ಟಾರ್ಗೆಟ್ ಆದ್ರಾ ವೈಭವ್? , ವಿಕೆಟ್ ತೆಗೆದು ಕೇಕೆ ಬೇಕಾ? – ಸ್ಟಾರ್ ಬೌಲರ್‌ಗಳ ವಿಚಿತ್ರ ಬಯಕೆ!

ಟಾರ್ಗೆಟ್ ಆದ್ರಾ ವೈಭವ್? , ವಿಕೆಟ್ ತೆಗೆದು ಕೇಕೆ ಬೇಕಾ? – ಸ್ಟಾರ್ ಬೌಲರ್‌ಗಳ ವಿಚಿತ್ರ ಬಯಕೆ!

ಕೆಜಿಎಫ್‌ನಲ್ಲಿ ಹೇಗೆ ಗರುಡುನ ಹೊಡೆಯೋಕೆ ಕಾಯ್ತೋ ಇದ್ರೂ, ಅದೇ ತರ ಐಪಿಎಲ್‌ನಲ್ಲಿ 15 ವರ್ಷದ ವೈಭವ್ ಸೂರ್ಯವಂಶಿಯನ್ನ ಹೊಡೆಯೋಕೆ ಬೌಲರ್‌ಗಳು ಕಾಯುತ್ತಿದ್ದಾರೆ. ವೈಭವ್ ವಿಕೆಟ್ ಬೀಳುತ್ತಿದ್ದಂತೆ ಕುಣಿದು ಕುಪ್ಪಳಿಸಿ ಚಿತ್ರ,ವಿಚಿತ್ರವಾಗಿ ವರ್ತಿಸುತ್ತಿದ್ದಾರೆ.. ಸಿನಿಯರ್‌ಗಳಾಗಿ ಒಬ್ಬ 15 ವರ್ಷದ ಹುಡುಗನ ವಿಕೆಟ್ ತೆೆಗೆದು ವರ್ತಿಸೋ ಅವಶ್ಯಕತೆ ಏನಿದೆ ಅನ್ನೋ ಚರ್ಚೆ ಆಗ್ತಿದೆ. ಅಷ್ಟೇ ಅಲ್ಲ ಬೌಲರ್‌ಗಳ ಮೇಲೆ ಫ್ಯಾನ್ಸ್‌ಗಳು ಸಿಟ್ಟಾಗಿದ್ದಾರೆ..

