಾಬ್ವೆಯಲ್ಲೂ ವೈಭವ್ ಹೆಸರು ಸದ್ದು ಮಾಡ್ತಿದ್ರೆ ಅತ್ತ ಜಿಂಬಾಬ್ವೆ ಬೌಲರ್ ಬ್ಲೆಸ್ಸಿಂಗ್ ಮುಝರಾಬಾನಿ ಬೌಲಿಂಗ್ ಕೂಡ ಚರ್ಚೆಯಾಗ್ತಿದೆ.
ಮುಝರಾಬಾನಿ ವಿರುದ್ಧವೂ ಸಿಡಿಯುತ್ತಾರಾ ಸೂರ್ಯವಂಶಿ?
ಜೋಫ್ರಾ ಆರ್ಚರ್ ಸೇರಿದಂತೆ ಸಾಕಷ್ಟು ದಿಗ್ಗಜ ಬೌಲರ್ಸ್ ಎದುರು ಲೀಲಾಜಾಲವಾಗಿ ಬ್ಯಾಟಿಂಗ್ ಮಾಡಿರೋ ಸೂರ್ಯವಂಶಿಗೆ ಈಗ ಜಿಂಬಾಬ್ವೆಯಲ್ಲಿ ಹೊಸ ಚಾಲೆಂಜ್ ಇದೆ. 6.8 ಅಡಿ ಎತ್ತರದ ಬ್ಲೆಸ್ಸಿಂಗ್ ಮುಜರಾಬಾನಿಯ ಬೌಲಿಂಗ್ ಎದುರಿಸೋ ಸವಾಲಾಗಿದೆ. ಮುಜರಬಾನಿಯ 6.8 ಅಡಿ ಎತ್ತರವೇ ಅವರಿಗೆ ಪ್ಲಸ್ ಪಾಯಿಂಟ್. ಅದು ಪಿಚ್ನಿಂದ ಎಕ್ಸ್ಟ್ರಾ ಮತ್ತು ಡೇಂಜರಸ್ ಬೌನ್ಸ್ ನೀಡುತ್ತದೆ. ಇದನ್ನು ಗೆಸ್ ಮಾಡುವುದು ಯಾವುದೇ ಯಂಗ್ ಬ್ಯಾಟ್ಸ್ಮನ್ಗೆ ಸುಲಭವಲ್ಲ. ಆರ್ಚರ್ ಬಳಿ ಸ್ಪೀಡ್ ಮತ್ತು ಸ್ವಿಂಗ್ ಇದ್ದರೆ, ಮುಜರಬಾನಿ ಬ್ಯಾಟ್ಸ್ಮನ್ನ ಎದೆ ಹಾಗೂ ಹೆಲ್ಮೆಟ್ಗೆ ಟಾರ್ಗೆಟ್ ಮಾಡಿ ಬಾಲ್ ಎಸೆಯುವ ಮಾಸ್ಟರ್ ಮೈಂಡ್. ಹೀಗಾಗಿ ಮುಜರಾಬಾನಿ ವರ್ಸಸ್ ಸೂರ್ಯವಂಶಿ ಬ್ಯಾಟಲ್ ಕೂಡ ಕುತೂಹಲ ಮೂಡಿಸಿದೆ.

ನೋಡಿರಿ