15 ವರ್ಷದ ಸೂರ್ಯವಂಶಿ ಐಪಿಎಲ್‌ ಮಿಂಚುತ್ತಿದ್ದಾರೆ. ಲಾಸ್ಟ್ ಸೀಸನ್​ನಲ್ಲಿ ಐಪಿಎಲ್ ಡೆಬ್ಯೂ ಮ್ಯಾಚಲ್ಲಿ ರಾಜಸ್ಥಾನ ರಾಯಲ್ಸ್ ಪರ ಸಿಕ್ಸ್ ಮೂಲಕ ಕೆರಿಯರ್ ಸ್ಟಾರ್ಟ್ ಮಾಡಿದ್ದ ವೈಭವ್ 35 ಬಾಲ್​ಗಳಲ್ಲೇ ಸೆಂಚುರಿ ಹೊಡೆದಿದ್ರು. ಈ ಸೀಸನ್‌ನಲ್ಲಿ ಎಸ್‌ಆರ್‌ಹೆಚ್‌ ವಿರುದ್ಧದ ಪಂದ್ಯದಲ್ಲಿ 37 ಎಸೆತಗಳಲ್ಲೇ ಆಫ್ ಸೆಂಚುರಿ ಬಾರಿಸಿದ್ರು. 15 ನೇ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಮಟ್ಟದ ಬೌಲರ್‌ಗಳನ್ನೂ ಕೇರ್ ಮಾಡದೆ ಫಿಯರ್​ಲೆಸ್ ಆಗಿ ಬ್ಯಾಟ್ ಮಾಡ್ತಿರೋದೇ ಎಲ್ಲರ ಹುಬ್ಬೇರಿಸಿದೆ. ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರರು ಕೂಡ ವಂಡರ್ ಬಾಯ್‌ಯನ್ನ ಗುಣಗಾನ ಮಾಡ್ತಿದ್ದಾರೆ. ಐಪಿಎಲ್‌, ಅಂಡರ್-19 ವಿಶ್ವಕಪ್ ಫೈನಲ್, ಅಂಡರ್-19 ಯೂತ್ ಟೆಸ್ಟ್ , ಅಂಡರ್-19 ಏಷ್ಯಾ ಕಪ್ , ಸೈಯದ್ ಮುಷ್ತಾಕ್ ಅಲಿ ಟಿ20, ವಿಜಯ್ ಹಜಾರೆ ಟ್ರೋಫಿ   ಹೀಗೆ ಎಲ್ಲಾ ಫಾರ್ಮೆಟ್​ಗಳಲ್ಲೂ ಶತಕದ ಮೂಲಕವೇ ಕ್ರಿಕೆಟ್ ಜಗತ್ತಿಗೆ ಅತಿದೊಡ್ಡ ಮೆಸೇಜ್ ಪಾಸ್ ಮಾಡ್ತಿದ್ದಾರೆ. ಬುಮ್ರಾ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್‌ನಂತಹ ಬೌಲರ್‌ಗಳನ್ನು ಧ್ವಂಸ ಮಾಡುತ್ತಿದ್ದಾರೆ.   ಇಂತಹ ಯಂಗ್ ಗನ್ ಆಟ ನೋಡಿ ಎಲ್ಲಾ ಖುಷಿ ಪಡುತ್ತಿದ್ದಾರೆ. ಆದ್ರೆ ಬೌಲರ್‌ಗಳು ಮಾತ್ರ ವೈಭವ್‌ನ ಟಾರ್ಗೆಟ್ ಮಾಡ್ತಿದ್ದಾರೆ.. ಸೂರ್ಯವಂಶಿ ವಿಕೆಟ್ ತೆಗೆದ್ರೆ  ಕ್ರಿಕೆಟ್‌ನಲ್ಲಿರೋ ಎಲ್ಲಾ ದಾಖಲೆಯನ್ನ ಉಡೀಸ್ ಮಾಡಿದ್ವಿ ಅನ್ನೋ ರೇಂಜ್‌ಗೆ ವಿಕೆಟ್ ತೆೆಗೆದ ಮೇಲೆ ಕೆಲ ಬೌಲರ್‌ಗಳು ವಿಚಿತ್ರ ವರ್ತನೆ ಮಾಡುತ್ತಿದ್ದಾರೆ.  ಜೀಮಿಸನ್ ಅತಿರೇಕರ ವರ್ತನೆ ಬಗ್ಗೆ ಈಗ ಸಾಕಷ್ಟು ಚರ್ಚೆ ಆಗ್ತಿದೆ.

ಡಿಸಿ ವಿರುದ್ಧಧ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ  ಕೇವಲ 4 ರನ್‌ಗಳಿಗೆ ಔಟಾದರು. ಡಿಸಿ ತಂಡದ ನ್ಯೂಜಿಲೆಂಡ್ ವೇಗಿ ಜೇಮಿಸನ್ ಅತ್ಯುತ್ತಮ ಯಾರ್ಕರ್ ಎಸೆದು ಸೂರ್ಯವಂಶಿಯನ್ನು ಔಟ್ ಮಾಡಿದರು. ಅವರ ವಿಕೆಟ್ ಪಡೆದ ನಂತರ ಜೇಮಿಸನ್ ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ಮಾಡಿದರು. ಸೂರ್ಯವಂಶಿ ಮುಂದೆ ಚಪ್ಪಾಳೆ ತಟ್ಟಿ, ವಿಚಿತ್ರವಾಗಿ ಕಣ್ಣು ಬಿಟ್ಟು  15 ವರ್ಷದ ಬಾಲಕ ಸೂರ್ಯವಂಶಿಯನ್ನ ಹೊರಗೆ ಕಳುಹಿಸಿದ್ರು. ಇದ್ದಕ್ಕೆ ವೈಭವ್ ಯಾವುದೇ ಪ್ರತಿಕ್ರಿಯೇ ನೀಡದೆ ಹೊರ ಹೋದ್ರು. ಒಬ್ಬ 15 ವರ್ಷದ ಬ್ಯಾಟ್ಸಮನ್ ಔಟ್ ಆಗಿದ್ದಕ್ಕೆ 30 ವರ್ಷದ ಬೌಲರ್ ಔಟ್ ವಿಚಿತ್ರ ವರ್ತನೆ ಮಾಡಿದ್ದು ಸರಿ ಅಲ್ಲ ಅಂತ ಜೇಮಿಸನ್‌ಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಬಿಸಿಸಿಐ ಇದ್ದಕ್ಕೆ ಖಡಕ್ ಎಚ್ಚರಿಕೆ ಕೊಟ್ಟು, ಒಂದು ಡಿಮೆರಿಟ್ ಪಾಯಿಂಟ್ ನೀಡಿದೆ.

ವೈಭವ್‌ಗೆ ಭಯ ಬಿದ್ದ ಜೇಮಿಸನ್‌

ಇನ್ನು ಜೇಮಿಸನ್ ತಾನು ಅಷ್ಟೊಂದು ಆಕ್ರಮಣಕಾರಿಯಾಗಿ ಸಂಭ್ರಮಿಸಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.  ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರೂ ನಾನು 15 ವರ್ಷದ ಹುಡುಗನಿಗೆ ಚೆಂಡೆಸೆಯಲು ಹೆದರಿದ್ದೇನೆ. ನನ್ನ ಜೀವನದಲ್ಲೇ ಒಬ್ಬ ಬಾಲಕನಿಗೆ ನಾನು ಎಂದಿಗೂ ಈ ಮಟ್ಟಿಗೆ ನಾನು ಹೆದರಿರಲಿಲ್ಲ ಎಂದು   ಜೇಮಿಸನ್, ವೈಭವ್ ಸೂರ್ಯವಂಶಿ ವಿಕೆಟ್ ಬಿದ್ದಿದ್ದಕ್ಕೆ ನಾನು ಖುಷಿಯಲ್ಲಿ ನಾನು ಆ ರೀತಿ ಸಂಭ್ರಮಿಸಿದ್ದೆ ಅಂತ ಹೇಳಿದ್ದಾರೆ.

ಟೀಕೆ ವ್ಯಕ್ತವಾಗುತ್ತಿದ್ದಂತೆ ಜೇಮಿಸನ್ ವರಸೆ ಬದಲಿದ್ದಾರೆ. ಆದ್ರೆ ಒಬ್ಬ ಸ್ಟಾರ್ ಬೌಲರ್‌ ಆಗಿ ಈ ತರ ವರ್ತನೆ ಸರಿಯಲ್ಲ.. ವೈಭಬ್‌ ಒಳ್ಳೆ ಬ್ಯಾಟ್ಸಮನ್ ಅವರ ವಿಕೆಟ್‌ ತೆಗೆದಿದ್ದಕ್ಕೆ ಖುಷಿ ಪಡೋದು ಸಹಜ. ಆದ್ರೆ ಆ ಖುಷಿ ಹೆದರಿಸುವಂತೆ ಇರಬಾರದು.. ಆ ಖುಷಿ  ನೋಡಿ ಬೇರೆಯವರಿಗೆ ನೋವು ಆಗಬಾರದು.. ಬೌಲರ್‌ಗಳ ವರ್ತನೆ ನೋಡಿದ್ರೆ ವೈಭವ್ ಎಷ್ಟು ಸ್ಟ್ರಾಂಗ್ ಆಗಿ ಬೆಳೆಯುತ್ತಿದ್ದಾರೆ. ಇವರ ಮೇಲೆ ನಮ್ಮ ದೇಶದ ಬೌಲರ್ ಮಾತ್ರ ಅಲ್ಲ ಬೇರೆ ದೇಶದ ಬೌಲರ್‌ಗಳು ಹೇಗೆ ಕಣ್ಣು ಇಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತೆ.

Kishor KV